ಚಿಕ್ಕಮಗಳೂರು: ಮಸೀದಿ ಮುಂಭಾಗ ಕಟ್ಟಿದ್ದ ಕೇಸರಿ ಬಾವುಟದ ವಿಚಾರದಲ್ಲಿ ಎರಡು ಕೋಮಿನ ಯುವಕರ ನಡುವೆ ಚಕಮಕಿಯಾದ ಘಟನೆ ಶೃಂಗೇರಿಯಲ್ಲಿ ನಡೆದಿದೆ.
ಶೃಂಗೇರಿಯ ಪಟ್ಟಣದ ವೆಲ್‌ಕಂ ಗೇಟ್ ಮುಂಭಾಗ ಘಟನೆ ನಡೆದಿದೆ. ಶ್ರೀರಾಮ ಸೇನೆ ಮುಖಂಡ- ಪಟ್ಟಣ ಪಂಚಾಯಿತಿ ಸದಸ್ಯರ ನಡುವೆ ಜಗಳ ನಡೆದಿದೆ. ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನಲ್ಲಿ ದತ್ತಮಾಲಾ ಅಭಿಯಾನದ ಹಿನ್ನೆಲೆಯಲ್ಲಿ ಶ್ರೀರಾಮಸೇನೆ ಕಾರ್ಯಕರ್ತರು ಮಸೀದಿ ಮುಂಭಾಗದಲ್ಲಿ ಬಾವುಟ ಕಟ್ಟಿದ್ದರು. ಈ ವಿಚಾರದಲ್ಲಿ ಶ್ರೀರಾಮ ಸೇನೆ ಮುಖಂಡ ಅರ್ಜುನ್ ಹಾಗೂ ಪ.ಪಂ. ಸದಸ್ಯ ರಫೀಕ್ ನಡುವೆ ಮಾತಿನ ಚಕಮಕಿ ನಡೆದದ್ದಲ್ಲದೆ, ಕೈ ಕೈ ಮಿಲಾಯಿಸಿಕೊಂಡಿದ್ದಾರೆ. ಎರಡೂ ಕೋಮಿನ ಹುಡುಗರು ಹೊಡೆದಾಡಿಕೊಂಡು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.
ಇದಾದ ಬಳಿಕ ಮಸೀದಿ ಮುಂಭಾಗದ ಬಾವುಟಗಳನ್ನು ಪೊಲೀಸರು ತೆರವುಗೊಳಿಸಿದರು. ಶೃಂಗೇರಿ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿ ದೂರು ದಾಖಲಾಗಿವೆ.
ಇದನ್ನೂ ಓದಿ | ವಿಸ್ತಾರ ಸಂಪಾದಕೀಯ: ಶಿಕ್ಷಣ ಎನ್ನುವುದು ಲಾಭ ದೋಚುವ ವ್ಯಾಪಾರವಲ್ಲ