ಚಿಕ್ಕಬಳ್ಳಾಪುರ : ಹೊಸ ವರ್ಷ ಆಚರಣೆಗೆ ವಿಶ್ವವಿಖ್ಯಾತ ನಂದಿಗಿರಿಧಾಮಕ್ಕೆ ಹೋಗುವ ಪ್ಲ್ಯಾನ್ ಇದ್ರೆ ಕೂಡಲೇ ನಿಮ್ಮ ಪ್ಲ್ಯಾನ್ ಬದಲಾಯಿಸಿ. ಇಂದು (ಶನಿವಾರ) ಸಂಜೆ ಆರು ಗಂಟೆಯಿಂದ ಭಾನುವಾರ ಬೆಳಗ್ಗೆ 6 ಗಂಟೆಯವರೆಗೆ ನಂದಿ ಗಿರಿಧಾಮಕ್ಕೆ ಪ್ರವೇಶ ನಿಷೇಧ ವಿಧಿಸಲಾಗಿದೆ.
ಪ್ರತಿ ವೀಕೆಂಡ್ ನಲ್ಲಿ ನಂದಿ ಗಿರಿಧಾಮದ ಸೌಂದರ್ಯ್ಯವನ್ನು ಕಣ್ಣುತುಂಬಿಕೊಳ್ಳಲು ಬರುತ್ತಿದ್ದ ಸಾವಿರಾರು ಪ್ರವಾಸಿಗರಿಗೆ ಈ ವೀಕೆಂಡ್ ನಲ್ಲಿ ನಂದಿ ಬೆಟ್ಟಕ್ಕೆ ಪ್ರವೇಶ ನಿರ್ಬಂಧಿಸಲಾಗಿದೆ.…
ಕೋವಿಡ್ ಆತಂಕ ಹಾಗೂ ಗುಂಪು ಕಟ್ಟಿಕೊಂಡು ಮದ್ಯ ಸೇವನೆ ಮಾಡಿ ಪಾರ್ಟಿ ಮಾಡುವುದು, ಪ್ಲಾಸ್ಟಿಕ್ ಬಾಟಲಿಗಳನ್ನು ಎಲ್ಲೆಂದರಲ್ಲಿ ಬಿಸಾಡಿ ನಂದಿಗಿರಿಧಾಮದ ಸೌಂದರ್ಯಕ್ಕೆ ಹಾನಿ ಉಂಟು ಮಾಡುವುದನ್ನು ತಡೆಯಲು ಮತ್ತು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಎನ್ ಎಮ್ ನಾಗರಾಜ್ ನಂದಿಬೆಟ್ಟಕ್ಕೆ ಈ ವೀಕೆಂಡ್‌ನಲ್ಲಿ ನಿಷೇಧ ಹೇರಿದ್ದಾರೆ. ಹೀಗಿದ್ದರೂ, ನಾಳೆ (ಭಾನುವಾರ) ಬೆಳಗ್ಗೆ 6 ಗಂಟೆಯಿಂದ ಎಂದಿನಂತೆ ನಂದಿಬೆಟ್ಟ ಪ್ರವೇಶಕ್ಕೆ ಅವಕಾಶ ಇದ್ದು ಹೊಸ ವರ್ಷವನ್ನು ಸಂಭ್ರಮದಲ್ಲಿ ಕಳೆಯಬಹುದು.
ನಂದಿ ಬೆಟ್ಟಕ್ಕೆ ಪ್ರವೇಶ ನಿಷೇಧ ಯಾವಾಗ?
ವರ್ಷದ ಕೊನೆಯ ದಿನ 31-12-22 ರಿಂದ ರಂದು ಸಂಜೆ 6 ಗಂಟೆಯಿಂದ 01-01-23 ಬೆಳಗ್ಗೆ ಆರು ಗಂಟೆವರೆಗೂ ನಂದಿಬೆಟ್ಟಕ್ಕೆ ನಿಷೇಧ ಇರುತ್ತದೆ. ಭಾನುವಾರ ಬೆಳಗ್ಗೆ ಆರು ಗಂಟೆಯಿಂದ ಎಂದಿನಂತೆ ನಂದಿಗಿರಿಧಾಮ ಪ್ರವೇಶಕ್ಕೆ ಅವಕಾಶ ಇರುತ್ತದೆ.