ಚಿಕ್ಕಮಗಳೂರು : ಸಂಬಳ ಕೇಳಿದ್ದಕ್ಕೆ (Salary Issue) ಹೋಟೆಲ್ ಕಾರ್ಮಿಕನಿಗೆ ಮನಸ್ಸೋ ಇಚ್ಛೆ ಹಲ್ಲೆ (Assault Case) ನಡೆಸಿರುವ ಘಟನೆ ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ಸೋಮಲಾಪುರ ನಿರ್ಜನ ಪ್ರದೇಶದಲ್ಲಿ (Chikkmagalur News) ನಡೆದಿದೆ. ಸತೀಶ್ ಹಲ್ಲೆಗೊಳಗಾದ ಹೋಟೆಲ್ ಕಾರ್ಮಿಕರಾಗಿದ್ದಾರೆ.
ಸತೀಶ್ ಬೆಂಗಳೂರಿನ ಕೊಪ್ಪ ಮೂಲದ ಮಂಜು ಎಂಬುವರ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ. ಸಂಬಳದ ವಿಚಾರವಾಗಿ ಗಲಾಟೆಯಾಗಿದ್ದರಿಂದ ಕೆಲಸ ಬಿಟ್ಟು ಸತೀಶ್ ವಾಪಸ್ ಊರಿಗೆ ಬಂದಿದ್ದ. ಈ ನಡುವೆ ಕೆಲಸ ಮಾಡಿದ ಹಣವನ್ನು ಕೇಳಲು ಹೋಟೆಲ್ ಮಾಲೀಕ ಮಂಜುಗೆ ಫೋನ್ ಮಾಡಿದ್ದ.
ಇದರಿಂದ ಸಿಟ್ಟಿಗೆದ್ದ ಮಂಜು ಸಹೋದರ ಹಾಗೂ ಆತನ ನಾಲ್ಕೈದು ಸ್ನೇಹಿತರು ಹಣ ಕೊಡುತ್ತೇನೆ ಎಂದು ಕರೆಸಿಕೊಂಡಿದ್ದಾರೆ. ನಂತರ ರೆಸ್ಟೋರೆಂಟ್‌ಗೆ ಕರೆದುಹೋಗಿ ಕಂಠಪೂರ್ತಿ ಕುಡಿಸಿದ್ದಾರೆ. ಹಣ ಕೊಡುತ್ತೇನೆ ಎಂದೇಳಿ ಬೈಕ್‌ನಲ್ಲಿ ಕೂರಿಸಿಕೊಂಡು ಸೋಮಲಾಪುರದ ಸಮೀಪದ ಕಾಡಿನ ಮಧ್ಯೆ ಕರೆದು ಹೋಗಿದ್ದಾರೆ. ಬೈಕ್‌ನಿಂದ ಇಳಿಯುತ್ತಿದ್ದಂತೆ ಹಗ್ಗದಿಂದ ಕಟ್ಟಿಹಾಕಿ, ಬಟ್ಟೆ ಬಿಚ್ಚಿಸಿ ಸತೀಶ್‌ನನ್ನು ಮರಕ್ಕೆ ಕಟ್ಟಾಕಿ ಕಬ್ಬಿಣದ ರಾಡ್, ದೊಣ್ಣೆಯಿಂದ ಮನಬಂದಂತೆ ಥಳಿಸಿದ್ದಾರೆ.
ಇದನ್ನೂ ಓದಿ: Road Accident : ಟ್ರ್ಯಾಕ್ಟರ್ ಟೇಲರ್ ಪಲ್ಟಿ; ನಾಲ್ವರು ಮಹಿಳೆಯರು ದಾರುಣ ಸಾವು
ಅರ್ಧ ದಿನ ಪೂರ್ತಿ ಹಲ್ಲೆ ನಡೆಸಿ, ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎಂದು ಸತೀಶ್ ಆರೋಪಿಸಿದ್ದಾರೆ. ಮಾತ್ರವಲ್ಲದೇ ವಾಪಸ್ ಬೆಂಗಳೂರಿಗೆ ಹೋಗಿ ಮಂಜು ಹೋಟೆಲ್‌ನಲ್ಲಿ ಕೆಲಸ ಮಾಡಬೇಕು. ಹೋಗದಿದ್ದರೆ ಇದೇ ರೀತಿ ಹಿಂಸೆ ಕೊಟ್ಟು ಸಾಯಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಸತೀಶ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಮನಸೋ ಇಚ್ಛೆ ಹಲ್ಲೆ ನಡೆಸಿದ ನಂತರ ದೇವೇಗೌಡ ಪೆಟ್ರೋಲ್ ಬಂಕ್ ಬಳಿ ಬಿಟ್ಟು, ಪೊಲೀಸ್ ಠಾಣೆಗೆ ತೆರಳಿ ದೂರು ಕೊಟ್ಟರೆ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಹೆದರಿಸಿದ್ದರಂತೆ.
ಸದ್ಯ ಗಂಭೀರ ಗಾಯಗೊಂಡಿರುವ ಸತೀಶ್ ಕೊಪ್ಪ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಕೊಪ್ಪ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ