ಚಿಕ್ಕಮಗಳೂರು : ಕ್ರಿಸ್‌ಮಸ್ ರಜೆ ಇದೆ ಅಂತ ನೀವೆನಾದರೂ ಫ್ಯಾಮಿಲಿ, ಫ್ರೆಂಡ್ಸ್ ಜತೆಗೆ ಡಿ.22ರ ಬಳಿಕ ಚಿಕ್ಕಮಗಳೂರು (Chikkamagaluru News) ಟ್ರಿಪ್‌ಗೆ ಪ್ಲ್ಯಾನ್ ಮಾಡಿದರೆ ಅದು ಫ್ಲಾಪ್ ಆಗುವುದು ಪಕ್ಕಾ. ಯಾಕೆಂದರೆ ಚಿಕ್ಕಮಗಳೂರು ಪ್ರವಾಸಿ ತಾಣಗಳಿಗೆ (Chikkamagaluru Tourist Spot) ಜಿಲ್ಲಾಡಳಿತ ನಿರ್ಬಂಧ ಹೇರಿದೆ.
6 ದಿನಗಳ ಕಾಲ ಪಶ್ಚಿಮ ಘಟ್ಟಗಳ ಸಾಲಿನ ಪ್ರವಾಸಿ ತಾಣಗಳು ನಿರ್ಬಂಧವಾಗಲಿದೆ. ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಗಾಳಿಕೆರೆ, ಮಾಣಿಕ್ಯಾಧಾರಾ ಸೇರಿದಂತೆ ಎಲ್ಲ ಪ್ರವಾಸಿ ತಾಣಗಳನ್ನು ಬಂದ್ ಮಾಡಲಾಗುತ್ತಿದೆ. ಡಿಸೆಂಬರ್ 22 ರಿಂದ 27ರವರೆಗೆ 6 ದಿನಗಳ ಕಾಲ ಗಿರಿಭಾಗಕ್ಕೆ ಟೂರಿಸ್ಟ್ ಬ್ಯಾನ್ ಮಾಡಲಾಗಿದೆ.
ಡಿಸೆಂಬರ್ 24, 25, 26ರಂದು ಕಾಫಿನಾಡು ಚಿಕ್ಕಮಗಳೂರಲ್ಲಿ ದತ್ತಪೀಠದಲ್ಲಿ ದತ್ತ ಜಯಂತಿ ಶುರುವಾಗಲಿದೆ. ಡಿ. 26ರಂದು 20 ಸಾವಿರಕ್ಕೂ ಅಧಿಕ ಮಾಲಾಧಾರಿಗಳು ದತ್ತಪೀಠಕ್ಕೆ ಆಗಮಿಸುತ್ತಾರೆ. ಐ.ಡಿ ಪೀಠಕ್ಕೆ ತೆರಳುವ ರಸ್ತೆಯು ಕಿರಿದಾಗಿದ್ದು, ವಾಹನಗಳ ದಟ್ಟಣೆಯಾಗುತ್ತದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತವು ಪ್ರವಾಸಕ್ಕೆ ನಿರ್ಬಂಧ ಹೇರಿದೆ. ಜತೆಗೆ ಗಿರಿ ಭಾಗದಲ್ಲಿ ಕ್ರಿಸ್ ಮಸ್ ಸೆಲೆಬ್ರೇಷನ್ ಮಾಡುವುದಕ್ಕೂ ಬ್ರೇಕ್ ಹಾಕಲಾಗಿದೆ. 6 ದಿನಗಳ ಕಾಲ ಚಂದ್ರದ್ರೋಣ ಪರ್ವತಗಳ ಸಾಲಿನ ಪ್ರವಾಸಿ ತಾಣಗಳಿಗೆ ಟೂರಿಸ್ಟ್ ವಿಸಿಟ್ ಬ್ಯಾನ್ ಮಾಡಲಾಗಿದೆ.
ಹೊಸ ವರ್ಷಕ್ಕೆ ನಶೆಯೇರಿಸಲು ರೆಡಿ; 21 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶ!
ಬೆಂಗಳೂರು: ರಾಜಧಾನಿಯಲ್ಲಿ ಹೊಸ ವರ್ಷಾಚರಣೆ (New Year in Bangalore) ಎಂದರೆ ಮದ್ಯ ಮತ್ತು ಡ್ರಗ್ಸ್ ನಶೆಯಲ್ಲಿ (drugs menace) ತೇಲಾಡುವುದು ಎಂಬ ಭಾವನೆ ಹೆಚ್ಚಾಗುತ್ತಿದೆ. ಕಳೆದ ಕೆಲವು ವರ್ಷಗಳಿಂದ ಡಿಸೆಂಬರ್ 31ರ ರಾತ್ರಿ ಕಾಣಿಸುವ ಚಿತ್ರಗಳು ಇದನ್ನು ಸಾರಿ ಹೇಳುತ್ತಿವೆ. ಮೈಮೇಲೆ ಪ್ರಜ್ಞೆ ಇಲ್ಲದೆ ಬಿದ್ದುಕೊಂಡ ಹುಡುಗಿಯರು, ಏನು ಮಾಡಿದರೂ ಅರಿವೇ ಆಗದ ಸ್ಥಿತಿಯಲ್ಲಿ ಬಿದ್ದುಕೊಂಡವರು, ಕಂಡ ಕಂಡವರ ಜತೆ ಜಗಳಕ್ಕೆ ಇಳಿಯುವ ಹುಡುಗರು.. ನಶೆಯ ಮತ್ತಿನಲ್ಲಿ ಕಳೆದು ಹೋದವರು ದೊಡ್ಡ ಸಂಖ್ಯೆಯಲ್ಲಿ ಕಾಣುತ್ತಾರೆ. ಇಂಥವರ ನಶೆಯ ಆಸೆಯನ್ನು ಈಡೇರಿಸಲು ಡ್ರಗ್ ಪೆಡ್ಲರ್‌ಗಳು ಕೂಡಾ ರೆಡಿಯಾಗಿದ್ದಾರೆ. ಮಂಗಳವಾರ ಬೆಂಗಳೂರಿನಲ್ಲಿ ನಡೆದ ದಾಳಿಯೊಂದರಲ್ಲಿ 21 ಕೋಟಿ ಮೌಲ್ಯದ ಡ್ರಗ್ಸ್ ವಶವಾಗಿರುವುದು (Drugs Siezed) ಇದನ್ನೆಲ್ಲ ಸಾರಿ ಹೇಳುತ್ತಿದೆ.
ಸಿಸಿಬಿ ಪೊಲೀಸರು ಮಂಗಳವಾರ ರಾತ್ರಿ ರಾಮಮೂರ್ತಿ ನಗರದ ಮನೆಗೆ ದಾಳಿ ಮಾಡಿ ಆಫ್ರಿಕನ್ ಪ್ರಜೆಯೊಬ್ಬನನ್ನು ಬಂಧಿಸಿದ್ದಾರೆ. ಆತ ದೊಡ್ಡ ಪ್ರಮಾಣದಲ್ಲಿ ಮಾದಕ ವಸ್ತುಗಳನ್ನು ಶೇಖರಣೆ ಮಾಡಿದ್ದರ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು.
ದಾಳಿ ಮಾಡಿದಾಗ ಅಲ್ಲಿ 21 ಕೋಟಿ ಬೆಲೆಬಾಳುವ 16 ಕೆಜಿ ಎಂಡಿಎಂಎ ಮತ್ತು 500 ಗ್ರಾಂ ಕೊಕೇನ್ ಪತ್ತೆಯಾಗಿದೆ. ವಶವಾದ ಎಂಡಿಎಂಎ ಮೌಲ್ಯ 16 ಕೋಟಿ ರೂ.! ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆತ ಯಾರಿಗೆಲ್ಲ ಇದನ್ನು ಸಪ್ಲೈ ಮಾಡುತ್ತಿದ್ದ ಎಂಬುದರ ಮಾಹಿತಿಯನ್ನು ಕೂಡಾ ಸಂಗ್ರಹಿಸುತ್ತಿದ್ದಾರೆ. ಆರೋಪಿಯು ಸೋಪ್ ಬಾಕ್ಸ್ , ಚಾಕ್ಲೇಟ್ ಬಾಕ್ಸ್ ನಲ್ಲಿಟ್ಟು ಡ್ರಗ್ಸ್ ಮಾರಾಟ ಮಾಡುತ್ತಿದ್ದ ಎನ್ನುವುದು ಪ್ರಾಥಮಿಕವಾಗಿ ಸಿಕ್ಕಿರುವ ಮಾಹಿತಿ. ಆತ ವರ್ಷವಿಡೀ ಡ್ರಗ್ಸ್ ದಂಧೆ ನಡೆಸುತ್ತಾನೆ. ಆದರೆ, ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ತರಿಸಿಕೊಳ್ಳಲು ಕಾರಣ ಹೊಸ ವರ್ಷಾಚರಣೆ.
ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ನೆಪದಲ್ಲಿ ನಡೆಯುವ ಗುಂಡು ಪಾರ್ಟಿ, ರೇವ್ ಪಾರ್ಟಿಗಳಿಗೆ ಇವುಗಳನ್ನು ಮಾರಾಟ ಮಾಡಲು ಅವರು ಬೇಡಿಕೆಯನ್ನು ಪಡೆದಿದ್ದ. ಅಂದ ಹಾಗೆ ಬೆಂಗಳೂರು ಪೊಲೀಸ್ ಇತಿಹಾಸದಲ್ಲಿಯೇ ಒಂದೇ ದಾಳಿಯಲ್ಲಿ ಸಿಕ್ಕಿದ ಅತಿ ದೊಡ್ಡ ಮೊತ್ತದ ಡ್ರಗ್ಸ್ ಇದು ಎಂದು ತಿಳಿದುಬಂದಿದೆ.
ಇದೊಂದು ದೊಡ್ಡ ಜಾಲ
ಈ ಆಫ್ರಿಕನ್ ಪ್ರಜೆಗೆ ದೇಶ ಮತ್ತು ವಿದೇಶಗಳಲ್ಲಿ ಹಲವಾರು ಸಂಪರ್ಕ ಕೊಂಡಿಗಳಿವೆ. ಆತ ವಿದೇಶಿ ಮೂಲದ ವ್ಯಕ್ತಿಗಳಿಂದ ಸೀರೆ , ಚೂಡಿದಾರ, ಬಟ್ಟೆಗಳಲ್ಲಿ ಡ್ರಗ್ಸ್ ತರಿಸಿಕೊಳ್ತಿದ್ದ ಎನ್ನಲಾಗಿದೆ. ದೆಹಲಿ, ಮುಂಬೈ ಹಾಗು ಇತರ ರಾಜ್ಯಗಳಿಂದಲೂ ವಿದೇಶಿ ಪ್ರಜೆಗಳ ಮೂಲಕವೇ ಡ್ರಗ್ಸ್ ತರಿಸಿಕೊಳ್ಳುತ್ತಿದ್ದ. ಅದನ್ನು ಬೆಂಗಳೂರಿನ ನಾನಾ ಕಡೆಗಳಿಗೆ ಹಂಚುತ್ತಿದ್ದ. ಆತನಿಗೆ ಬೇಡಿಕೆ ಇಡುವ ಮತ್ತು ಅದನ್ನು ಬೇಕಾದವರಿಗೆ ತಲುಪಿಸುವ ಒಂದು ದೊಡ್ಡ ಗ್ಯಾಂಗ್ ಕೆಲಸ ಮಾಡುತ್ತಿದೆ ಎನ್ನಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ