ಬೆಂಗಳೂರು: ಚಂದ್ರನ ಅಂಗಳದಲ್ಲಿ ಇತಿಹಾಸ ಬರೆಯಲು ಇಸ್ರೋ (ISRO) ಸಜ್ಜಾಗಿದೆ. ಚಂದ್ರನಿಂದ ಕೆಲವೇ ಕಿಲೋಮೀಟರ್ ದೂರದಲ್ಲಿರುವ ನೌಕೆಯು ಬುಧವಾರ (ಆಗಸ್ಟ್ 23) ಸಂಜೆ 6.4ಕ್ಕೆ ಸಾಫ್ಟ್ ಲ್ಯಾಂಡ್ ಆಗಲಿದೆ ಎಂದು ಇಸ್ರೋ ತಿಳಿಸಿದೆ. ಹಾಗಾಗಿ, ಜಗತ್ತಿನ ಕಣ್ಣುಗಳು ಈಗ ಭಾರತದ ಚಂದ್ರಯಾನದ ಮೇಲಿವೆ. ಇನ್ನು ಚಂದ್ರಯಾನ 3 ಲೈವ್ (Chandrayaan 3) ವೀಕ್ಷಣೆಗೆ ಇಸ್ರೋ ಹಲವು ವೇದಿಕೆಗಳ ಮೂಲಕ ಅವಕಾಶ ನೀಡಿದೆ. ಹಾಗೆಯೇ, ಸಾಫ್ಟ್ ಲ್ಯಾಂಡ್ ಆದ ಬಳಿಕ ಏನಾಗಲಿದೆ ಎಂಬುದರ ಮಾಹಿತಿಯೂ ಇಲ್ಲಿದೆ.
ನೇರಪ್ರಸಾರ ಆರಂಭ ಯಾವಾಗ?
ಎಲ್ಲರೂ ಕೌತುಕದಿಂದ ಕಾಯುವ ಚಂದ್ರಯಾನದ-3ರ ಸಾಫ್ಟ್ ಲ್ಯಾಂಡಿಂಗ್ ಆಗಸ್ಟ್ 23, 2023 ರಂದು ಸಂಜೆ 5.27 ರಿಂದ ನೇರ ಪ್ರಸಾರವಾಗಲಿದೆ. ಇಸ್ರೋದ ಅಧಿಕೃತ ವೆಬ್ಸೈಟ್, ಅದರ ಅಧಿಕೃತ ಯೂಟ್ಯೂಬ್ ಚಾನೆಲ್, ಅದರ ಅಧಿಕೃತ ಫೇಸ್‌ಬುಕ್ ಪೇಜ್ ಮತ್ತು ಡಿಡಿ ನ್ಯಾಷನಲ್ ಟಿವಿ ಚಾನೆಲ್ ಸೇರಿದಂತೆ ಅನೇಕ ವೇದಿಕೆಗಳಲ್ಲಿ ನೇರ ಪ್ರಸಾರವಾಗಲಿದೆ. ಆಗಸ್ಟ್ 23, 2023 ರಂದು ಸಂಜೆ 6:04 ರ ಸುಮಾರಿಗೆ ಚಂದ್ರಯಾನ 3 ಸಾಫ್ಟ್ ಲ್ಯಾಂಡ್ ಆಗಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ತಿಳಿಸಿದೆ.
ಇದನ್ನೂ ಓದಿ: Chandrayana-3 : ಚಂದ್ರಯಾನ ಲ್ಯಾಂಡ್ ಆಗುವ ದಿನಾಂಕ ಬದಲಾಗಲಿದೆಯಾ? ಹೊಸ ಅಪ್ಡೇಟ್ ಇಲ್ಲಿದೆ
ಲೈವ್ ವೀಕ್ಷಣೆ ಹೇಗೆ?
ಇಸ್ರೋ ವೆಬ್‌ಸೈಟ್: https://www.isro.gov.in/
ಇಸ್ರೋ ಯುಟ್ಯೂಬ್ ಚಾನೆಲ್: https://www.youtube.com/watch?v=DLA_64yz8Ss
ಫೇಸ್‌ಬುಕ್ ಲೈವ್: https://www.facebook.com/ISRO
ಮುಂದೇನಾಗುತ್ತದೆ?
ಚಂದ್ರನ ಅಂಗಳದಲ್ಲಿ ಲ್ಯಾಂಡರ್ ಹಾಗೂ ರೋವರ್ ಇಳಿಯುತ್ತಲೇ ಅಧ್ಯಯನ ಆರಂಭವಾಗುತ್ತದೆ. ಸುಮಾರು 14 ದಿನ ಲ್ಯಾಂಡರ್ ಹಾಗೂ ರೋವರ್‌ಗಳು ಅಧ್ಯಯನ ನಡೆಸಲಿವೆ. ನೌಕೆಯಿಂಧ ರೋವರ್ ಹೊರಬಂದು ಅಲ್ಲೇ ನಡೆದಾಡಿ ಮಾದರಿಗಳನ್ನು ಸಂಗ್ರಹಿಸಿಕೊಂಡು ಕೆಲವು ರಾಸಾಯನಿಕ ಪ್ರಯೋಗಗಳನ್ನು ನೆರವೇರಿಸುತ್ತದೆ. ಮೂರೂ ಯಂತ್ರಗಳಲ್ಲೂ ಅವುಗಳದೇ ಆದ ಪೇಲೋಡ್ ಹಾಗೂ ಸಾಧನಗಳಿದ್ದು, ತಮ್ಮದೇ ಆದ ರೀತಿಯಲ್ಲಿ ಪ್ರಯೋಗಗಳನ್ನು ಮಾಡಲಿವೆ. ಆರ್ಬಿಟರ್ ಚಂದ್ರನ ಕಕ್ಷೆಯಲ್ಲಿ ಸುತ್ತುತ್ತಾ ಭೂಗ್ರಹದ ಜತೆ ಸಂಪರ್ಕವಿಟ್ಟುಕೊಳ್ಳಲಿದೆ.