Site icon Vistara News

ಮಲೆಮನೆ ಗ್ರಾಮದ ಸಂತ್ರಸ್ತರಿಂದ ದಯಾಮರಣಕ್ಕೆ ಮನವಿ

ಚಿಕ್ಕಮಗಳೂರು: ಮಲೆಮನೆ ಗ್ರಾಮದ 5 ಕುಟುಂಬಗಳು ಸರ್ಕಾರದಿಂದ ಸಿಗಬೇಕಾದ ಪರಿಹಾರ ಸಿಗದಿರುವ ಕಾರಣದಿಂದ ಸಾಮುಹಿಕ ಆತ್ಮಹತ್ಯೆಯ ನಿರ್ಧಾರ ಮಾಡಿದ್ದಾರೆ. ಅಲ್ಲದೆ, ರಾಷ್ಟ್ರಪತಿಗಳಿಗೆ ದಯಾಮರಣಕ್ಕೆ ಅನುಮತಿ ನೀಡುವಂತೆ ಪತ್ರ ಬರೆದು ಮನವಿ ಮಾಡಿದ್ದಾರೆ.

2019ರಲ್ಲಿ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಮಲೆಮನೆ ಗ್ರಾಮದಲ್ಲಿ ಪ್ರವಾಹ ಉಂಟಾಗಿ 5 ಮನೆಗೆಳು ಸಂಪೂರ್ಣ ಕೊಚ್ಚಿಹೊಗಿದ್ದವು. ಹಾಗೂ ಅವರ ಬದುಕಿಗೆ ಆಧಾರವಾಗಿದ್ದ ತೋಟ-ಗದ್ದೆಗಳು ನಾಶವಾಗಿದ್ದವು. ಆಗ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಗ್ರಾಮಕ್ಕೆ ಭೇಟಿ ನೀಡಿ ಸಂತ್ರಸ್ತರಿಗೆ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದರು. ಪ್ರವಾಹದಿಂದ ಉಂಟಾದ ನಾಶಕ್ಕೆ ಪರ್ಯಾಯ ಬದುಕು ಕಟ್ಟಿಕೊಡುವುದಾಗಿ ತಿಳಿಸಿದ್ದರು.

ಆದರೆ ಈ ಘಟನೆ ನಡೆದು ಮೂರು ವರ್ಷಗಳಾದರೂ ಈವರೆಗೆ ಯಾವುದೇ ಸ್ಪಂದನೆ ನೀಡಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಸಂತ್ರಸ್ತರು ಸತತವಾಗಿ ಈ ವಿಷಯಕ್ಕೆ ಸಂಬಂಧಪಟ್ಟ ಜನಪ್ರತಿನಿಧಿಗಳು-ಅಧಿಕಾರಿಗಳ ಕಚೇರಿಗಳಿಗೆ ಅಲೆದಿದ್ದಾರೆ. ಆದರೆ, ಅದರಿಂದ ಯಾವುದೇ ಉಪಯೋಗ ಕಂಡುಬಂದಿಲ್ಲ ಎಂದು ಸಂತ್ರಸ್ತರು ಇದೀಗ ಸಾಮೂಹಿಕ ಆತ್ಮಹತ್ಯೆಗೆ ಮುಂದಾಗಿದ್ದಾರೆ. ಮನನೊಂದ ಗ್ರಾಮಸ್ಥರು ರಾಷ್ಟ್ರಪತಿಗಳಿಗೆ ಪತ್ರ ಬರೆದು ದಯಾಮರಣಕ್ಕೆ ಮನವಿ ಮಾಡಿದ್ದಾರೆ.

https://vistaranews.com/wp-content/uploads/2022/04/WhatsApp-Video-2022-04-26-at-10.25.29-AM.mp4

ಇದನ್ನೂ ಓದಿ: ಖಡಕ್‌ CM ಅಂದರೆ ಏನು?: ಪ್ರತಿಪಕ್ಷಗಳಿಗೆ ಬಸವರಾಜ ಬೊಮ್ಮಾಯಿ ಪ್ರಶ್ನೆ

Exit mobile version