ಬೆಂಗಳೂರು: ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್ ಮಾಡ್ಯೂಲ್ ಸಾಫ್ಟ್ ಲ್ಯಾಂಡ್ ಆಗುವುದನ್ನು ಕಣ್ತುಂಬಿಕೊಳ್ಳಲು ದೇಶಕ್ಕೆ ದೇಶವೇ ಕಾಯುತ್ತಿದೆ. ಚಂದ್ರಯಾನ 3 (Chandrayaan 3) ಯಶಸ್ವಿಯಾಗಲಿ ಎಂದು ಜನ ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ. ಇದರ ಬೆನ್ನಲ್ಲೇ ಚಂದ್ರನಿಂದ ಕೇವಲ 70 ಕಿಲೋಮೀಟರ್ ದೂರದಿಂದ ಲ್ಯಾಂಡರ್ ಮಾಡ್ಯೂಲ್ (Lander Module) ಫೋಟೊಗಳನ್ನು ತೆಗೆದು ಕಳುಹಿಸಿದೆ. ಫೋಟೊಗಳನ್ನು ಕೊಲಾಜ್ ಮಾಡಲಾದ ವಿಡಿಯೊವನ್ನು ಇಸ್ರೋ ಶೇರ್ ಮಾಡಿದೆ.
“ನಿಗದಿತ ದಿನಾಂಕದಂದೇ ಚಂದ್ರಯಾನ 3 ಮಿಷನ್‌ನ ಲ್ಯಾಂಡರ್ ಇಳಿಯಲಿದೆ. ದಿನನಿತ್ಯದ ಪರಿಶೀಲನೆ ನಡೆಯುತ್ತಿದೆ. ಎಲ್ಲವೂ ಸುಗಮವಾಗಿ ನಡೆಯುತ್ತಿದೆ. ನೌಕೆಯು ಸಾಫ್ಟ್ ಲ್ಯಾಂಡ್ ಆಗಲು ಅತ್ಯುತ್ಸಾಹದಿಂದ ಕಾಯುತ್ತಿದೆ. ಆಗಸ್ಟ್ 23ರ ಸಂಜೆ 5.20ರಿಂದಲೇ ನೇರ ಪ್ರಸಾರ ಇರಲಿದೆ. ಚಂದ್ರನಿಂದ 70 ಕಿಲೋಮೀಟರ್ ದೂರದಿಂದ ಲ್ಯಾಂಡರ್ ಪೊಜಿಷನ್ ಡಿಟೆಕ್ಷನ್ ಕ್ಯಾಮೆರಾ (LPDC) ಸೆರೆಹಿಡಿದು ಕಳುಹಿಸಿದ ಫೋಟೊಗಳು ಹೀಗಿವೆ” ಎಂದು ಇಸ್ರೋ ಟ್ವೀಟ್ ಮಾಡಿದೆ.
ಇದನ್ನೂ ಓದಿ: Chandrayaan 3: ಚಂದ್ರಯಾನದ ಯಶಸ್ಸಿನಿಂದ ಭಾರತಕ್ಕೆ ಆಗುವ ಲಾಭಗಳೇನು?
ಲೈವ್ ವೀಕ್ಷಣೆ ಹೇಗೆ?
ಇಸ್ರೋ ವೆಬ್‌ಸೈಟ್: https://www.isro.gov.in/
ಇಸ್ರೋ ಯುಟ್ಯೂಬ್ ಚಾನೆಲ್: https://www.youtube.com/watch?v=DLA_64yz8Ss
ಫೇಸ್‌ಬುಕ್ ಲೈವ್: https://www.facebook.com/ISRO
ಮುಂದೇನಾಗುತ್ತದೆ?
ಚಂದ್ರನ ಅಂಗಳದಲ್ಲಿ ಲ್ಯಾಂಡರ್ ಹಾಗೂ ರೋವರ್ ಇಳಿಯುತ್ತಲೇ ಅಧ್ಯಯನ ಆರಂಭವಾಗುತ್ತದೆ. ಸುಮಾರು 14 ದಿನ ಲ್ಯಾಂಡರ್ ಹಾಗೂ ರೋವರ್‌ಗಳು ಅಧ್ಯಯನ ನಡೆಸಲಿವೆ. ನೌಕೆಯಿಂಧ ರೋವರ್ ಹೊರಬಂದು ಅಲ್ಲೇ ನಡೆದಾಡಿ ಮಾದರಿಗಳನ್ನು ಸಂಗ್ರಹಿಸಿಕೊಂಡು ಕೆಲವು ರಾಸಾಯನಿಕ ಪ್ರಯೋಗಗಳನ್ನು ನೆರವೇರಿಸುತ್ತದೆ. ಮೂರೂ ಯಂತ್ರಗಳಲ್ಲೂ ಅವುಗಳದೇ ಆದ ಪೇಲೋಡ್ ಹಾಗೂ ಸಾಧನಗಳಿದ್ದು, ತಮ್ಮದೇ ಆದ ರೀತಿಯಲ್ಲಿ ಪ್ರಯೋಗಗಳನ್ನು ಮಾಡಲಿವೆ. ಆರ್ಬಿಟರ್ ಚಂದ್ರನ ಕಕ್ಷೆಯಲ್ಲಿ ಸುತ್ತುತ್ತಾ ಭೂಗ್ರಹದ ಜತೆ ಸಂಪರ್ಕವಿಟ್ಟುಕೊಳ್ಳಲಿದೆ.