Site icon Vistara News

Cock fight: ಕೋಳಿ ಅಂಕದಲ್ಲಿ ಜೂಜಾಟ; ಒಬ್ಬನ ಬಂಧನ, 11 ಆರೋಪಿಗಳು ಪರಾರಿ

Shivamogga News Arrest of the accused who went missing after raping a young woman at Ripponpet

ರಿಪ್ಪನ್‌ಪೇಟೆ: ಹೊಸನಗರ ತಾಲೂಕಿನ ಹುಂಚ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅನೆಗದ್ದೆ ಗ್ರಾಮದ ಗುಡ್ಡದಲ್ಲಿ ಕೋಳಿ ಅಂಕ (Cock fight) ನಡೆಸುತ್ತಿದ್ದಾರೆಂಬ ಖಚಿತ ಮಾಹಿತಿಯನ್ನಾಧರಿಸಿ ರಿಪ್ಪನ್‌ಪೇಟೆ ಠಾಣೆಯ ಪಿಎಸ್‌ಐ ನೇತೃತ್ವದಲ್ಲಿ ದಿಡೀರ್ ದಾಳಿ ನಡೆಸಿದಾಗ ಆರೋಪಿಗಳು ಬೈಕ್ ಮತ್ತು ಕೋಳಿ ಬಿಟ್ಟು ಪರಾರಿಯಾದ ಘಟನೆ ನಡೆದಿದೆ.

ಕಾನೂನು ಬಾಹಿರವಾಗಿ ಹಣವನ್ನು ಪಣವಾಗಿಟ್ಟು ಜೂಜಾಟ ರೀತಿಯಲ್ಲಿ ಕೋಳಿ ಅಂಕ ನಡೆಸುತ್ತಿರುವ ಕುರಿತು ಖಚಿತ ಮಾಹಿತಿನ್ನಾಧರಿಸಿ ಪೊಲೀಸರು ದಾಳಿ ನಡೆಸಿದರು. ಈ ಸಂದರ್ಭದಲ್ಲಿ ಬೈಕ್ ಮತ್ತು ಕೋಳಿಗಳೊಂದಿಗೆ ಒಬ್ಬ ಅರೋಪಿ ರವಿಚಂದ್ರ ಎಂಬುವನನ್ನು ಬಂಧಿಸಿದ್ದು ಉಳಿದ 11 ಜನ ಆರೋಪಿಗಳು ಪರಾರಿಯಾಗಿದ್ದಾರೆ. ಈ ಪತ್ತೆ ಕಾರ್ಯಾಚರಣೆಯಲ್ಲಿ ಪಿ.ಎಸ್.ಐ ಶಿವಾನಂದ ಕೋಳಿ ಪೊಲೀಸ್ ಪೇದೆಗಳಾದ ಉಮೇಶ್ ಮತ್ತು ಶಿವು, ಮಧುಸೂದನ್ ಇನ್ನಿತರರು ಇದ್ದರು.

ಇದನ್ನೂ ಓದಿ: Viral Video : ರಾಷ್ಟ್ರೀಯ ಹೆದ್ದಾರಿಯಲ್ಲಿ ಬರ್ತ್‌ಡೇ ಆಚರಿಸಿಕೊಂಡ ಯೂಟ್ಯೂಬರ್‌; ಪೊಲೀಸರಿಂದ ಭರ್ಜರಿ ಗಿಫ್ಟ್‌!

Exit mobile version