Site icon Vistara News

VISTARA TOP 10 NEWS : ಚಂದ್ರಯಾನ 3 ಸಕ್ಸೆಸ್, ಕಾವೇರಿ ಸಂಕಷ್ಟ ನಿವಾರಣೆಗೆ ಸರ್ವಪಕ್ಷ ನಿಯೋಗ ಇತ್ಯಾದಿ ಪ್ರಮುಖ ಸುದ್ದಿಗಳು

Top 10 news

1. ಚಂದ್ರಯಾನ 3 ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್ ಸಕ್ಸೆಸ್! ಇತಿಹಾಸ ಸೃಷ್ಟಿಸಿದ ಇಸ್ರೋ
ಬೆಂಗಳೂರು, ಕರ್ನಾಟಕ: ಭಾರತ ಕಳುಹಿಸಿದ್ದ ಚಂದ್ರಯಾನ 3 ನೌಕೆಯ (Chandrayaan 3) ಲ್ಯಾಂಡರ್ (Lander) ಚಂದ್ರನ ಅಂಗಳದಲ್ಲಿ ನಿಧಾನವಾಗಿ ಇಳಿಯುವಲ್ಲಿ ಯಶಸ್ವಿಯಾಗಿದೆ(Chandrayaan-3 Mission Soft-landing). ಇದರೊಂದಿಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (Indian space research organisation – ISRO) ಹೊಸ ಇತಿಹಾಸ ಸೃಷ್ಟಿಸಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ (Moon’s South Pole) ಈವರೆಗೂ ಯಾವುದೇ ರಾಷ್ಟ್ರವು ಇಂಥ ಸಾಧನೆ ಮಾಡಲು ಸಾಧ್ಯವಾಗಿರಲಿಲ್ಲ. ಹಾಗಾಗಿ, ಭಾರತದ ಈ ಸಾಧನೆಯು ವಿಶೇಷ ಮನ್ನಣೆಗೆ ಪಾತ್ರವಾಗಿದೆ. ಅಲ್ಲದೇ, ಈ ಸಕ್ಸೆಸ್‌ನೊಂದಿಗೆ ಭಾರತವು (India) ಅಮೆರಿಕ (America), ರಷ್ಯಾ (Russia) ಮತ್ತು ಚೀನಾ (China) ರಾಷ್ಟ್ರಗಳ ಸಾಲಿಗೆ ಸೇರ್ಪಡೆಯಾಗಿದೆ. ಈ ಮಧ್ಯೆ, ಚಂದ್ರಯಾನ-3 ಲ್ಯಾಂಡರ್ ಮತ್ತು ಬೆಂಗಳೂರಿನಲ್ಲಿರುವ MOX-ISTRAC ಸೆಂಟರ್ ಮಧ್ಯೆ ಸಂಪರ್ಕ ಏರ್ಪಟ್ಟಿದೆ. ಲ್ಯಾಂಡರ್‌ ತನ್ನ ಹಾರಿಜಂಟಲ್ ಕ್ಯಾಮೆರಾಗಳಿಂದ ಇಳಿಯುವಾಗ ತೆಗೆದ ಕೆಲವು ಫೋಟೋಗಳನ್ನು ಭೂಮಿಗೆ ರವಾನಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ : ಚಂದ್ರನ ಮೇಲೆ ಇಳಿದ ಬಳಿಕ ಲ್ಯಾಂಡರ್​ ಮತ್ತು ರೋವರ್​ ಏನು ಮಾಡಲಿವೆ?
ಚಂದ್ರಯಾನ ಕುರಿತ ಮತ್ತಷ್ಟು ಸುದ್ದಿಗಳಿಗಾಗಿ ಕ್ಲಿಕ್‌ ಮಾಡಿ

2. ಸಾಫ್ಟ್ ಲ್ಯಾಂಡಿಂಗ್ ಸಕ್ಸೆಸ್, ಹೊಸ ಯುಗದ ಉದಯ ಎಂದ ಪ್ರಧಾನಿ ಮೋದಿ
ಬೆಂಗಳೂರು: ಚಂದ್ರನ ಅಂಗಳದಲ್ಲಿ ಚಂದ್ರಯಾನ-3 ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್ (Chandrayaan3 Mission Soft-landing) ಮಾಡುತ್ತಿದ್ದಂತೆ ಇಸ್ರೋ ಅಧ್ಯಕ್ಷ ಎಸ್ ಸೋಮನಾಥ (ISRO President S Somanath) ಅವರು, ”ನಾವೀಗ ಚಂದ್ರನ ಮೇಲಿದ್ದೇವೆ” ಎಂದು ಹೇಳುತ್ತಿದ್ದಂತೆ, ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ದೇಶವಾಸಿಗಳನ್ನು ಉದ್ದೇಶಿ ವರ್ಚುವಲ್ ಆಗಿ ಮಾತನಾಡಿದರು. ಬ್ರಿಕ್ಸ್ ಶೃಂಗದಲ್ಲಿ ಪಾಲ್ಗೊಳ್ಳಲು ಅವರು ದಕ್ಷಿಣ ಆಫ್ರಿಕಾದಲ್ಲಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಈ ಒಂದು ಕ್ಷಣ ಅಮೂಲ್ಯ ಮತ್ತು ಅಭೂತಪೂರ್ವವಾಗಿದೆ. ಈ ಕ್ಷಣ ನವ ಭಾರತದ ಜೈಘೋಷವಾಗಿದೆ. ಈ ಕ್ಷಣ 140 ಕೋಟಿ ಜನರ ಹೃದಯ ಬಡಿತಗಳ ಶಕ್ತಿಯಾಗಿದೆ. ಅಮೃತ ಕಾಲದ ಈ ಹಂತದಲ್ಲಿ ಅಮೃತ ವರ್ಷ ಯಶಸ್ವಿಯಾಗಿದೆ. ಹೊಸ ಯುಗದ ಆರಂಭವಾಗಿದೆ ಎಂದು ಹೇಳಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.

2. ಚಂದ್ರೋತ್ಸವ ವೈಭವ; ತಾವೇ ಚಂದಮಾಮನ ಮೇಲೆ ಕಾಲಿಟ್ಟು ಧ್ವಜ ಹಾರಿಸಿದಂತೆ ಕುಣಿದಾಡಿದ ಜನ!
ಬೆಂಗಳೂರು: ಪುಟ್ಟ ಮಗುವಿನಂಥ ರೋವರ್‌ನ್ನು (Pragyaan Rover) ಒಡಲಲ್ಲಿ ಹೊತ್ತ ವಿಕ್ರಮ್‌ ಲ್ಯಾಂಡರ್‌ (Vikram Lander) ತುಂಬು ಗರ್ಭಿಣಿಗೂ ಆಯಾಸವಾಗದಷ್ಟು ಮೃದುವಾಗಿ ಚಂದ್ರನ ಮೇಲೆ ಮೆಲ್ಲಗೆ ಹೆಜ್ಜೆ ಇಡುತ್ತಿದ್ದಂತೆಯೇ ಇತ್ತ ಇಡೀ ಭಾರತವೇ ಎದ್ದು ನಿಂತು (Celebration by public) ಕುಣಿದಾಡಿತು. ಚಂದ್ರಯಾನ 3ಯ (Chandrayaan 3) ಕೊನೆಯ ಕ್ಷಣಗಳನ್ನು ಉಗುರುಕಚ್ಚುತ್ತಾ ವೀಕ್ಷಿಸುತ್ತಿದ್ದ ಜನರು ವಿಕ್ರಮ್‌ ಲ್ಯಾಂಡರ್‌ ಚಂದ್ರನ ಮೇಲೆ ಸಾಫ್ಟ್‌ ಲ್ಯಾಂಡಿಂಗ್‌ (Soft Landing) ಮಾಡುತ್ತಿದ್ದಂತೆಯೇ ಒಮ್ಮೆಗೇ ನಿರಾಳರಾಗಿ ಮತ್ತೆ ಹುಚ್ಚೆದ್ದು ಕುಣಿದರು. ಕೆಲವರು ಭಾವುಕರಾದರು, ಕೆಲವರು ಮಕ್ಕಳಂತೆ ಚಪ್ಪಾಳೆ ತಟ್ಟಿದರು. ಒಟ್ಟಿನಲ್ಲಿ ಚಂದ್ರನಲ್ಲಿ ಕಾಲಿಟ್ಟದ್ದು ತಾವೇ ಎಂಬಂತೆ ರಾಷ್ಟ್ರ ಧ್ವಜ ಬೀಸುತ್ತಾ ಮೈಮರೆತರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ: Chandrayaan 3 : ಚಂದ್ರಯಾನ ಯಶಸ್ಸಿನ ಬಗ್ಗೆ ಇಸ್ರೊ ಅಧ್ಯಕ್ಷ ಸೋಮನಾಥ್​ ಹೇಳಿದ್ದೇನು?

4. ಕರ್ನಾಟಕದ ಜಲ ಸಂಕಷ್ಟಕ್ಕೆ ಪ್ರಧಾನಿ ಬಳಿ ಸರ್ವಪಕ್ಷ ನಿಯೋಗ: ಸಹಕಾರ ಕೋರಿದ ಸಿಎಂ ಸಿದ್ದರಾಮಯ್ಯ
ಬೆಂಗಳೂರು: ರಾಜ್ಯದಲ್ಲಿ ಕಾವೇರಿ ಜಲವಿವಾದ (Cauvery water dispute) ಸೇರಿದಂತೆ ಮೇಕೆದಾಟು, ಮಹದಾಯಿ, ಕೃಷ್ಣಾ ಸಮಸ್ಯೆಗಳ ಕುರಿತು ಪ್ರಧಾನ ಮಂತ್ರಿಗಳ (PM Narendra Modi) ಬಳಿ ಸರ್ಕಾರಕ್ಕೆ ಸರ್ವಪಕ್ಷ ನಿಯೋಗ ತೆರಳೋಣ. ಇದಕ್ಕೆ ಎಲ್ಲರ ಸಹಕಾರ ಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ತಿಳಿಸಿದರು. ಇದೇ ವೇಳೆ ಕಾವೇರಿ ಜಲವಿವಾದಕ್ಕೆ ಸಂಬಂಧಪಟ್ಟಂತೆ ಸಂಕಷ್ಟ ಸೂತ್ರವನ್ನು ಅಳವಡಿಸಿಕೊಳ್ಳಬೇಕು ಎಂಬ ಅಭಿಪ್ರಾಯ ಎಲ್ಲರಿಂದ ವ್ಯಕ್ತವಾಯಿತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್​ ಮಾಡಿ.

5. ಕ್ರೀಡೆChess World Cup: ನಾಳೆಗೆ ಟೈ ಬ್ರೇಕರ್ ಕ್ಲೈಮ್ಯಾಕ್ಸ್​; ಎರಡನೇ ಸುತ್ತಿನಲ್ಲೂ ಡ್ರಾ ಸಾಧಿಸಿದ ಪ್ರಜ್ಞಾನಂದ
ಬಾಕು(ಅಜರ್‌ಬೈಜಾನ್‌): ಚಂದ್ರನ ದಕ್ಷಿಣ ಧ್ರುವದಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಚಂದ್ರಯಾನ 3(chandrayaan 3) ನೌಕೆಯನ್ನು ಇಳಿಸಿ ಇತಿಹಾಸ ಸೃಷ್ಟಿಸಿದೆ. ಅತ್ತ ಚೆಸ್ ವಿಶ್ವಕಪ್(Chess World Cup)​ನಲ್ಲಿ 2 ದಶಕಗಳ ಬಳಿಕ ಫೈನಲ್‌ ಪ್ರವೇಶಿಸಿದ ಭಾರತೀಯ ಗ್ರ್ಯಾಂಡ್ ಮಾಸ್ಟರ್ ಆರ್. ಪ್ರಜ್ಞಾನಂದ(R Praggnanandhaa) ವಿಶ್ವ ನಂ.1 ನಾರ್ವೆಯ ಮ್ಯಾಗ್ನಸ್‌ ಕಾರ್ಲ್‌ಸನ್‌(Magnus Carlsen) ವಿರುದ್ಧ ದ್ವಿತೀಯ ಸುತ್ತಿನಲ್ಲೂ ಡ್ರಾ ಸಾಧಿಸಿದ್ದಾರೆ. ಬುಧವಾರ ನಡೆದ ಜಿದ್ದಾಜಿದ್ದಿನ ದ್ವಿತೀಯ ಸುತ್ತಿನ ಪಂದ್ಯಲ್ಲಿ ಡ್ರಾ ಸಾಧಿಸಿ ಗುರುವಾರ ನಡೆಯುವ ಅಂತಿಮ ಟೈ ಬ್ರೇಕರ್ ಪಂದ್ಯದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.

6. New Education Policy: ವರ್ಷಕ್ಕೆ ಎರಡು ಬಾರಿ ಬೋರ್ಡ್ ಪರೀಕ್ಷೆ, 11- 12ನೇ ತರಗತಿಗಳಿಗೆ 2 ಭಾಷೆ

7. ಪಾಕಿಸ್ತಾನದ ಜನ ಒಳ್ಳೆಯವರು, ಅವರ ಸಂಕಟಕ್ಕೆ ಮೋದಿ ಕಾರಣ ಎಂದ ಕಾಂಗ್ರೆಸ್‌ ನಾಯಕ

8. Weather Report : ಕರಾವಳಿಯಲ್ಲಿ ಜಿಟಿ ಜಿಟಿ ಮಳೆ; ಬೆಂಗಳೂರಲ್ಲಿ ತಣ್ಣಗಾದ ವರುಣ

9. Gruha jyothi Scheme : ಇನ್ನೂ ಫ್ರೀ ಕರೆಂಟ್ ಮಾಡ್ಕೊಂಡಿಲ್ವಾ? ಎರಡೇ ನಿಮಿಷದಲ್ಲಿ ಅಪ್ಲೈ ಮಾಡಿ

10. G 20 in India : ಅಮೆರಿಕ ಅಧ್ಯಕ್ಷ ಬೈಡೆನ್‌ಗಾಗಿ ಬುಕ್‌ ಆಯ್ತು ಐಟಿಸಿ ಮೌರ್ಯ ಹೋಟೆಲ್‌ನ 400 ರೂಮ್‌!
ವೈರಲ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version