ಚಿಕ್ಕಬಳ್ಳಾಪುರ: ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ನವಜಾತ ಶಿಶುವಿನ ರಕ್ತದ ಮಾದರಿ ಪಡೆಯುತ್ತಿದ್ದಾಗ ಮಗುವೇ ಮೃತಪಟ್ಟ ಘಟನೆ ಚಿಕ್ಕಬಳ್ಳಾಪುರ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ನಡೆದಿದೆ.
ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯದಿಂದಲೇ ನವಜಾತ ಶಿಶು ಮೃತಪಟ್ಟಿದೆ ಎಂದು ಪೋಷಕರು ಆರೋಪಿಸಿದ್ದಾರೆ. ತಾಲೂಕಿನ ಕೊರೇನಹಳ್ಳಿ ನಿವಾಸಿಗಳಾದ ಸಂಧ್ಯಾ ಹಾಗೂ ಗಂಗರಾಜು ದಂಪತಿಯ ಮಗು ವಾಂತಿ ಹಾಗೂ ಮೂತ್ರ ವಿಸರ್ಜನೆ ಸಮಸ್ಯೆಯಿಂದ ಬಳಲುತ್ತಿತ್ತು. ಪರೀಕ್ಷೆ ಮಾಡಲು ನವಜಾತ ಶಿಶುವಿನಿಂದ ರಕ್ತದ ಮಾದರಿ ಪಡೆಯಲು ಆಸ್ಪತ್ರೆ ಸಿಬ್ಬಂದಿ ಮುಂದಾಗಿದ್ದರು. ಈ ವೇಳೆ ಮಗು ಕೊನೆಯುಸಿರೆಳೆದಿದೆ.
ಚೆನ್ನಾಗಿದ್ದ ಮಗು ರಕ್ತದ ಮಾದರಿ ಪಡೆಯುವಾಗ ಮೃತಪಟ್ಟಿದೆ ಎಂದು ಆರೋಪಿಸಿರುವ ಪೋಷಕರು, ಆಸ್ಪತ್ರೆಯ ದಾದಿ ರಾಧ ಹಾಗೂ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ | Accident | ತುಮಕೂರಿನಲ್ಲಿ ಗಾರ್ಮೆಂಟ್ಸ್ ಕೆಲಸಕ್ಕೆ ಹೋಗುತ್ತಿದ್ದ ಮಹಿಳೆಯರಿದ್ದ ಆಟೊ ಪಲ್ಟಿ, ಐವರಿಗೆ ಗಾಯ