ಬೆಂಗಳೂರು: ರಾಷ್ಟ್ರ ರಾಜಧಾನಿಯಿಂದ ತೆಲಂಗಾಣದ ಹೈದರಾಬಾದ್‌ಗೆ ತೆರಳುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ (Vande Bharat) ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ (ಸೆಪ್ಟೆಂಬರ್ 24) ಚಾಲನೆ ನೀಡಿದ್ದಾರೆ. ಬೆಂಗಳೂರು-ಹೈದರಾಬಾದ್ ಸೇರಿ 9 ರೈಲುಗಳಿಗೆ ಚಾಲನೆ ನೀಡಿದ್ದು, ಇದರಿಂದ ಸಂಪರ್ಕ ಕ್ರಾಂತಿ ಆಗಲಿದೆ. ಅದರಲ್ಲೂ, ಕೇವಲ ಎಂಟೂವರೆ ಗಂಟೆಯಲ್ಲಿ ಬೆಂಗಳೂರಿನಿಂದ ಹೈದರಾಬಾದ್ ತಲುಪಬಹುದಾಗಿದೆ. ಹಾಗಾದರೆ, ಬೆಂಗಳೂರಿನಿಂದ ಹೈದರಾಬಾದ್ ಪ್ರಯಾಣಕ್ಕೆ ಎಷ್ಟು ದರ ನಿಗದಿಪಡಿಸಲಾಗಿದೆ ಎಂಬುದರ ಮಾಹಿತಿ ಇಲ್ಲಿದೆ.
ಬೆಂಗಳೂರಿನ ಯಶವಂತಪುರದಿಂದ ತೆಲಂಗಾಣದ ಕಾಚೆಗುಡಕ್ಕೆ ತೆರಳುವ ವಂದೇ ಭಾರತ್ ಎಕ್ಸ್‌ಪ್ರೆಸ್ ಟ್ರೈನ್‌ನ ಎಸಿ ಬೋಗಿಯಲ್ಲಿ 1,540 ರೂ. ಹಾಗೂ ಎಕ್ಸಿಕ್ಯೂಟಿವ್ ಚೇರ್‌ಗೆ 2,865 ರೂ. ನಿಗದಿಪಡಿಸಲಾಗಿದೆ. ಹಾಗೆಯೇ, ಕಾಚೆಗುಡದಿಂದ ಯಶವಂತಪುರಕ್ಕೆ ಆಗಮಿಸುವ ಎಸಿ ಬೋಗಿಯಲ್ಲಿ 1,600 ರೂ. ಹಾಗೂ ಎಕ್ಸಿಕ್ಯೂಟಿವ್ ಚೇರ್‌ನಲ್ಲಿ 2,915 ರೂ. ನಿಗದಿಪಡಿಸಲಾಗಿದೆ.
Here it goes…
— G Kishan Reddy (@kishanreddybjp) September 24, 2023
Hyderabad (Kachiguda) –
Bengaluru (Yesvantpur) Vande Bharat Express Train embarks on its maiden journey from Kachiguda Railway Station, Hyderabad.#VandeBharatExpress pic.twitter.com/KjDTLE0dMT
ಬೆಂಗಳೂರಿನಿಂದ ಮೊದಲ ಪಯಣ ಸೆಪ್ಟೆಂಬರ್ 25ಕ್ಕೆ
ಬೆಂಗಳೂರಿನಿಂದ ಹೈದರಾಬಾದ್‌ಗೆ ಪ್ರಯಾಣಿಸುವ ವಂದೇ ಭಾರತ್ ರೈಲಿನ ಮೊದಲ ಪಯಣ ಸೆಪ್ಟೆಂಬರ್ 25ರಂದು ಮಧ್ಯಾಹ್ನ 2.45ಕ್ಕೆ ಆರಂಭವಾಗಲಿದೆ. ಇದು ಕರ್ನಾಟಕದ ಮೂರನೇ ವಂದೇ ಭಾರತ್ ರೈಲು ಆಗಿರಲಿದೆ. ಈಗಾಗಲೇ ಚೆನ್ನೈ-ಬೆಂಗಳೂರು-ಮೈಸೂರು ಮತ್ತು ಬೆಂಗಳೂರು-ಧಾರವಾಡ ರೈಲುಗಳು ಜನಪ್ರಿಯತೆ ಪಡೆದಿವೆ.
ವಂದೇ ಭಾರತ್ ರೈಲು ವಾರದಲ್ಲಿ ಆರು ದಿನ, ಬುಧವಾರ ರಜೆ
- ಬೆಂಗಳೂರು-ಹೈದರಾಬಾದ್ ರೈಲು ಕ್ರಮಿಸಲಿರುವ ದೂರ : 609.81 ಕಿ.ಮೀ. ಅದರಲ್ಲಿ 355.03 ಕಿ.ಮೀ. ಡಬಲ್ ಲೈನ್ ಇದ್ದರೆ, 254.78 ಕಿ.ಮೀ. ಸಿಂಗಲ್ ಲೈನ್ ಇರುತ್ತದೆ.
- ಬೆಂಗಳೂರಿನಿಂದ ಹೈದರಾಬಾದ್‌ಗೆ ಪ್ರಯಾಣದ ಅವಧಿ 8.30 ಗಂಟೆ. ಅಂದರೆ ಬೆಂಗಳೂರಿನಿಂದ ಸಂಜೆ 2.45ಕ್ಕೆ ಹೊರಡುವ ರೈಲು ರಾತ್ರಿ 11.15ಕ್ಕೆ ಹೈದರಾಬಾದ್ ತಲುಪಲಿದೆ.
- ಈ ರೈಲಿನಲ್ಲಿ 14 ಚಯರ್ ಕಾರ್‌ಗಳು ಮತ್ತು 2 ಎಕ್ಸಿಕ್ಯುಟಿವ್ ಕ್ಲಾಸ್ ಬೋಗಿಗಳು ಇರುತ್ತವೆ.
- ವಾರದ ಆರು ದಿನಗಳಲ್ಲಿ ಈ ರೈಲಿನ ಕಾರ್ಯಾಚರಣೆ ಇರುತ್ತದೆ. ಬುಧವಾರ ರೈಲು ಇರುವುದಿಲ್ಲ.
ಇದನ್ನೂ ಓದಿ: Vande Bharat: ಬೆಂಗಳೂರು-ಹೈದರಾಬಾದ್ ಸೇರಿ 9 ವಂದೇ ಭಾರತ್ ರೈಲುಗಳಿಗೆ ಮೋದಿ ಚಾಲನೆ; ಇಲ್ಲಿದೆ ಪಟ್ಟಿ
ಬೆಂಗಳೂರು-ಹೈದರಾಬಾದ್ ರೈಲು ಸಮಯ
1. ಯಶವಂತಪುರ ರೈಲು ನಿಲ್ದಾಣ: ಮಧ್ಯಾಹ್ನ 2.45
2. ಧರ್ಮಾವರಂ ಸ್ಟೇಷನ್: ಸಂಜೆ 5.20
3. ಅನಂತಪುರ ನಿಲ್ದಾಣ: ಸಂಜೆ 5.41
4. ಕರ್ನೂಲು ನಗರ ನಿಲ್ದಾಣ: ಸಂಜೆ 7.51
5. ಮೆಹಬೂಬ್ ನಗರ: ರಾತ್ರಿ 9.40
6. ಕಾಚೆಗುಡ ಸ್ಟೇಷನ್: ರಾತ್ರಿ 11.15