ಬೆಂಗಳೂರು: ಶೋಭಾ ಕರಂದ್ಲಾಜೆ ಅವರ ಆಪ್ತ ಎಂದು ಕಳೆದ ಮೂರು ತಿಂಗಳಿನಿಂದ ತಮಿಳುನಾಡಿನ ಊಟಿ ಮತ್ತು ಚೆನ್ನೈ ಸೇರಿ ಇತರೆ ಭಾಗಗಳಲ್ಲಿ ಜನರಿಗೆ ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಸರ್ಕಾರಿ ಟೆಂಡರ್‌ಗಳನ್ನು ಕೊಡಿಸುವುದಾಗಿ ಭೂಮಾಲೀಕರು, ರೈತರು ಮತ್ತು ಉದ್ಯಮಿಗಳನ್ನು ಆರೋಪಿ ಪ್ರಕಾಶ್ ಎಂಬಾತ ವಂಚಿಸುತ್ತಿದ್ದ.
ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರ ಪಿಎ ಎಂದು ಹೇಳಿಕೊಂಡು ತಮಿಳುನಾಡಿನಲ್ಲಿ ಜನರನ್ನು ವಂಚಿಸುತ್ತಿದ್ದ. ಈ ಕುರಿತು ಕೆಲ ದಿನಗಳ ನಂತರ ಆರೋಪಿ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಅನುಮಾನಗೊಂಡ ಕೆಲವರು ಸಚಿವರಿಗೆ ಕರೆ ಮಾಡಿ ಟೆಂಡರ್ ಬಗ್ಗೆ ಕೇಳಿದಾಗ ವಂಚನೆ ಪ್ರಕರಣ ಬಯಲಾಗಿದೆ. ವ್ಯಕ್ತಿಯ ವಿರುದ್ಧ ಬೆಂಗಳೂರಿನ ಸಂಜಯ ನಗರ ಪೊಲೀಸ್ ಠಾಣೆಯಲ್ಲಿ ಕರಂದ್ಲಾಜೆಯವರ ಆಪ್ತ ಸಹಾಯಕ ಬಿ.ಎಸ್. ವರುಣ್ ಆದಿತ್ಯ ದೂರು ದಾಖಲು ಮಾಡಿದ್ದಾರೆ.
ಆರೋಪಿ ಬಳಸುತ್ತಿದ್ದ ಮೊಬೈಲ್ ಸಂಖ್ಯೆಯನ್ನು (9047988288) ಆದಿತ್ಯ ಅವರು ಹೆಚ್ಚಿನ ತನಿಖೆಗಾಗಿ ಪೊಲೀಸರಿಗೆ ನೀಡಿದ್ದಾರೆ. ಆರೋಪಿ ಪ್ರಕಾಶ್ ಎಂಬಾತನ ವಿರುದ್ಧ ವಂಚನೆ ಮಾಡಿರುವ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ| ಅನೇಕ ವಿಚಾರಗಳು ಪಠ್ಯದಲ್ಲಿ ಸೇರ್ಪಡೆಯಾಗಬೇಕು: ಶೋಭಾ ಕರಂದ್ಲಾಜೆ