ಚಿಕ್ಕಮಗಳೂರು: ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಪದವಿಗೆ ರಾಜೀನಾಮೆ ನೀಡಿದ್ದ ಸಂದೀಪ್ ಹರವಿನಗಂಡಿಯನ್ನು ಬದಲಾಯಿಸಿ ನೂತನ ಅಧ್ಯಕ್ಷರನ್ನು ನೇಮಿಸಲಾಗಿದೆ.
ಪ್ರವೀಣ್ ನೆಟ್ಟಾರು ಹತ್ಯೆ ಹಾಗೂ ಸಂಸದ ತೇಜಸ್ವಿ ಸೂರ್ಯ ಜೊತೆ ಮಾತನಾಡಿದ ಆಡಿಯೋ ವೈರಲ್ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ. ಪ್ರವೀಣ್ ನೆಟ್ಟಾರು ಹತ್ಯೆ ಹಾಗೂ ಬಿಜೆಪಿ ಸರಕಾರದ ನಿಷ್ಕ್ರಿಯತೆ ಖಂಡಿಸಿ ಸಂದೀಪ್ ರಾಜೀನಾಮೆ ನೀಡಿದ್ದರು. ರಾಜ್ಯದಲ್ಲೇ ಮೊದಲ ಬಾರಿಗೆ ರಾಜೀನಾಮೆಯ ಧ್ವನಿ ಎತ್ತಿದ್ದರು. ಈ ವೇಳೆ ರಾಜೀನಾಮೆ ಹಿಂಪಡೆಯುವಂತೆ ತೇಜಸ್ವಿ ಸೂರ್ಯ, ಸಂದೀಪ್‌ಗೆ ಕರೆ ಮಾಡಿದ್ದರು. ಮಾತುಕತೆ ವೇಳೆ, ʼಕಾಂಗ್ರೆಸ್ ಸರ್ಕಾರವಿದ್ದಿದ್ರೆ ಕಲ್ಲು ಹೊಡೆಯಬಹುದಿತ್ತುʼ ಎಂದಿದ್ದರು.
ತೇಜಸ್ವಿ ಸೂರ್ಯ ಮಾತು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಆಡಿಯೋ ವೈರಲ್‌ನಿಂದ ಸಂಸದ ತೇಜಸ್ವಿ ಸೂರ್ಯ ಮುಜುಗರಕ್ಕೀಡಾಗಿದ್ದರು. ಈ ಹಿನ್ನೆಲೆಯಲ್ಲಿ ಯುವ ಮೋರ್ಚಾ ಅಧ್ಯಕ್ಷ ಸಂದೀಪ್ ಹರವಿನಗಂಡಿಯನ್ನು ಬದಲಾಯಿಸಿದ ಬಿಜೆಪಿ, ಆ ಸ್ಥಾನಕ್ಕೆ ನೂತನ ಅಧ್ಯಕ್ಷನಾಗಿ ಸಂತೋಷ್ ಕೋಟ್ಯಾನ್ ಎಂಬವರನ್ನು ನೇಮಕ ಮಾಡಿದೆ.
ಇದನ್ನೂ ಓದಿ: ಕಲ್ಲು ಹೊಡೆಯಬಹುದಿತ್ತು ಎಂದಿದ್ದ ತೇಜಸ್ವಿ ಸೂರ್ಯಗೆ ಹೂವು ಕೊಡಲು ಬಂದ ಕಾಂಗ್ರೆಸ್ಸಿಗರು ವಶಕ್ಕೆ