ಚಿಕ್ಕಮಗಳೂರು : ಚಿಕ್ಕಮಗಳೂರಿನಲ್ಲಿ ಮಂಗನ ಕಾಯಿಲೆಗೆ (Monkey Pox) ಮೊದಲ ಬಲಿಯಾಗಿದೆ. ಕೆಎಫ್‌ಡಿಗೆ 79 ವರ್ಷದ ವೃದ್ಧ ಮೃತಪಟ್ಟಿದ್ದಾರೆ. ಶೃಂಗೇರಿ ತಾಲೂಕಿನ ಬೇಗಾನೆ ಗ್ರಾಮದ ನಿವಾಸಿಗೆ ರೆಡ್ ಝೋನ್‌ನಲ್ಲಿ ತಪಾಸಣೆ ಮಾಡಿದಾಗ ಕೆ.ಎಫ್.ಡಿ ಪತ್ತೆಯಾಗಿದೆ.
ಕೆ.ಎಫ್.ಡಿ ಜತೆ ಬೇರೆ ಬೇರೆ ಕಾಯಿಲೆಗಳಿಂದ ವೃದ್ಧ ಬಳಲುತ್ತಿದ್ದರು. ಹೀಗಾಗಿ ಮಣಿಪಾಲ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೇ ವೃದ್ಧ ಫೆ. 3ರಂದು ಮೃತಪಟ್ಟಿದ್ದಾರೆ. ಮಲೆನಾಡಿನಲ್ಲಿ ಮೂವರಲ್ಲಿ ಮಂಗನ ಕಾಯಿಲೆ ಪತ್ತೆಯಾಗಿದೆ. ಸದ್ಯ ವೃದ್ಧನ ಸಾವಿನಿಂದ ಮಲೆನಾಡಿನ ಜನರಲ್ಲಿ ಆತಂಕ ಹೆಚ್ಚಿದೆ.
ಮಂಕಿ ಪಾಕ್ಸ್ ಎಂದರೇನು?
ಮಂಕಿಪಾಕ್ಸ್ ಒಂದು ವೈರಸ್ ಆಗಿದ್ದು, ಅದು ರೋಡಂಟ್ಸ್ ಮತ್ತು ಪ್ರೈಮೆಟ್‌ಗಳಂತಹ ಕಾಡು ಪ್ರಾಣಿಗಳಲ್ಲಿ ಹುಟ್ಟುತ್ತದೆ ಮತ್ತು ಸಾಂದರ್ಭಿಕವಾಗಿ ಮನುಷ್ಯರಿಗೆ ಹರಡುತ್ತದೆ. ಈ ರೋಗ ಮನುಷ್ಯರಿಗೆ ಹರಡಿರುವ ಪ್ರಕರಣಗಳು, ಮಧ್ಯ ಮತ್ತು ಪಶ್ಚಿಮ ಆಫ್ರಿಕಾದಲ್ಲಿ ಹೆಚ್ಚಾಗಿ ಕಂಡು ಬಂದಿದ್ದು, ಅಲ್ಲಿ ಮಂಕಿಪಾಕ್ಸ್ ಸಾಮಾನ್ಯವಾಗಿದೆ ಎನ್ನಲಾಗುತ್ತಿದೆ.
ಇದು ಹೇಗೆ ಹರಡುತ್ತದೆ?
ಮಂಕಿ ಪಾಕ್ಸ್ ಸಾಮಾನ್ಯವಾಗಿ ವ್ಯಕ್ತಿಯು ಸೋಂಕಿತ ಪ್ರಾಣಿಯ ಸಂಪರ್ಕಕ್ಕೆ ಬಂದರೆ, ಅಂದರೆ ಸೋಂಕಿತ ಪ್ರಾಣಿ ಉಗುರಿನಿಂದ ಪರಚಿದರೆ, ಅದರ ಗಾಯದಿಂದ ಸೋರುತ್ತಿರುವ ನೀರು ಅಥವಾ ದ್ರವ ಮನುಷ್ಯನ ಚರ್ಮದ ಮೇಲೆ ಬಿದ್ದರೆ ಅಥವಾ ಸೋಂಕಿತ ಪ್ರಾಣಿ ಮನುಷ್ಯನನ್ನು ಕಚ್ಚಿದರೆ, ಹೀಗೆ ನೇರವಾಗಿ ಅಥವಾ ಪರೋಕ್ಷವಾಗಿ ಸಂಪರ್ಕಕ್ಕೆ ಬರುವ ಮನುಷ್ಯನಿಗೆ ಅಂಟಿಕೊಳ್ಳುತ್ತದೆ.
ಮಂಕಿ ಪಾಕ್ಸ್ ಕಾಯಿಲೆಯ ಸೂಚನೆಗಳು ಮತ್ತು ರೋಗಲಕ್ಷಣಗಳು
ಜ್ವರ, ಮೈ ಕೈ ನೋವು, ತಲೆ ನೋವು, ಬೆನ್ನು ನೋವು, ಮೈ ನಡುಗುವುದು, ವಿಪರೀತ ದೈಹಿಕ ಆಯಾಸ, ದುಗ್ಧರಸ ಗ್ರಂಥಿಗಳು ಊದಿಕೊಂಡಿರುವುದು ಇತ್ಯಾದಿ. ಈ ಮೇಲಿನ ಎಲ್ಲ ರೋಗಲಕ್ಷಣಗಳು ಒಬ್ಬ ವ್ಯಕ್ತಿಯಲ್ಲಿ ಕಂಡು ಬಂದ ನಂತರದಲ್ಲಿ ಮುಖದ ಮೇಲೆ ಇದ್ದಕ್ಕಿದ್ದಂತೆ ದದ್ದುಗಳು ಉಂಟಾಗಲು ಪ್ರಾರಂಭವಾಗಿ ಕ್ರಮೇಣವಾಗಿ ಮೈ ತುಂಬ ಹರಡುತ್ತವೆ. ಮೊದಲಿಗೆ ಯಾವುದೇ ಬಣ್ಣದಿಂದ ಕೂಡಿಲ್ಲದ ಹಾಗೆ ಕಂಡು ಬರುವ ದದ್ದುಗಳು ಆನಂತರದಲ್ಲಿ ಗಟ್ಟಿಯಾಗುತ್ತವೆ, ದಪ್ಪ ಆಗುತ್ತವೆ ಜತೆಗೆ ಅವುಗಳಲ್ಲಿ ನೀರು ಸಹ ತುಂಬಿಕೊಳ್ಳುತ್ತದೆ. ಕೆಲವೊಮ್ಮೆ ಕೀವು ಸಹ ತುಂಬಿಕೊಳ್ಳುತ್ತದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ