Site icon Vistara News

₹18 ಲಕ್ಷಕ್ಕೆ ಮಾರಾಟವಾಯಿತು ʼಚಾಮುಂಡಿ ಎಕ್ಸ್‌ಪ್ರೆಸ್ʼ

ಚಾಮುಂಡಿ ಎಕ್ಸ್‌ಪ್ರೆಸ್ ಹೋರಿ

ಶಿವಮೊಗ್ಗ: ಹೋರಿ ಹಬ್ಬದಲ್ಲಿ ರಾಜ್ಯಾದ್ಯಂತ ಹೆಸರು ಮಾಡಿ, ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿರುವ ಚಾಮುಂಡಿ ಎಕ್ಸ್‌ಪ್ರೆಸ್‌ ಹೋರಿ ದಾಖಲೆಯ ₹18 ಲಕ್ಷಕ್ಕೆ ಮಾರಾಟವಾಗಿದೆ. ಶಿವಮೊಗ್ಗ ಜಿಲ್ಲೆ ಸಮನವಳ್ಳಿ ಗ್ರಾಮದ ಪ್ರಸನ್ನಕುಮಾರ್ ಎಂ. ಸಮನವಳ್ಳಿ ಎಂಬುವವರು ಖರೀದಿ ಮಾಡಿದ್ದಾರೆ.

ಕೆಲವು ದಿನಗಳ ಹಿಂದೆ ಬಾಗಲಕೋಟೆ ಜಿಲ್ಲೆ ರಬಕವಿ-ಬನಹಟ್ಟಿ ತಾಲೂಕಿನ ಚಿಮ್ಮಡ ಗ್ರಾಮದ ಶಿವಲಿಂಗಪ್ಪ ಹಾಗೂ ಮಾಯಪ್ಪ ಸಹೋದರರು ಸಾಕಿದ್ದ ಎತ್ತುನ್ನು ₹11.50 ಲಕ್ಷಕ್ಕೆ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಇಟ್ನಳ್ಳಿ ಗ್ರಾಮದ ಸದಾಶಿವ ಡಾಂಗೆ ಎನ್ನುವವರು ಖರಿದಿಸಿ ದಾಖಲೆ ಬರೆದಿದ್ದರು. ಈಗ ₹18 ಲಕ್ಷಕ್ಕೆ ಹೋರಿಯನ್ನು ಖರೀದಿಸಿ ಹೊಸ ದಾಖಲೆ ಸೃಷ್ಟಿಸಿದ್ದಾರೆ.

ಸಮಾಜ ಸೇವಕ ಪ್ರಸನ್ನಕುಮಾರ್ ಎಂ. ಸಮನವಳ್ಳಿ

ಹೋರಿ ಹಬ್ಬದ ಅಖಾಡ ಯಾವುದೇ ಇರಲಿ, ಚಾಮುಂಡಿ ಎಕ್ಸ್‌ಪ್ರೆಸ್ ಕಾಲಿಟ್ರೆ ಅದು ಗೆಲ್ಲುವುದು ಖಚಿತ. ಅಭಿಮಾನಿಗಳಿಗೆ ಎಲ್ಲಿಲ್ಲದ ಉತ್ಸಾಹವೂ ಕೂಡ.

ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಅಭಿಮಾನಿ ಬಳಗವನ್ನು ಹೊಂದಿರುವ ಹೋರಿಯು ಬಹುತೇಕ ಎಲ್ಲಾ ಹೋರಿ ಹಬ್ಬಗಳಲ್ಲೂ ಬಂಪರ್ ಬಹುಮಾನ ಪಡೆದಿದೆ. ಈ ಹೋರಿಯ ವಿಶೇಷ ಎಂದರೆ, ಅಖಾಡದಲ್ಲಿ ಬಲೂಲ್, ಜೂಲಗಳನ್ನು ಸಿಂಗರಿಸಿಕೊಂಡು ಯಾರೊಬ್ಬರ ಕೈಗೂ ಸಿಗದೇ ಓಡುತ್ತದೆ. ಆದರೆ ಮನೆಯಲ್ಲಿ ಮಾತ್ರ ಸೌಮ್ಯ ಸ್ವಭಾದಿಂದ ಇರುತ್ತದೆ.

ಇದನ್ನೂ ಓದಿ: ರೈತ ಹೂಡಿದ ಹಣ ಆ ಎತ್ತಿನಿಂದ 6 ವರ್ಷದಲ್ಲಿ 25 ಪಟ್ಟು ಹೆಚ್ಚಳವಾಯಿತು!

Exit mobile version