Site icon Vistara News

Chandra Grahan 2022 | ಬರಿಗಣ್ಣಿನಿಂದಲೂ ನೋಡಬಹುದು ಚಂದ್ರ ಗ್ರಹಣ; ಕಣ್ಣಿಗಿಲ್ಲ ಯಾವುದೇ ಹಾನಿ

ಜವಹಾರ್‌ಲಾಲ್‌ ನೆಹರೂ ತಾರಾಲಯ

ಬೆಂಗಳೂರು: ಸೂರ್ಯ ಗ್ರಹಣದ ಬಳಿಕ ಚಂದ್ರನಿಗೆ ರಾಹುಗ್ರಸ್ತ ಪೂರ್ಣಗ್ರಾಸಗ್ರಸ್ತೋದಯ ಗ್ರಹಣವು (Chandra Grahan 2022) ಮಂಗಳವಾರ ಸಂಭವಿಸಲಿದೆ. ನಮ್ಮ ರಾಜ್ಯ ಸೇರಿದಂತೆ ದೇಶಾದ್ಯಂತ ಭಾಗಶಃ ಚಂದ್ರ ಗ್ರಹಣ ಗೋಚರಿಸಲಿದೆ. ಕೋಲ್ಕತ್ತಾ, ಪಟನಾ, ಗುವಾಹಟಿ ಮತ್ತಿತರ ನಗರಗಳಲ್ಲಿ ಪೂರ್ಣ ಚಂದ್ರಗ್ರಹಣ ನೋಡಬಹುದು. ಇದು ಈ ವರ್ಷದ ಕೊನೆಯ ಚಂದ್ರ ಗ್ರಹಣವಾಗಿದೆ.

ಗ್ರಹಣದ ಈ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ನೆಹರು ತಾರಾಲಯದಲ್ಲಿ ಈ ಬಾರಿ ಯಾವುದೇ ವ್ಯವಸ್ಥೆಯನ್ನು ಮಾಡಿಲ್ಲ. ಕೇವಲ ಯ್ಯೂಟೂಬ್‌ ಸ್ಟ್ರೀಮಿಂಗ್‌ಗಷ್ಟೇ ಸೀಮಿತವಾಗಿದೆ. ಸೂರ್ಯ ಗ್ರಹಣವಾದ 15 ದಿನಕ್ಕೆ ಚಂದ್ರ ಗ್ರಹಣ ಆಗುವುದು ಸಹಜ. ಸುಮಾರು 20 ನಿಮಿಷ ಚಂದ್ರ ಗ್ರಹಣ ಗೋಚರವಾಗಲಿದೆ ಎಂದು ನೆಹರೂ ತಾರಾಲಯ ವಿಜ್ಞಾನಿ ಆನಂದ್ ಮಾಹಿತಿ ನೀಡಿದ್ದಾರೆ.

ಚಂದ್ರೋದಯಕ್ಕೂ ಮೊದಲೇ ಗ್ರಹಣ ಸಂಭವಿಸುತ್ತಿದ್ದು, ಜನರು ಬರಿಗಣ್ಣಿನಿಂದ ಚಂದ್ರ ಗ್ರಹಣ ವೀಕ್ಷಣೆ ಮಾಡಬಹುದು. ಚಂದ್ರ ಗ್ರಹಣ ವೀಕ್ಷಣೆಯಿಂದ ಯಾವುದೇ ಹಾನಿಯಿಲ್ಲ. ಹುಣ್ಣಿಮೆ ಚಂದ್ರನಿಗೆ ಸ್ವಲ್ಪ ನೆರಳು ಬಿದ್ದಂತೆ ಗೋಚರವಾಗಲಿದೆ. ತಾರಾಲಯದ ಯೂಟ್ಯೂಬ್ ಮೂಲಕ ಲೈವ್ ವೀಕ್ಷಿಸಬಹುದು. ಲೈವ್ ವೀಕ್ಷಣೆ ಸಂದರ್ಭದಲ್ಲೇ ಪ್ರಶ್ನೆಗಳು ಸಹ ಕೇಳಬಹುದೆಂದು ತಿಳಿಸಿದ್ದಾರೆ.

ಇದನ್ನೂ ಓದಿ | Chandra Grahan 2022 | ಚಂದ್ರ ಗ್ರಹಣ ಕಾಲದಲ್ಲಿ ದೇವರಿಗಿಲ್ಲ ಪೂಜೆ-ಪುನಸ್ಕಾರ; ಭಕ್ತರಿಗಿಲ್ಲ ದರ್ಶನ ಭಾಗ್ಯ

Exit mobile version