ಚಿಕ್ಕಬಳ್ಳಾಪುರ : ಆನ್‌ಲೈನ್‌ನಲ್ಲಿ ಉದ್ಯೋಗ (Online Fraud) ಕೊಡಿಸುವುದಾಗಿ ವಂಚನೆ ಮಾಡುತ್ತಿದ್ದ ಗ್ಯಾಂಗ್ ಅನ್ನು ಪೊಲೀಸರು ಬಂಧಿಸಿದ್ದಾರೆ. ಚಿಕ್ಕಬಳ್ಳಾಪುರ ಸಿಇಎನ್ ಸೈಬರ್ ಠಾಣೆ ಪೊಲೀಸರಿಂದ ಆನ್ ಲೈನ್ ವಂಚಕರ ಬಂಧನವಾಗಿದೆ.
ಆಂಧ್ರ ಪ್ರದೇಶದ ಗಾಂಧಿಪುರಂನ ಗಣೇಶ್ ಅಲಿಯಾಸ್ ಚೇತನ್ ಹಾಗೂ ಚಿಲಮತ್ತೂರಿನ ಹರೀಶ್ ಕುಮಾರ್ ಬಂಧಿತ ಆರೋಪಿಗಳಾಗಿದ್ದಾರೆ. ಇದೀಗ ಬಂಧಿತರಿಂದ 1,30,000 ರೂ. ವಶ ಪಡೆದುಕೊಳ್ಳಲಾಗಿದೆ.
ಇದನ್ನೂ ಓದಿ | ನಿಮ್ಮ ಮೊಬೈಲ್‌ನಲ್ಲಿ ಈ ಆ್ಯಪ್‌ಗಳು ಇದ್ದರೆ ಹುಷಾರ್! ತಕ್ಷಣ ಡಿಲೀಟ್ ಮಾಡಿ
ಏನಿದು ಪ್ರಕರಣ?
ನೌಕರಿ ಒದಗಿಸುವ ಆನ್ ಲೈನ್ ವೆಬ್‌ಸೈಟ್ ಒಂದನ್ನು ಆರಂಭಿಸಿದ ಈ ಗ್ಯಾಂಗ್ ಅರ್ಜಿ ಸಲ್ಲಿಸಿದವರ ಕೈಯಿಂದ ಹಣ ಸುಲಿಗೆ ಮಾಡುತ್ತಿತ್ತು. ಗೊರಮೊಡುಗು ಗ್ರಾಮದ ಯುವತಿಗೆ 2,39,000 ಹಣ ವಂಚಿಸಿದೆ. ಶಿಡ್ಲಘಟ್ಟ ತಾಲೂಕಿನ ಗೊರಮಡುಗು ಗ್ರಾಮದ ಈ ಯವತಿ ನೌಕರಿ.ಕಾಂ ವೆಬ್ ಸೈಟ್ ನಲ್ಲಿ ಸ್ವ ವಿವರ ನೊಂದಾಯಿಸಿದ್ದರು ಎನ್ನಲಾಗಿದೆ.
ಈಶಾ ಕಂಪನಿಯಲ್ಲಿ ಟೆಲಿಕಾಲರ್ ಕೆಲಸ ಕೊಡಿಸುವುದಾಗಿ ನಂಬಿಸಿದ್ದರು. ಪ್ರವೇಶ ಶುಲ್ಕ ಮತ್ತು ಐಡಿ ಕಾರ್ಡ್ ಫೀಸ್ ಗೆ ಎಂದು ಹಂತಹಂತವಾಗಿ ಹಣ ಹಾಕಿಸಿಕೊಂಡು ವಂಚನೆ ಮಾಡಿದ್ದರು. ನಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಆನ್ ಲೈನ್ ವಂಚಕರನ್ನು ಚಿಕ್ಕಬಳ್ಳಾಪುರ ಸೈಬರ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ | Online fraud : ಆನ್‌ಲೈನ್ ವಂಚನೆ ಜಾಲಕ್ಕೆ ಪೊಲೀಸರ ಬಲೆ, 70 ಜನ ವಶಕ್ಕೆ