ಚಿಕ್ಕಮಗಳೂರು: ಯೂತ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಹಾಗೂ ಕಾರ್ಯದರ್ಶಿ ನಿತೀಶ್ ಬೆಂಬಲಿಗರ ನಡುವೆ ಮಾರಾಮಾರಿ ನಡೆದಿದೆ. ಈ ಮೂಲಕ ಚಿಕ್ಕಮಗಳೂರು ಯೂತ್ ಕಾಂಗ್ರೆಸ್‌ನ (youth congress clash) ಒಳ ಜಗಳ ಬೀದಿಗೆ ಬಂದಿದೆ.
ಯೂತ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಅವರು ಕಾರ್ಯದರ್ಶಿ ಸ್ಥಾನದಿಂದ ನಿತೀಶ್‌ನನ್ನು ಹೊಣೆಗಾರಿಕೆಯಿಂದ ತೆಗೆದಿದ್ದರು. ಇದನ್ನು ಪ್ರಶ್ನಿಸಿ ನಿತೀಶ್ ಬೆಂಬಲಿಗರು ಹಾಗೂ ಸಂತೋಷ್ ಬೆಂಬಲಿಗರು ಕಾಂಗ್ರೆಸ್ ಕಚೇರಿಯಲ್ಲಿ ಬಡಿದಾಡಿಕೊಂಡಿದ್ದಾರೆ. ಶನಿವಾರ ಸಂಜೆ ಈ ಸಂಬಂಧ ಸಭೆ ನಡೆಯುತ್ತಿದ್ದಾಗ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದು ಕಾಂಗ್ರೆಸ್ ಮಾನ ಹರಾಜಾಗಿದೆ.
ಇದನ್ನೂ ಓದಿ | Kasturirangan Report | ಪಶ್ಚಿಮಘಟ್ಟ ತಪ್ಪಲಿನ ಜನರ ನಿದ್ರೆಗೆಡಿಸಿದ ಈ ವರದಿ ಬಂದಿದ್ದಾದರೂ ಏಕೆ?
ಈ ಬೆಳವಣಿಗೆಯಿಂದ ಬೇಸತ್ತ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ರಾಜೀನಾಮೆಗೆ ಮುಂದಾಗಿದ್ದು, ಜಿಲ್ಲಾ ಕಾಂಗ್ರೆಸ್‌ನ ಪರಿಸ್ಥಿತಿ ಮನೆಯೊಂದು ಮೂರು ಬಾಗಿಲು ಎಂಬುವುದು ಬಯಲಾಗಿದೆ. ಜಿಲ್ಲಾ ಯೂತ್ ಕಾಂಗ್ರೆಸ್‌ನಲ್ಲಿ ಪದೇಪದೆ ಇಂತಹ ಘಟನೆಗಳು ಮರುಕಳಿಸುತ್ತಿರುವುದು ಕಾಂಗ್ರೆಸ್‌ಗೆ ಇರಸುಮುರಸು ತಂದಿದೆ. ಈ ಬೆಳವಣಿಗೆಯಿಂದ ಬೇಸತ್ತಿರುವ ಹಲವು ಕಾಂಗ್ರೆಸ್ ಕಾರ್ಯಕರ್ತರು ರಾಜೀನಾಮೆಗೆ ಮುಂದಾಗಿದ್ದು, ಯಾರಿಗೆ ಹೇಳೋಣ ನಮ್ಮ ಸಮಸ್ಯೆ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಯಾವುದೇ ಕಾರ್ಯಕ್ರಮ, ಸಭೆ ಆಯೋಜನೆಯಾದರೂ ಇದೇ ಸಮಸ್ಯೆ ಎಂದು ಕಾರ್ಯಕರ್ತರು ತಮ್ಮ ನಾಯಕರೊಂದಿಗೆ ಬೇಸರ ವ್ಯಕ್ತಪಡಿಸಿದ್ದಾರೆ. ಇವರಿಬ್ಬರ ಜಗಳದ ನಡುವೆ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ರಾಜೀನಾಮೆಗೆ ಮುಂದಾಗಿದ್ದರಿಂದ ಸ್ಥಳೀಯ ಕಾಂಗ್ರೆಸ್ ಮುಖಂಡರು ತಬ್ಬಿಬ್ಬಾಗಿದ್ದಾರೆ.
ಇದನ್ನೂ ಓದಿ | Illegal Bangla Immigrants | ಕಾಫಿನಾಡಲ್ಲಿ ನಾಲ್ವರು ಅಕ್ರಮ ಬಾಂಗ್ಲಾ ವಲಸಿಗರು ಪತ್ತೆ