ಚಿಕ್ಕಮಗಳೂರು: ಅಮರನಾಥ ಯಾತ್ರೆ ಕೈಗೊಂಡಿದ್ದ ಕನ್ನಡಿಗ ಯಾತ್ರಿಕರು ಸುರಕ್ಷಿತವಾಗಿರುವುದು ತಿಳಿದು ಬಂದಿದೆ. ಗುರುವಾರ ರಾತ್ರಿ ಇಲ್ಲಿ ಇದ್ದಕ್ಕಿದ್ದಂತೆ ಪ್ರವಾಹ ಸಂಭವಿಸಿ ಹಲವು ಟೆಂಟ್‌ಗಳು ಕೊಚ್ಚಿಹೋಗಿ 16 ಯಾತ್ರಿಕರು ಮೃತಪಟ್ಟಿದ್ದರು.
ಜಮ್ಮುವಿನ ಅಮರನಾಥ ಬಳಿಯ ಏರ್ ಬೇಸ್‌ನಲ್ಲಿ ಕನ್ನಡಿಗರನ್ನು ರಕ್ಷಣೆ ಮಾಡಲಾಗಿದೆ. ಚಿಕ್ಕಮಗಳೂರಿನಿಂದ 70ಕ್ಕೂ ಹೆಚ್ಚು ಯಾತ್ರಿಕರು ತೆರಳಿದ್ದರು. ಇಂದು ಮಧ್ಯಾಹ್ನದ ವೇಳೆಗೆ ದೆಹಲಿಗೆ ಶಿಫ್ಟ್ ಮಾಡುವ ಭರವಸೆ ನೀಡಲಾಗಿದೆ.
ಮೇಘಸ್ಪೋಟ ಭಯ ಆತಂಕದ ನಡುವೆಯೂ ಸುರಕ್ಷಿತರಾಗಿರುವ ಕನ್ನಡಿಗ ಯಾತ್ರಿಕರು ಆರ್ಮಿ ಏರ್‌ಬೇಸ್ ಕ್ಯಾಂಪಿನಲ್ಲಿ ಭಜನೆ ಆಯೋಜಿಸಿಕೊಂಡಿದ್ದಾರೆ. ಸೈನಿಕರ ಸುರಕ್ಷತೆಗೂ ಪ್ರಾರ್ಥನೆ ಮಾಡುತ್ತಿದ್ದಾರೆ. ಅಮರನಾಥಕ್ಕೆ ಬಂದರೂ ದೇವರ ದರ್ಶನ ಪಡೆಯಲು ಆಗಲಿಲ್ಲ ಎಂಬ ಬೇಸರವಿದ್ದರೂ ಸುರಕ್ಷಿತವಾಗಿರುವುದಕ್ಕಾಗಿ ನಿಟ್ಟುಸಿರು ಬಿಟ್ಟಿದ್ದಾರೆ.
ಇದನ್ನೂ ಓದಿ: ಅಮರನಾಥ ದೇಗುಲದ ಬಳಿ ಮೇಘ ಸ್ಫೋಟವಾಗಿಲ್ಲ ಎಂದ ಹವಾಮಾನ ಇಲಾಖೆ; ಪ್ರವಾಹಕ್ಕೇನು ಕಾರಣ?