ಚಿಕ್ಕಮಗಳೂರು: ಇಲ್ಲಿನ ಸಗನಿಪುರ ಗ್ರಾಮದಲ್ಲಿ ಕುಡಿದ ನಶೆಯಲ್ಲಿ ಯುವಕನೊಬ್ಬ ವ್ಯಕ್ತಿಯ ಹೆಬ್ಬೆರಳನ್ನೇ (Assault case) ತುಂಡಾರಿಸಿದ್ದಾನೆ. ಕುಮಾರಸ್ವಾಮಿ ಎಂಬುವವರು ಹಲ್ಲೆಗೊಳಗಾದವರು. ಕೌಶಿಕ್ ಆರೋಪಿಯಾಗಿದ್ದಾನೆ.
ಕೌಶಿಕ್ ತಂದೆಗೆ ಕುಮಾರಸ್ವಾಮಿ ಮೇಲೆ ಹಳೇ ದ್ವೇಷವೊಂದು ಇತ್ತು. ಹೀಗಾಗಿ ಮಾರಕಾಸ್ತ್ರದಿಂದ ಹಲ್ಲೆ ಮಾಡಿ ಬಯಕೆ ತೀರಿಸಿಕೊಂಡಿದ್ದಾನೆ. ಹಳೆ ದ್ವೇಷಕ್ಕೆ ಕುಮಾರಸ್ವಾಮಿಯ ಮೇಲೆ ಲಾಂಗು ಬೀಸಿದ್ದು, ರಭಸಕ್ಕೆ ಕುಮಾರಸ್ವಾಮಿಯ ಹೆಬ್ಬೆರಳು ತುಂಡಾಗಿದೆ.
ತೀವ್ರವಾಗಿ ಗಾಯಗೊಂಡಿರುವ ಕುಮಾರಸ್ವಾಮಿಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಹೆಬ್ಬೆರಳು ಕಳೆದುಕೊಂಡು ನರಳಾಡುತ್ತಿದ್ದಾರೆ. ಮಧ್ಯದ ಅಮಲಿನಲ್ಲಿ ಬಂದು ಕೌಶಿಕ್ ಹಲ್ಲೆ ಮಾಡಿದ್ದಾನೆ. ಇನ್ನು ಸೋಶಿಯಲ್ ಮೀಡಿಯಾದಲ್ಲೂ ಲಾಂಗು, ಮಚ್ಚು, ಚೈನು ಹಿಡಿದು ಪೋಸ್ ಕೊಟ್ಟಿದ್ದಾನೆ. ಸದ್ಯ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Chaitra Kundapura : ಗೋವಿಂದ ಪೂಜಾರಿಗೆ ಇದೆ ಹೈಲೆವೆಲ್ ಸಂಪರ್ಕ; ಆದರೂ ಚೈತ್ರಾ ಹಿಂದೆ ಬಿದ್ದಿದ್ದೇಕೆ? TRAP ಮಾಡಿದ್ರಾ?
ಹೋಟೆಲ್‌ಗೆ ನುಗ್ಗಿ ತಮಿಳುನಾಡು ಡಿಎಂಕೆ ಮುಖಂಡನ ಮೇಲೆ ಡೆಡ್ಲಿ ಅಟ್ಯಾಕ್!
ಬೆಂಗಳೂರು: ಹೋಟೆಲ್‌ಗೆ ಬಂದ ಕೆಲವರು ತಮ್ಮಗಿಷ್ಟದ ತಿಂಡಿ ಆರ್ಡರ್ ಮಾಡಿ ಕಾಯುತ್ತಿದ್ದರು. ಮಕ್ಕಳೊಂದಿಗೆ ಬಂದ ಪೋಷಕರು ರುಚಿ ರುಚಿಯಾದ ಊಟ ಸವಿಯುತ್ತಿದ್ದರು. ಜಸ್ಟ್ 20 ಸೆಕೆಂಡ್‌ನಲ್ಲಿ ಆ ಹೋಟೆಲ್‌ನ ಚಿತ್ರಣವೇ ಬದಲಾಗಿತ್ತು. ತಮಿಳುನಾಡಿನ ಮದುರೈನ ನಟೋರಿಯಸ್ ರೌಡಿ ಪಾಂಡಿಯನ್ ಗ್ಯಾಂಗ್ ಮಚ್ಚು-ಲಾಂಗು (Assault Case) ಝಳಪಿಸಿದ್ದರು.
ಇಲ್ಲಿನ ಬಾಣಸವಾಡಿ ಠಾಣಾ ವ್ಯಾಪ್ತಿಯಲ್ಲಿ ತಮಿಳುನಾಡು ಡಿಎಂಕೆ ಮುಖಂಡ ವಿ.ಕೆ.ಗುರುಸ್ವಾಮಿ ಮೇಲೆ ಹಲ್ಲೆ ನಡೆದಿದೆ. 70 ಕ್ಕೂ ಹೆಚ್ಚು ಬಾರಿ ತಲ್ವಾರ್, ಮಚ್ಚು, ಲಾಂಗಿನಿಂದ ಹಲ್ಲೆ ಮಾಡಿರುವ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸೆಪ್ಟೆಂಬರ್ 4 ರಂದು ಸಂಜೆ 4.30ಕ್ಕೆ ನಡೆದಿರುವ ಈ ಡೆಡ್ಲಿ ಅಟ್ಯಾಕ್ ಬೆಚ್ಚಿ ಬೀಳಿಸುವಂತಿದೆ.
ಇದನ್ನೂ ಓದಿ: Self Harming: ಸಾಯಲೆಂದೇ ಧರ್ಮಸ್ಥಳಕ್ಕೆ ಹೋಗಿದ್ದ ಆಕೆ ಮರಳಿ ಬಂದು ಕಟ್ಟಡದಿಂದ ಜಿಗಿದು ಪ್ರಾಣ ಕಳೆದುಕೊಂಡಳು
ಡಿಎಂಕೆ ಮುಖಂಡ ವಿ.ಕೆ.ಗುರುಸ್ವಾಮಿ ಅವರು ಹೋಟೆಲ್‌ವೊಂದರಲ್ಲಿ ಬ್ರೋಕರ್ ಜತೆಗೆ ಕೂತು ಕಾಫಿ ಕುಡಿಯುತ್ತಾ ಮಾತಾಡುತ್ತಿದ್ದರು. ಈ ವೇಳೆ ಮಾರಕಾಸ್ತ್ರ ಹಿಡಿದು ಬಂದ ಮದುರೈನ ನಟೋರಿಯಸ್ ರೌಡಿ ಪಾಂಡಿಯನ್ ಗ್ಯಾಂಗ್ ಒಮ್ಮೆಲೆ ಮುಗಿಬಿದ್ದು ದಾಳಿ ಮಾಡಿದೆ.
ಸುಮಾರು ಐದಾರು ಜನರ ತಂಡ ಗುರುಸ್ವಾಮಿಯವರನ್ನು ಹೋಟೆಲ್ ತುಂಬಾ ಅಟ್ಟಾಡಿಸಿ ಹಲ್ಲೆ ಮಾಡಿದ್ದಾರೆ. 70 ಕ್ಕೂ ಹೆಚ್ಚು ಬಾರಿ ಲಾಂಗ್ ಏಟು ಬಿದ್ದರೂ ಗುರುಸ್ವಾಮಿ ಪ್ರಾಣಾಪಾಯದಿಂದ ಪಾರಾಗಿ ಬದುಕುಳಿದಿದ್ದಾರೆ. ಇತ್ತ ರೌಡಿಗಳು ದಾಳಿ ಮಾಡುತ್ತಿದ್ದಂತೆ ಚೆಲ್ಲಾಪಿಲ್ಲಿಯಾಗಿ ಜನರು, ಹೋಟೆಲ್ ಸಿಬ್ಬಂದಿ ಓಡಿ ಹೋಗಿದ್ದಾರೆ.
ಸಿಸಿಟಿವಿಯಲ್ಲಿ ಸೆರೆಯಾದ ಹಲ್ಲೆ ವಿಡಿಯೊ
ಸದ್ಯ ಘಟನೆ ಸಂಬಂಧ ಕಾರ್ತಿಕ್, ವಿನೋದ್ ಕುಮಾರ್, ಪ್ರಸನ್ನ ಎಂಬುವವರನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಈ ದಾಳಿ ಯಾಕಾಗಿ ನಡೆದಿದೆ ಎಂಬುದರ ಕುರಿತು ತನಿಖೆಯನ್ನು ಮುಂದುವರಿಸಿದ್ದಾರೆ. ಗಾಯಾಳು ಗುರುಸ್ವಾಮಿಗೆ ಚಿಕಿತ್ಸೆ ಮುಂದುವರಿದಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ