Site icon Vistara News

Chariot Falls: ಸಾವಿರಾರು ಭಕ್ತರ ನಡುವೆ ಧರೆಗುರುಳಿದ 120 ಅಡಿ ಎತ್ತರದ ತೇರು! ಭಯಾನಕ ವಿಡಿಯೋ

chariot falls anekal

ಆನೇಕಲ್‌: ಸಾವಿರಾರು ಭಕ್ತರ (Devotees) ನಡುವೆ ಸಾಗಿಬರುತ್ತಿದ್ದ 120 ಅಡಿ ಎತ್ತರದ ತೇರು (Chariot), ಬ್ಯಾಲೆನ್ಸ್‌ ತಪ್ಪಿ ಧರೆಗೆ (Chariot Falls) ಉರುಳಿದೆ. ನೋಡನೋಡುತ್ತಿದ್ದಂತೆ ಭಯಾನಕವಾಗಿ ಕೆಳಗುರುಳಿದ ಈ ತೇರಿನ ಕೆಳಗೆ ಅದೃಷ್ಟವಶಾತ್‌ ಯಾರೂ ಸಿಕ್ಕಿಹಾಕಿಕೊಂಡಿಲ್ಲ; ಸಾವುನೋವು ಸಂಭವಿಸಿಲ್ಲ. ಈ ಭಯಾನಕ ದೃಶ್ಯದ ವಿಡಿಯೋ (Viral video) ದೊರೆತಿದೆ.

ಬೆಂಗಳೂರು ಹೊರವಲಯ ಆನೇಕಲ್ (Anekal) ತಾಲ್ಲೂಕಿನ ಹೀಲಲಿಗೆ ಗ್ರಾಮದ ಕುರ್ಜು (ತೇರು) ಅನ್ನು ನೂರಾರು ವರ್ಷಗಳ ಇತಿಹಾಸ ಪ್ರಸಿದ್ಧ ಹುಸ್ಕೂರು ಮದ್ದೂರಮ್ಮ ಜಾತ್ರೆಗೆ (Huskuru Madduramma fair) ಒಯ್ಯಲಾಗುತ್ತಿತ್ತು. ಹತ್ತಾರು ಊರುಗಳಿಂದ ಹುಸ್ಕೂರಿನ ಮದ್ದೂರಮ್ಮ ಜಾತ್ರೆಗೆ ಕುರ್ಜುಗಳು ಬರುತ್ತವೆ.

ಹೀಗೆ ಹೀಲಲಿಗೆ ಗ್ರಾಮದಿಂದ ಹುಸ್ಕೂರಿಗೆ ಬರುತ್ತಿದ್ದ ತೇರನ್ನು ಎತ್ತುಗಳು ಮತ್ತು ಟ್ರಾಕ್ಟರ್‌ಗಳ ನೆರವಿನಿಂದ ಎಳೆದು ತರಲಾಗುತ್ತಿತ್ತು. ಕಮ್ಮಸಂದ್ರದ ಹೈಪರ್ ಮಾರ್ಕೆಟ್ ತಿರುವಿನಲ್ಲಿ ಈ ತೇರು ಬ್ಯಾಲೆನ್ಸ್‌ ಕಳೆದುಕೊಂಡು ಉರುಳಿಬಿದ್ದಿದೆ.

ತೇರು 120 ಅಡಿಗೂ ಹೆಚ್ಚು ಎತ್ತರವಿದ್ದು ವಾಲಿ ಬೀಳತೊಡಗಿದಾಗ ಭಕ್ತರು ಭಯಗೊಂಡು ಕಾಲು ಕಿತ್ತರು. ಆದರೆ ತೇರು ಯಾರಿಗೂ ಪರಚಿದ ಗಾಯವನ್ನೂ ಮಾಡದೆ ನೆಲಕ್ಕುರುಳಿತು. ತೇರಿನ ಸಮೀಪವೇ ನಡೆದು ಬರುತ್ತಿದ್ದ ಭಕ್ತರು ಕೊಂಚದರಲ್ಲಿ ಬಚಾವ್‌ ಆದರು. ಆದರಲ್ಲೂ ಪುಟ್ಟ ಬಾಲಕಿಯೊಬ್ಬಳು ಕೂದಲೆಳೆ ಅಂತರದಲ್ಲಿ ಬಚಾವ್ ಆಗಿದ್ದಾಳೆ. ತೇರನ್ನು ಎಳೆಯುತ್ತಿದ್ದ ಟ್ರಾಕ್ಟರ್‌ನಲ್ಲಿದ್ದವರು ಜಿಗಿದು ಬದುಕಿಕೊಂಡರು. ಎತ್ತುಗಳು ಓಡಿಹೋಗಿ ಪ್ರಾಣ ಉಳಿಸಿಕೊಂಡವು.

ಹನುಮಾನ್‌ ಚಾಲೀಸಾ ಗಲಾಟೆ; ಹಲ್ಲೆಗೊಳಗಾದ ಮುಕೇಶ್‌ ವಿರುದ್ಧವೇ ಎಫ್‌ಐಆರ್‌

ಬೆಂಗಳೂರು: ಬೆಂಗಳೂರಿನ (Bangalore News) ನಗರ್ತ ಪೇಟೆಯ ಅಂಗಡಿಯಲ್ಲಿ ಹನುಮಾನ್‌ ಚಾಲೀಸಾ (Hanuman Chalisa) ಶ್ಲೋಕ ಹಾಕಿದ ಎಂಬ ಕಾರಣಕ್ಕಾಗಿ ಹಿಂದು ವ್ಯಾಪಾರಿಯೊಬ್ಬನ (Attack on Hindu Trader) ಮೇಲೆ ಹಲ್ಲೆ ನಡೆಸಿದ್ದಕ್ಕೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಇದು ರಾಜಕೀಯ ಸ್ವರೂಪ ಪಡೆದು ದೊಡ್ಡ ಮಟ್ಟದ ಸುದ್ದಿಯಾಗಿತ್ತು. ಬಿಜೆಪಿಯ ನಾಯಕರು ಪ್ರತಿಭಟಿಸಿದ್ದರು. ಇದೀಗ ಹನುಮಾನ್ ಚಾಲೀಸಾ ಗಲಾಟೆಗೆ ಮತ್ತೊಂದು ಟ್ವಿಸ್ಟ್ ಪಡೆದುಕೊಂಡಿದೆ. ಹಲ್ಲೆಗೊಳಗಾಗಿ ದೂರು ಕೊಟ್ಟಿದ್ದ ಮುಕೇಶ್‌ ವಿರುದ್ಧವೇ ಪ್ರತಿದೂರು ದಾಖಲಾಗಿದೆ. ಇದಕ್ಕೆ ಬಿಜೆಪಿ ಆಕ್ರೋಶ ಹೊರಹಾಕಿದೆ.

ಹಲ್ಲೆಗೊಳಗಾದ ಮುಖೇಶ್ ನನಗೆ ಕನ್ನಡ ಸರಿಯಾಗಿ ಬರುವುದಿಲ್ಲ, ಹೀಗಾಗಿ ಅಸಲಿ ಸಂಗತಿ ಆ ದಿನ ಹೇಳಿರಲಿಲ್ಲ ಎಂದಿದ್ದಾನೆ. ಪಿಎಸ್‌ಐ ಭಗವಂತಯ್ಯ ಅವರ ಮುಂದೆ ಮುಂದುವರಿದ ಹೇಳಿಕೆ ನೀಡಿರುವ ಮುಕೇಶ್, ಹನುಮಾನ್ ಚಾಲೀಸಾ ಹಾಕಿದಕ್ಕೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿದ್ದಾನೆ.

ಪ್ರತಿ ದೂರು

ಬಂಧಿತರ ಪೈಕಿ ಸುಲೇಮಾನ್ ತಾಯಿ ಈ ಹಿಂದೆಯೇ ದೂರು ನೀಡಿದ್ದರು. ನ್ಯಾಯಾಲಯದ ಅನುಮತಿ ಮೇರೆಗೆ ಎನ್‌ಸಿಆರ್ ಈಗ ಎಫ್‌ಐಆರ್ ಆಗಿ ಬದಲಾಗಿದೆ. ಅದರಲ್ಲಿ ಸುಲೇಮಾನ್ ತಾಯಿ ಹಲವು ಆರೋಪಗಳನ್ನು ಮಾಡಿದ್ದಾರೆ. ಆ ಪ್ರಕಾರ ಮೊಬೈಲ್ ಅಂಗಡಿಯ ಪಕ್ಕದಲ್ಲಿಯೇ ಮಸೀದಿ ಇದೆ. ರಂಜಾನ್‌ ಇರುವುದರಿಂದ ಮೂರು ಸಾವಿರಕ್ಕೂ ಹೆಚ್ಚಿ ಮುಸಲ್ಮಾನರು ನಮಾಜ್ ಮಾಡುತ್ತಾರೆ. ಇದನ್ನು ನನ್ನ ಮಗ ಸುಲೇಮಾನ್ ಹಾಗು ಆತನ ಸ್ನೇಹಿತರು ಕೇಳಲು ಹೋದಾಗ ಮುಕೇಶ್‌ ಹಲ್ಲೆ ನಡೆಸಿದ್ದಾನೆ. ಹೀಗಾಗಿ ಮುಕೇಶ್ ವಿರುದ್ಧ ಕ್ರಮ ಕೈಗೊಳ್ಳಲು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇತ್ತ ಮುಕೇಶ್ ಕೂಡ ಗಂಭೀರ ಆರೋಪ ಮಾಡಿ ಮುಂದುವರಿದ ಹೇಳಿಕೆ ನೀಡಿದ್ದಾನೆ. ಈ ಹಿಂದೆ ಮುಕೇಶ್ ಕೊಟ್ಟ ದೂರಿನ ಅನ್ವಯ ಏಳು ಜನರನ್ನು ಪೊಲೀಸರು ಬಂಧಿಸಿದ್ದರು. ಮುಂದೆ ಸುಲೇಮಾನ್‌ ತಾಯಿ ಝಬೀನ್ ನೀಡಿರುವ ದೂರಿನ ಅನ್ವಯವಾಗಿ ಮುಕೇಶ್‌ ಬಂಧನವಾಗುತ್ತಾ ಎಂಬ ಪ್ರಶ್ನೆ ಉದ್ಭವಿಸಿದೆ. ಪರಸ್ಪರ ದೂರು ಪ್ರತಿದೂರು ದಾಖಲಾಗಿರುವ ಹಿನ್ನೆಲೆಯಲ್ಲಿ ಹಲಸೂರು ಗೇಟ್ ಪೊಲೀಸರು ಯಾವ ರೀತಿ ಪ್ರಕರಣವನ್ನು ಇತ್ಯರ್ಥ ಮಾಡುತ್ತಾರೆ ಕಾದುನೋಡಬೇಕು.

ಇದನ್ನೂ ಓದಿ: Car Accident: ಅಪಘಾತದಲ್ಲಿ ಗಾಯಗೊಂಡ ಪಾಕ್​ ತಂಡದ ಇಬ್ಬರು ಆಟಗಾರ್ತಿಯರು; ಆಸ್ಪತ್ರೆಗೆ ದಾಖಲು

Exit mobile version