ಚಿಕ್ಕಮಗಳೂರು: 2000 ರೂಪಾಯಿ ನೋಟು (2,000 Rupee Note)ಗಳನ್ನು ಆರ್ಬಿಐ ಹಿಂಪಡೆದಿದೆ. ಅಂದರೆ ಇನ್ನು ಮುಂದೆ ಆ ನೋಟುಗಳಿಗೆ ಮೌಲ್ಯವಿಲ್ಲ. ಜನರು ತಮ್ಮಲ್ಲಿರುವ 2000ರೂ.ನೋಟುಗಳನ್ನು ಬ್ಯಾಂಕ್ಗೆ ಹೋಗಿ ಬದಲಿಸಿಕೊಳ್ಳಲು ಸೆಪ್ಟೆಂಬರ್ 30ರವರೆಗೆ ಭಾರತೀಯ ರಿಸರ್ವ್ ಬ್ಯಾಂಕ್ ಅವಕಾಶ ಕೊಟ್ಟಿದೆ. ಅದಾದ ಮೇಲೆ 2000 ರೂ. ಸಂಪೂರ್ಣವಾಗಿ ಮರೆಯಾಗಲಿದೆ.
ಆದರೆ ಚಿಕ್ಕಮಗಳೂರಿನ ಕಳಸದ ತೇಜು ಎಂಬ ಯುವಕನ ಬದುಕಲ್ಲಿ 2000 ರೂಪಾಯಿಯ ನೋಟೊಂದು ಬದುಕಿನುದ್ದಕ್ಕೂ ಜತೆಯಾಗಿ, ಸುಂದರ ನೆನಪಾಗಿ ಇದ್ದೇ ಇರುತ್ತದೆ !. ಅದನ್ನವನು ಬದಲಿಸಿಕೊಳ್ಳಲೂ ಸಾಧ್ಯವಿಲ್ಲ, ಚಲಾವಣೆ ಮಾಡಲೂ ಸಾಧ್ಯವಿಲ್ಲ. ಜತೆಗೆ ಇಟ್ಟುಕೊಳ್ಳಬೇಕು ಅಷ್ಟೇ..!. ಅದಕ್ಕೆ ಕಾರಣ ಈ ಯುವಕನಿಗೆ ಮೋದಿಯ ಮೇಲಿರುವ ಅಭಿಮಾನದಿಂದ ಮಾಡಿಕೊಂಡ ಒಂದು ಕೆಲಸ. ಹುಡುಗ ತೇಜಸ್ 2019ರಲ್ಲಿ ಮದುವೆಯಾಗುವಾಗ ಆಮಂತ್ರಣ ಪತ್ರಿಕೆಯನ್ನು ಥೇಟ್ 2000 ರೂಪಾಯಿ ನೋಟಿನಂತೆ ಮಾಡಿಸಿದ್ದ. Reserve Bank Of India ಎಂದು ಬರೆದುಕೊಂಡಿರುವಲ್ಲಿ Love Bank Of Life’ ಎಂದು ಬರೆಸಿದ್ದರು. ಹಾಗೇ, ಮದುವೆಯ ದಿನಾಂಕ, ತನ್ನ ಪತ್ನಿಯಾಗುವವಳ ಹೆಸರು ಎಲ್ಲವನ್ನೂ ಅಚ್ಚುಕಟ್ಟಾಗಿ ಪ್ರಿಂಟ್ ಮಾಡಿಸಿದ್ದರು. ಒಟ್ಟಾರೆ ಅವರ ಮದುವೆ ಆಮಂತ್ರಣ ಪತ್ರಿಕೆಯನ್ನು ಥಟ್ಟನೆ ನೋಡಿದರೆ, ಅದು 2000 ರೂ. ನೋಟು ಎಂದೇ ಎನ್ನಿಸುತ್ತದೆ.
ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: 2000 ರೂ. ನೋಟು ವಾಪಸ್ ಸೂಕ್ತ ನಿರ್ಧಾರ
ನೋಟಿನ ಮಧ್ಯದಲ್ಲಿ ಮಹಾತ್ಮ ಗಾಂಧಿಜೀಯವರ ಫೋಟೋ ಇರುವ ಜಾಗದಲ್ಲಿ ವಧು-ವರರನ್ನ ಆಶೀರ್ವದಿಸುತ್ತಿರುವ ಗಣಪತಿಯ ಭಾವಚಿತ್ರವಿದೆ. ನೋಟಿನ ಮತ್ತೊಂದು ಬದಿಯಲ್ಲಿ ಸ್ಕ್ಯಾನರ್ ಕೂಡ ಇದ್ದು. ಅದನ್ನ ಸ್ಕ್ಯಾನ್ ಮಾಡಿದರೆ ಕಳಸ ತಾಲೂಕಿನ ಮದುವೆ ಮಂಟಪಕ್ಕೆ ಬರುವ ಮಾರ್ಗ ತೋರಿಸುವಂತಿತ್ತು. ಸುಮಾರು 1500 ಕಾರ್ಡ್ ಮಾಡಿಸಿದ್ದ ಯುವಕ ಸ್ನೇಹಿತರಿಗೆಲ್ಲಾ ಅದೇ ಕಾರ್ಡ್ ಹಂಚಿದ್ದ. ಇದೀಗ ಆರ್ಬಿಐ 2000 ನೋಟನ್ನ ಹಿಂಪಡೆಯುತ್ತಿರುವಂತೆ ಯುವಕ ತೇಜಸ್ನ ಸ್ನೇಹಿತರು ಆ ನೋಟಿನ ಇನ್ವಿಟೇಷನ್ ಕಾಡ್ ಕಳಿಸಿ ನೆನಪಿಸುತ್ತಿದ್ದಾರೆ. ಉಡುಪಿಯಲ್ಲಿ ಪ್ರಿಂಟ್ ಹಾಕಿಸಿದ್ದ ಈ ಕಾರ್ಡನ್ನ ಅಚ್ಚುಕಟ್ಟಾಗಿ ಪ್ರಿಂಟ್ ಹಾಕಿಕೊಡಲು ಉಡುಪಿಯ ಆಪ್‍ಸೆಟ್ ಪ್ರಿಂಟರ್ನವರು ಕೂಡ ವಾರಗಟ್ಟಲೇ ಸಮಯ ತೆಗೆದುಕೊಂಡಿದ್ದರು. ಹೀಗಾಗಿ ಈ ಯುವಕನ ಬದುಕಲ್ಲಂತೂ 2000 ರೂ.ನೋಟು ಇಲ್ಲದಿದ್ದರೂ, ಅದರ ನೆನಪು ಹಚ್ಚಹಸಿರಾಗಿಯೇ ಇರುತ್ತದೆ.