Site icon Vistara News

Chikkamagaluru News | ಕಡೂರು ಕ್ಷೇತ್ರವನ್ನು ಮತ್ತೆ ಜೆಡಿಎಸ್ ತೆಕ್ಕೆಗೆ ತೆಗೆದುಕೊಳ್ಳುವುದು ನಮ್ಮ ಗುರಿ: ಎಚ್.ಡಿ.ರೇವಣ್ಣ

H D Revanna jds kadur

ಚಿಕ್ಕಮಗಳೂರು: ಕಡೂರು ಕ್ಷೇತ್ರವನ್ನು ಮತ್ತೆ ಜೆಡಿಎಸ್ ತೆಕ್ಕೆಗೆ ತೆಗೆದುಕೊಳ್ಳುವುದು ನಮ್ಮ ಗುರಿ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ತಿಳಿಸಿದರು.

ಕಡೂರಿನ ನಂದಿ ಕ್ರೀಡಾ ಭವನದಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಗುರುವಾರ (ಜ.೧೯) ಅವರು ಮಾತನಾಡಿ, ಕಡೂರು ಕ್ಷೇತ್ರದವರು ದೇವೇಗೌಡ, ಪ್ರಜ್ವಲ್ ಅವರ ಕೈ ಹಿಡಿದಿದ್ದಾರೆ. ಕ್ಷೇತ್ರದ ಮತದಾರರ ಋಣ ನಮ್ಮ ಮೇಲಿದೆ. ದೇವೇಗೌಡರು ಕ್ಷೇತ್ರಕ್ಕೆ ಏನು ಮಾಡಿದರು ಎಂಬುದು ಎಲ್ಲರಿಗೂ ಗೊತ್ತಿದೆ. ದೇವೇಗೌಡರು ಸಾಕಷ್ಟು ಅನುದಾನವನ್ನು ಈ ಕ್ಷೇತ್ರಕ್ಕೆ ನೀಡಿದ್ದಾರೆ. ಇನ್ನು ನಾನು ಸಚಿವನಾಗಿದ್ದಾಗ ಕ್ಷೇತ್ರಕ್ಕೆ 250 ಕೋಟಿ ರೂಪಾಯಿಗೂ ಹೆಚ್ಚು ಅನುದಾನ ದೊರೆತಿದೆ ಎಂದು ಹೇಳಿದರು.

ಈ ಹಿಂದೆ ಕೆ.ಎಂ.ಕೃಷ್ಣಮೂರ್ತಿ, ಧರ್ಮೇಗೌಡರ ಕೊಡುಗೆಯನ್ನು ಜನ ಮರೆತಿಲ್ಲ. ಇನ್ನು ದೇವೇಗೌಡರು ದತ್ತ ಅವರನ್ನು ಹೇಗೆ ನೋಡಿಕೊಂಡರು ಎಂಬುದು ವಿಶೇಷವಾಗಿ ಹೇಳಬೇಕಿಲ್ಲ. ಅವರಿಗಾಗಿ ಎಷ್ಟು ಸಹಾಯ ಮಾಡಿದರು ಎಂಬುದನ್ನೂ ವಿವರಿಸಬೇಕಿಲ್ಲ. ಆದರೂ ಅವರು ಕಾಂಗ್ರೆಸ್‌ಗೆ ಹೋಗಿದ್ದಾರೆ. ಹಿಂದೆ ಬಿ.ಎಲ್.ಶಂಕರ್ ಅವರು ಹೀಗೆ ಪಕ್ಷದಲ್ಲಿ ಎತ್ತರಕ್ಕೆ ಬೆಳೆದು ಕಾಂಗ್ರೆಸ್‌ಗೆ ಹೋದರು. ಈಗ ಅವರ ಸ್ಥಿತಿ ಏನಾಗಿದೆ? ದತ್ತ ಅವರಿಗೆ ಒಳ್ಳೆಯದಾಗಲಿ ಎಂಬುದಷ್ಟೇ ನಮ್ಮ ಹಾರೈಕೆ ಎಂದರು.

ಇದನ್ನೂ ಓದಿ | Raghuram Rajan | ರಾಹುಲ್ ಗಾಂಧಿ ಪಪ್ಪು ಅಲ್ಲ, ಅವರು ಸ್ಮಾರ್ಟ್‌ ಮ್ಯಾನ್ ಎಂದ ರಘುರಾಮ್ ರಾಜನ್

ಪಂಚಾಯಿತಿಗೊಂದು ಆಸ್ಪತ್ರೆ, ನಾಗರಿಕರಿಗೆ ನೆಮ್ಮದಿಯಾಗಿ ಬದುಕಲು ಬೇಕಾದ ಸೌಲಭ್ಯಗಳನ್ನು ನೀಡುವ ಆಶಯ ಕುಮಾರಸ್ವಾಮಿ ಅವರದ್ದಾಗಿದೆ. ಅದರ ಭಾಗವೇ ಪಂಚರತ್ನ ಯಾತ್ರೆ. ಅದು ಸಾಕಾರವಾಗುತ್ತದೆ ಎಂಬುದರಲ್ಲಿ ಅನುಮಾನವಿಲ್ಲ. ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುವುದು ಶತಸಿದ್ಧ. ಕಡೂರಿನಲ್ಲೂ ಮತ್ತೆ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ನಮ್ಮ ಶ್ರಮ ನಿರಂತರ ಎಂದರು.

ಇದನ್ನೂ ಓದಿ | Actress Prema | ಕಂಕಣ ಭಾಗ್ಯ ಕರುಣಿಸುವಂತೆ ಕೊರಗಜ್ಜನಲ್ಲಿ ಬೇಡಿಕೊಂಡ ನಟಿ ಪ್ರೇಮಾ

ಬೇಲೂರು ಶಾಸಕ ಲಿಂಗೇಶ್, ಮುಖಂಡರಾದ ಸಿ.ಆರ್. ಪ್ರೇಮ್‌ ಕುಮಾರ್, ಬಿ.ಪಿ.ನಾಗರಾಜು, ಪಂಚನಹಳ್ಳಿ ಪಾಪಣ್ಣ, ಬಿ.ಟಿ.ಗಂಗಾಧರ ನಾಯ್ಕ, ತಾಲೂಕು ಜೆಡಿಎಸ್ ಅಧ್ಯಕ್ಷ ಕೋಡಿಹಳ್ಳಿ ಮಹೇಶ್ವರಪ್ಪ, ಕೆಎಂಎಫ್ ನಿರ್ದೇಶಕ ಬಿದರೆ ಜಗದೀಶ್, ಸೋನಾಲ್ ಧರ್ಮೇಗೌಡ, ಪುರಸಭಾ ಸದಸ್ಯ ಮರುಗುದ್ದಿ ಮನು, ಹಳೇಹಟ್ಟಿ ಆನಂದ ನಾಯ್ಕ ಇದ್ದರು.

ಇದನ್ನೂ ಓದಿ | Chikkamagakuru Jilla Utsava: ಜಿಲ್ಲಾ ಉತ್ಸವದಲ್ಲಿ ಎತ್ತಿನ ಗಾಡಿ ಓಡಿಸಿದ ಸಿ.ಟಿ. ರವಿ; ಕೃಷಿ ಕಾರ್ಯಕ್ರಮಕ್ಕಾಗಿ ಅಣ್ಣಾಮಲೈ ಭಾಗಿ

Exit mobile version