Site icon Vistara News

Murder Case : ತಂಗಿ ಮಗನನ್ನೇ ಕೊಂದು ಹೂತು ಹಾಕಿದ ದೊಡ್ಡಮ್ಮ!

Housewife strangled to death in Bengaluru

ಚಿಕ್ಕಬಳ್ಳಾಪುರ: 6 ವರ್ಷದ ಗಂಡು ಮಗುವನ್ನು ಆಕೆಯ ದೊಡ್ಡಮ್ಮಳೇ ಕೊಂದು ಹೂತು ಹಾಕಿದ (Murder Case) ಘಟನೆ ಚಿಕ್ಕಬಳ್ಳಾಪುರದ ಮುತಕದಹಳ್ಳಿ ಗ್ರಾಮದ ಮಾವಿನ ತೋಪಿನಲ್ಲಿ ನಡೆದಿದೆ.

ಅಂಬಿಕಾ ಎಂಬಾಕೆ ಕೊಲೆ ಪಾತಕಿಯಾಗಿದ್ದಾಳೆ. ಅಂಬಿಕಾಳ ಸಿಟ್ಟಿಗೆ ಮುಗ್ದ ಮಗುವೊಂದು ಪ್ರಾಣ ಬಿಟ್ಟಿದೆ. ಅಂಬಿಕಾ ಹಾಗೂ ಅನಿತಾ ಇಬ್ಬರು ಅಕ್ಕ ತಂಗಿಯರು. ತಂಗಿ ಅನಿತಾ ಮೇಲಿನ ಕೋಪಕ್ಕೆ ಆಕೆಯ ಮಗನನ್ನು ಕೊಲೆ ಮಾಡಿ ಹೂತು ಹಾಕಿದ್ದಾಳೆ.

ಮೃತ ದುರ್ದೈವಿ

ಅಂಬಿಕಾಳ ಅನೈತಿಕ ಸಂಬಂಧಗಳಿಗೆ ತಂಗಿ ಅನಿತಾ ಅಡ್ಡಿಯಾಗುತ್ತಿದ್ದಳು ಎನ್ನಲಾಗಿದೆ. ಇದರಿಂದ ಸಿಟ್ಟಿಗೆದ್ದ ಅಂಬಿಕಾ, ತಂಗಿ ಮೇಲಿನ ಕೋಪಕ್ಕೆ ಆಕೆ ಮಗನನ್ನು ಕೊಲೆ ಮಾಡಿದ್ದಾಳೆ. ಸ್ಥಳಕ್ಕೆ ಪೆರೆಸಂದ್ರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

ಇದನ್ನೂ ಓದಿ: Murder Case : ಮೊಮ್ಮಗನಿಂದಲೇ ತಾತನ ಬರ್ಬರ ಹತ್ಯೆ!

ಟಿಪ್ಪರ್‌ ಹಾಯಿಸಿ ಸ್ನೇಹಿತನ ಕೊಲೆ ಯತ್ನ; ಆದರೆ ಸತ್ತಿದ್ದು ಇನ್ಯಾರೋ

ಕಾರವಾರ: ಇಬ್ಬರು ಯುವಕರ ನಡುವಿನ ಜಗಳ ದ್ವೇಷಕ್ಕೆ (Rivarly between Friends) ತಿರುಗಿ ಕೊಲೆ ಮಾಡುವ (Murder Case) ಹಂತವನ್ನು ತಲುಪಿದೆ. ಆದರೆ, ಸಾವು ಕಂಡದ್ದು ಮಾತ್ರ ಇನ್ಯಾರೋ? ಇಂಥಹುದೊಂದು ಘಟನೆ ನಡೆದಿದ್ದು ಉತ್ತರ ಕನ್ನಡ ಜಿಲ್ಲೆಯ (Uttara Kannada News) ಹೊನ್ನಾವರದ ಅರೆಯಂಗಡಿ ಬಳಿ. ಇಲ್ಲಿನ ಯುವಕನೊಬ್ಬ ತನ್ನ ಸ್ನೇಹಿತನನ್ನು ಕೊಲ್ಲಲೆಂದು ಆತ ಪ್ರಯಾಣಿಸುತ್ತಿದ್ದ ಆಟೋ ರಿಕ್ಷಾದ ಮೇಲೆ ಟಿಪ್ಪರ್‌ (Tipper Rams into Auto Rickshaw) ಹಾಯಿಸಿದ್ದಾನೆ. ಆದರೆ, ಸತ್ತಿದ್ದು ಮಾತ್ರ ಅಮಾಯಕನಾದ ಅಟೋ ಚಾಲಕ.

ವಿನಾಯಕ ಭಟ್‌ ಎಂಬಾತನಿಗೂ ಕೇಶವ ನಾಯ್ಕ ಮತ್ತು ವಸಂತ ನಾಯ್ಕ ಎಂಬವರಿಗೂ ಹಣಕಾಸಿನ ವಿಚಾರಕ್ಕೆ ಜಗಳ ಉಂಟಾಗಿತ್ತು. ಹೀಗಾಗಿ ಇಬ್ಬರ ಮಧ್ಯೆ ದ್ವೇಷ ಬೆಳೆದಿತ್ತು. ಮಂಗಳವಾರ ರಾತ್ರಿ ಕೇಶವ ಮತ್ತು ವಸಂತ ಅವರು ಆಟೋ ಒಂದರ ಬಳಿ ನಿಂತಿದ್ದರು. ಆಗ ಅವರನ್ನು ಕಂಡವನೇ ವಿನಾಯಕ ತಾನು ಚಲಾಯಿಸುತ್ತಿದ್ದ ಟಿಪ್ಪರನ್ನು ಅವರ ಮೇಲೆ ಹಾಯಿಸಿದ್ದ. ಆದರೆ, ಅಲ್ಲಿ ಕೇಶವ ಮತ್ತು ವಸಂತನ ಜತೆಗೆ ಆಟೋ ಚಾಲಕ ಓಲ್ವಿನ್‌ ಕೂಡಾ ನಿಂತಿದ್ದರು.

ವಿನಾಯಕ ಭಟ್‌ ಹಾಯಿಸಿದ ಟಿಪ್ಪರ್‌ ಆಲ್ವಿನ್‌, ಕೇಶವ ನಾಯ್ಕ್‌ ಮತ್ತು ವಸಂತ ನಾಯ್ಕ್‌ ಗೆ ಅಪ್ಪಳಿಸಿದೆ. ಈ ವೇಳೆ ಓಲ್ವಿನ್‌ ಅವರಿಗೆ ಅದು ಸರಿಯಾಗಿ ಗುದ್ದಿದ್ದು ತಲೆಗೆ ಗಂಭೀರವಾಗಿ ಗಾಯವಾಗಿದೆ. ಮೂವರೂ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರಲ್ಲಿ ಓಲ್ವಿನ್‌ ಮಾತ್ರ ಬದುಕುಳಿಯಲಿಲ್ಲ.

ಸಿಟ್ಟಿನ ಭರದಲ್ಲಿ ಅಮಾಯಕನನ್ನು ಬಲಿ ಪಡೆದ ಆರೋಪಿ ವಿನಾಯಕ ಭಟ್ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ.ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ.

Exit mobile version