ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದ ಅವಲಗುರ್ಕಿ ಬಳಿ ನಿರ್ಮಾಣ ಆಗುತ್ತಿರುವ 117 ಅಡಿ ಎತ್ತರದ ಆದಿಯೋಗಿ ಪ್ರತಿಮೆ ಸ್ಥಳದಲ್ಲಿ ಈಶ ಪೌಂಡೇಶನ್ ಯತಾಸ್ಥಿತಿ ಕಾಯ್ದುಕೊಳ್ಳುವಂತೆ ಹೈಕೋರ್ಟ್ ಸೂಚನೆ ನೀಡಿದೆ.
ಈಗಾಗಲೆ ಪ್ರತಿಮೆ ನಿರ್ಮಾಣ ಆಗಿದ್ದು ಜನವರಿ 12ರಂದು ಪ್ರತಿಮೆ ಲೋಕಾರ್ಪಣೆಗೆ ಸಿದ್ಧವಾಗಿದೆ. ಈ ನಡುವೆ ಜಮೀನು ತಗಾದೆ ವಿಚಾರದಲ್ಲಿ ಪೌಂಡೇಷನ್ ವಿರುದ್ದ ರೈತರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಖ್ಯಾತಪ್ಪ , ಶ್ರೀಧರ್ , ನಾರಾಯಣಸ್ವಾಮಿ, ಎನ್. ನಾರಾಯಣಸ್ವಾಮಿ ಅವರ ದೂರನ್ನು ಆಲಿಸಿದ ನ್ಯಾಯಾಲಯ, ಯಾವುದೇ ಅಭಿವೃದ್ಧಿ ಕಾರ್ಯ ನಡೆಸದಂತೆ ತಡೆಯಾಜ್ಞೆ ನೀಡಿದೆ.