Site icon Vistara News

Gas leakage: ಅನಿಲ ಸೋರಿಕೆಯಿಂದ ಇಬ್ಬರು ದುರ್ಮರಣ; ಹೋರಿ ತಿವಿದು ವ್ಯಕ್ತಿ ಸಾವು

gas leakage bidar

ಬೀದರ್: ಕೆಮಿಕಲ್ ಗ್ಯಾಸ್ ಸೋರಿಕೆಯಿಂದ (gas leakage) ಇಬ್ಬರು ದುರ್ಮರಣ ಹೊಂದಿದ ದಾರುಣ ಘಟನೆ ಬೀದರ್‌ ಜಿಲ್ಲೆಯ (Bidar news) ಹುಮನಾಬಾದ್‌ನಲ್ಲಿ ನಡೆದಿದೆ.

ಬೀದರ್ ಜಿಲ್ಲೆಯ ಹುಮನಾಬಾದ್ ಪಟ್ಟಣದ ಹೊರವಲಯದಲ್ಲಿನ ಕೈಗಾರಿಕಾ ಪ್ರದೇಶದಲ್ಲಿ ದು‍ರ್ಘಟನೆ ನಡೆದಿದೆ. ಶ್ರೀ ಪ್ರಸನ್ನ ಪ್ರೀ ಪ್ರೊಸೆಸಿಂಗ್ ಲಿಮಿಟೆಡ್ ಕಂಪನಿಯಲ್ಲಿ ಅವಘಡ ಸಂಭವಿಸಿದೆ. ಫ್ಯಾಕ್ಟರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಕೆಮಿಕಲ್ ಗ್ಯಾಸ್ ಸೋರಿಕೆಯಿಂದ ಅವಘಡ ಸಂಭವಿಸಿದೆ.

ಹುಮನಾಬಾದ್‌ ತಾಲೂಕಿನ ವಡ್ಡನಕೇರಾ ಗ್ರಾಮದ ಮಹ್ಮದ್ ಶಾಬಾದ್, ಇಂದ್ರಜೀತ್ ಮೃತಪಟ್ಟವರು. ಇವರು ಮಧ್ಯಪ್ರದೇಶ ಮೂಲದ ನಿವಾಸಿಗಳಾಗಿದ್ದು, ಇಲ್ಲಿನ ಫ್ಯಾಕ್ಟರಿಯಲ್ಲಿ ಕಾರ್ಮಿಕರಾಗಿದ್ದರು. ಸ್ಥಳಕ್ಕೆ ಶಾಸಕ ಸಿದ್ದು ಪಾಟೀಲ್, ಡಿಸಿ ಗೋವಿಂದ್ ರೆಡ್ಡಿ, ಎಸ್ಪಿ ಚನ್ನಬಸವಣ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಹೋರಿ ತಿವಿದು ವ್ಯಕ್ತಿ ಸಾವು

ಶಿವಮೊಗ್ಗ: ಶಿವಮೊಗ್ಗದಲ್ಲಿ ಹೋರಿ ಹಬ್ಬಕ್ಕೆ ಮತ್ತೊಂದು ಬಲಿಯಾಗಿದೆ. ಹೋರಿ ತಿವಿದು ವ್ಯಕ್ತಿ ಸಾವಿಗೀಡಾಗಿದ್ದಾರೆ. ಶಿವಮೊಗ್ಗ ಜಿಲ್ಲೆಯ (shivamogga news) ಶಿಕಾರಿಪುರ ತಾಲೂಕಿನ ತರಲಘಟ್ಟ ಗ್ರಾಮದಲ್ಲಿ ಆಯೋಜಿಸಿದ್ದ ಹೋರಿ ಸ್ಪರ್ಧೆಯ ವೇಳೆ ದುರ್ಘಟನೆ ನಡೆದಿದೆ.

ಶಿಕಾರಿಪುರ ತಾಲೂಕಿನ ಈಸೂರು ಗ್ರಾಮದ ರಾಮು (26) ಹೋರಿ ತಿವಿದು ಮೃತಪಟ್ಟ ವ್ಯಕ್ತಿ. ಹೋರಿ ಬೆದರಿಸುವ ಸ್ಪರ್ಧೆ ವೀಕ್ಷಣೆಗೆ ತೆರಳಿದ್ದ ಇವರು, ಏಕಾಏಕಿ ಹೋರಿ ಕುತ್ತಿಗೆಗೆ ತಿವಿದು ಗಾಯಗೊಂಡಿದ್ದರು. ಶಿಕಾರಿಪುರ ಸರಕಾರಿ ಆಸ್ಪತ್ರೆಗೆ ಅವರನ್ನು ಕರೆದೊಯ್ಯಲಾಗಿತ್ತು. ಆಸ್ಪತ್ರೆಗೆ ಬರುವಷ್ಟರಲ್ಲಿ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.

ಶಿಕಾರಿಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳೆದ ವರ್ಷ ಕೂಡ ಇದೇ ಗ್ರಾಮದಲ್ಲಿ ನಡೆದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ವ್ಯಕ್ತಿಯೊಬ್ಬರು ಹೋರಿ ತಿವಿದು ಸಾವನ್ನಪ್ಪಿದ್ದರು.

ಇದನ್ನೂ ಓದಿ: Chemical leakage : ರಾಸಾಯನಿಕ ತುಂಬಿದ ಟ್ಯಾಂಕರ್‌ ಪಲ್ಟಿ, ಅನಿಲ ಸೋರಿಕೆಯಿಂದ ಹೆದ್ದಾರಿ ಸಂಚಾರ ಬಂದ್‌

Exit mobile version