Site icon Vistara News

Kaivara Tatayya: ಕೈವಾರ ಶ್ರೀ ಯೋಗಿನಾರೇಯಣ ಮಠದಲ್ಲಿ ಜು.19ರಿಂದ ಗುರುಪೂಜಾ ಮಹೋತ್ಸವ, ಸಂಗೀತೋತ್ಸವ

Guru Puja Mahotsav and Sangeethotsava from July 19th at Kaiwara Srikshethra Sadguru Sri Yoginareyan Mutt

ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೈವಾರದ ಶ್ರೀಕ್ಷೇತ್ರ ಸದ್ಗುರು ಶ್ರೀ ಯೋಗಿನಾರೇಯಣ ಮಠದಲ್ಲಿ (Kaivara Tatayya) ಗುರುಪೂರ್ಣಿಮಾ ಪ್ರಯುಕ್ತ ಜು.19ರಿಂದ ಮೂರು ದಿನಗಳ ಕಾಲ ಗುರುಪೂಜಾ ಮಹೋತ್ಸವ ಹಾಗೂ ಸಂಗೀತೋತ್ಸವ ಏರ್ಪಡಿಸಲಾಗಿದೆ.

ಜು.19ರಂದು ಶುಕ್ರವಾರ ಸಂಜೆ ವಿಶೇಷ ಕಾರ್ಯಕ್ರಮಗಳು ನಡೆಯಲಿದ್ದು, ಪಿ.ಜೆ.ಬ್ರಹ್ಮಾಚಾರಿ ಮತ್ತು ತಂಡದವರಿಂದ ಪಿಟೀಲು ಸೋಲೋ, ಅಧಿತಿ ಪ್ರಹ್ಲಾದ್‌, ವಿನಯ್‌ ಶರ್ವ, ಲಕ್ಷ್ಮೀ ಹೊಸೂರು, ಡಿ.ಆರ್‌. ರಾಜಪ್ಪ ಅವರ ತಂಡದವರಿಂದ ಗಾಯನ ಕಾರ್ಯಕ್ರಮ ನಡೆಯಲಿದೆ.

ಜು.20 ರಂದು ಶನಿವಾರ ಸಂಜೆ 5.30ಕ್ಕೆ ಸಿ.ಕೆ. ಪತಂಜಲಿ ಮತ್ತು ವಿಶ್ವೇಶ್ವರನ್‌ ತಂಡದವರಿಂದ ಕೊಳಲು, ಕೇರಳದ ಸೂರ್ಯಗಾಯತ್ರಿ, ಚೆನ್ನೈನ ಸಿಕ್ಕಿಲ್‌ ಸಿ. ಗುರುಚರಣ್‌ ಮತ್ತು ತಂಡದವರಿಂದ ಗಾಯನ, ಚೆನ್ನೈನ ಪದ್ಮಶ್ರೀ ಎ. ಕನ್ಯಾಕುಮಾರಿ ಮತ್ತು ತಂಡದವರಿಂದ ಪಿಟೀಲು ಸೋಲೋ ಮತ್ತು ಬೆಂಗಳೂರಿನ ಶ್ರೀ ರುದ್ರಾಕ್ಷಾ ನಾಟ್ಯಾಲಯ ಕಲಾವಿದರಿಂದ ಭರತನಾಟ್ಯ ಮತ್ತು ಡಾ.ಎ. ವಿಜಯ್‌ ಕಾರ್ತೀಕೇಯನ್‌, ಮಲೈ ಎಂ. ಕಾರ್ತಿಕೇಯನ್‌ ಅವರ ತಂಡದವರಿಂದ ನಾದಸ್ವರ ಏರ್ಪಡಿಸಲಾಗಿದೆ.

ಇದನ್ನೂ ಓದಿ: Ratna Bhandar: ಒಂದೇ ವಾರದಲ್ಲಿ ಎರಡನೇ ಬಾರಿ ತೆರೆದ ಪುರಿ ಜಗನ್ನಾಥನ ʼರತ್ನ ಭಂಡಾರʼ

ಜು.21 ರಂದು ಭಾನುವಾರ ಗುರುಪೂಜಾ ಮಹೋತ್ಸವ ಜರುಗಲಿದ್ದು, ಬೆಳಿಗ್ಗೆ 5 ಗಂಟೆಗೆ ಸುಪ್ರಸಿದ್ಧ ವಿದ್ವಾಂಸರುಗಳಿಂದ ನಾದಸ್ವರ, ತವಿಲ್‌ ವಾದನ ಹಾಗೂ ಸಂಗೀತ ಸಮರ್ಪಣೆ, ಬೆಳಿಗ್ಗೆ 9.30ಕ್ಕೆ ವಿದ್ವಾಂಸರುಗಳಿಂದ ಸದ್ಗುರು ಶ್ರೀ ಯೋಗಿ ನಾರೇಯಣ ತಾತಯ್ಯನವರ ವಿರಚಿತ ಬೋಧನಾ ಕೃತಿಗಳ ಗೋಷ್ಠಿ ಗಾಯನ ಕಾರ್ಯಕ್ರಮ ನಡೆಯಲಿದೆ.

ಬಳಿಕ ಬೆಳಿಗ್ಗೆ 10.30 ರಿಂದ 12.30ರವರೆಗೆ ಸದ್ಗುರು ಶ್ರೀ ಯೋಗಿ ನಾರೇಯಣ ತಾತಯ್ಯನವರಿಗೆ ಗುರುಪೂಜೆ ನಡೆಯಲಿದೆ. ಧರ್ಮಾಧಿಕಾರಿ ಡಾ.ಎಂ.ಆರ್‌. ಜಯರಾಮ್‌ ಅವರು ಗುರುಸಂದೇಶ ನೀಡಲಿದ್ದಾರೆ. ಕರ್ನಾಟಕದ ಪ್ರಸಿದ್ಧ ಮೃದಂಗ ವಿದ್ವಾಂಸ ವಿ. ಪ್ರವೀಣ್‌ ಮತ್ತು ಸದ್ಗುರು ನಾರೇಯಣ ತಾತಯ್ಯನವರ ಭಜನಾ ಭಕ್ತ ಭೀಮಗಾನಪಲ್ಲಿ ಕೆ.ರಾಜಪ್ಪ ಅವರಿಗೆ ವಿಶೇಷ ಸನ್ಮಾನ ಏರ್ಪಡಿಸಲಾಗಿದೆ.

ಸಂಜೆ 5 ಗಂಟೆಯಿಂದ ದೆಹಲಿಯ ಸರಸ್ವತಿ ರಾಜಗೋಪಾಲನ್‌ ತಂಡದವರಿಂದ ವೀಣಾವಾದನ, ಭೈರತಿ ಅಂಜಿನಪ್ಪ, ತೇಜಸ್ವಿನಿ ಮನೋಜ್‌ ಕುಮಾರ್‌, ಕೆ.ಸುಧಾಮಣಿ ವೆಂಕಟರಾಘವನ್‌ ಅವರ ತಂಡಗಳಿಂದ ಗಾಯನ ಕಾರ್ಯಕ್ರಮ, ಸುಬ್ಬಲಕ್ಷ್ಮೀ ಮತ್ತು ತಂಡದವರಿಂದ ಸ್ಯಾಕ್ಸೋಪೋನ್‌, ಮಹಾಲಿಂಗಯ್ಯ ಮಠದ್‌ ಮತ್ತು ತಂಡದಿಂದ ಹಿಂದೂಸ್ಥಾನಿ ಗಾಯನ ಏರ್ಪಡಿಸಲಾಗಿದೆ.

ಇದನ್ನೂ ಓದಿ: Sensex Jump: ಷೇರುಪೇಟೆಯಲ್ಲಿ ಸಾರ್ವಕಾಲಿಕ ದಾಖಲೆ ಬರೆದ ಸೆನ್ಸೆಕ್ಸ್, 24,000 ಮೀರಿದ ನಿಫ್ಟಿ

ಜು.22 ರಂದು ಸೋಮವಾರ ಬೆಳಗ್ಗೆ 6 ಗಂಟೆಗೆ 72 ಗಂಟೆಗಳ ನಿರಂತರ ಸಂಗೀತ ಕಾರ್ಯಕ್ರಮಗಳ ಮುಕ್ತಾಯ ಮತ್ತು ಮಹಾಮಂಗಳಾರತಿ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Exit mobile version