Site icon Vistara News

Sharath murder case | ಬೆಂಗಳೂರಿನ ಯುವಕ ಶರತ್‌ ಕೊಲೆ ಕೇಸ್‌, ಚಾರ್ಮಾಡಿ ಘಾಟ್‌ನಲ್ಲಿ ಮೃತದೇಹ ಪತ್ತೆಗೆ ಶೋಧ

ಚಿಕ್ಕಮಗಳೂರು: ಬೆಂಗಳೂರಿನ ಯುವಕ ಶರತ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿ, ಅವರ ಮೃತದೇಹಕ್ಕಾಗಿ ಚಾರ್ಮಾಡಿ ಘಾಟ್‌ನಲ್ಲಿ ಎರಡನೇ ದಿನವೂ ಶೋಧ ಕಾರ್ಯ ಮುಂದುವರಿದಿದೆ. (Sharath murder case) ಕಳೆದ ಎರಡು ದಿನಗಳಿಂದ ಹುಡುಕಾಟ ನಡೆಸುತ್ತಿದ್ದರೂ, ಕಳೇವರ ಪತ್ತೆಯಾಗಿಲ್ಲ.

ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಮೃತದೇಹವನ್ನು ಆರೋಪಿಗಳು ಎಸೆದು ಹೋಗಿದ್ದರು. ಸ್ಥಳಕ್ಕೆ ಇಬ್ಬರು ಆರೋಪಿಗಳನ್ನು ಕರೆತಂದು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಆರೋಪಿ ಶರತ್ ಹಾಗೂ ಧನುಷ್‌ನನ್ನು ಕರೆತರಲಾಗಿದೆ. ಕ್ಷಣಕ್ಕೊಂದು ಜಾಗವನ್ನು ಆರೋಪಿಗಳು ತೋರಿಸುತ್ತಿದ್ದು, ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ಸಾವಿರಾರು ಅಡಿ ಪ್ರಪಾತದ ಚಾರ್ಮಾಡಿಯಲ್ಲಿ ತನಿಖೆ ಜಟಿಲವಾಗಿದೆ. ಹೀಗಿದ್ದರೂ, ಮೂಡಿಗೆರೆಯಲ್ಲಿ ಶೋಧ ಕಾರ್ಯ ನಡೆದಿದೆ. ಸ್ಥಳೀಯರೂ ಸಹಕರಿಸುತ್ತಿದ್ದಾರೆ.

ಇದನ್ನೂ ಓದಿ | Road accident | ಅಪಘಾತದಲ್ಲಿ ಮೃತಪಟ್ಟ ಸವದತ್ತಿ ಯಲ್ಲಮ್ಮ ಭಕ್ತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಘೋಷಣೆ

Exit mobile version