ಚಿಕ್ಕಮಗಳೂರು: ತೆರೆದ ಬಾವಿಗೆ ಬಿದ್ದಿದ್ದ ಬೆಕ್ಕಿನ ಮರಿಯೊಂದನ್ನು ಅಗ್ನಿಶಾಮಕದಳ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಚಿಕ್ಕಮಗಳೂರು ನಗರದ ಎಂ.ಜಿ. ರಸ್ತೆ ಸಮೀಪದಲ್ಲಿದ್ದ ತೆರೆದ ಬಾವಿ (Chikkamagaluru News) ಇರುವುದನ್ನು ಕಾಣದ ಬೆಕ್ಕಿನ ಮರಿಯೊಂದು ಸುಮಾರು 30 ಅಡಿ ಆಳದ ಬಾವಿಗೆ ಬಿದ್ದಿತ್ತು. ಬಾವಿಯಲ್ಲಿ ನೀರು ಇದ್ದರಿಂದ ಮೇಲಿಂದ ಹೊರಗೆ ಬರಲು ಆಗದೆ ಬೆಕ್ಕಿನ ಮರಿಯು ಒಮ್ಮೆಲೆ ಚೀರಾಡುತ್ತಿತ್ತು.
ಬೆಕ್ಕಿನ ಮರಿಯ ಚೀರಾಟ ನರಳಾಟ ಗಮನಿಸಿದ ಸ್ಥಳೀಯರು ಬಂದು ನೋಡಿದಾಗ, ತೆರೆದ ಬಾವಿಗೆ ಬಿದ್ದಿರುವುದು ತಿಳಿದು ಬಂದಿದೆ. ಕೂಡಲೆ ಅಗ್ನಿ ಶಾಮಕದಳಕ್ಕೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸ್ಥಳಾಕ್ಕಾಮಿಸಿದ ಅಗ್ನಿಶಾಮಕ ದಳವರು ಮೂವತ್ತು ಅಡಿ ಅಳದ ತೆರೆದ ಬಾವಿಗೆ ಬಿದ್ದಿದ್ದ ಬೆಕ್ಕಿನ ಮರಿಯನ್ನು ರಕ್ಷಣೆ ಮಾಡಿದ್ದಾರೆ.
ಮೊದಲಿಗೆ ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ಅಗ್ನಿಶಾಮಕ ಸಿಬ್ಬಂದಿ ಬಾವಿಗೆ ಇಳಿದಿದ್ದಾರೆ. ಬಳಿಕ ಬುಟ್ಟಿಯನ್ನು ಬಾವಿಗೆ ಬಿಟ್ಟು ಅದರ ಸಹಾಯದಿಂದ ಬೆಕ್ಕಿನ ಮರಿಯನ್ನು ಅದರೊಳಗೆ ಇಟ್ಟು, ಮೇಲಕ್ಕೆ ಸುರಕ್ಷಿತವಾಗಿ ತಂದಿದ್ದಾರೆ. ನೀರಲ್ಲಿ ಒದ್ದಾಡಿ ಸುಸ್ತಾಗಿದ್ದ ಬೆಕ್ಕಿನ ಮರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ, ಟವೆಲ್‌ನಿಂದ ಮೈ ಒರೆಸಲಾಗಿದೆ. ಸಿಬ್ಬಂದಿಯ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಬೆಕ್ಕಿನ ಮರಿಯನ್ನು ರಕ್ಷಿಸಿದ ಖುಷಿ ಸಿಬ್ಬಂದಿಯ ಮೊಗದಲ್ಲಿ ಕಾಣುತ್ತಿತ್ತು.
ರಾಜ್ಯದ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ