Site icon Vistara News

ಚಿಕ್ಕಮಗಳೂರಿನಲ್ಲಿ ಮಗನ ಪಬ್‌ಜೀ ಹುಚ್ಚಾಟ ತಡೆದ ತಾಯಿ ಗುಂಡೇಟಿಗೆ ಬಲಿ

pubji

ಚಿಕ್ಕಮಗಳೂರು: ಮಗನ ಪಬ್‌ಜೀ ಆಟದ ಹುಚ್ಚಿಗೆ ತಾಯಿ ಬಲಿಯಾಗಿದ ದುರ್ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಚಿಕ್ಕಮಗಳೂರಿನ ಹಾಗಲಖಾನ್‌ ಎಸ್ಟೇಟ್‌ನಲ್ಲಿ ಈ ದುರಂತ ಸಂಭವಿಸಿದೆ. ಅಪ್ಪ ಹಾಗೂ ಮಗನ ಜಗಳದ ನಡುವೆ ತಾಯಿ ಮೈಮನಾ(40) ಸಾವಿಗೀಡಾಗಿದ್ದಾರೆ.

ಪಬ್‌ಜಿ ಕ್ರೇಝ್‌ಗೆ ಈ ಹಿಂದೆ ನಡೆದ ದುರ್ಘಟನೆಗಳು ಸಂಭವಿಸಿತ್ತು. ಅದು ಚೀನಾ ಮೂಲದ ಆಪ್‌ ಎಂಬ ಕಾರಣಕ್ಕೆ ಆಟವನ್ನು ಭಾರತದಲ್ಲಿ ಬ್ಯಾನ್‌ ಮಾಡಲಾಗಿತ್ತು. ಆದರೆ, ಮತ್ತೊಮ್ಮ ಬೇರೆ ಹೆಸರಿನಲ್ಲಿ ಹೊಸ ರೂಪದಲ್ಲಿ ಭಾರತದವರೇ ಈ ಮಾದರಿಯ ಗೇಮ್‌ ಬಡುಗಡೆ ಮಾಡಿದ್ದರು. ಈ ಗೇಮ್‌ನಲ್ಲಿ ಹೊಡೆದಾಟದ, ಶೂಟಿಂಗ್‌ ಗೇಮ್‌. ಗೇಮ್‌ನಲ್ಲಿ ಒಬ್ಬರು ಇನ್ನೊಬ್ಬರನ್ನು ಶೂಟ್‌ ಮಾಡುವ ಹಾಗೆ ಇಲ್ಲಿ ತಂದೆಯೂ ಶೂಟ್‌ ಮಾಡಿದ್ದಾರೆ. ಈ ದಾಳಿಗೆ ತಾಯಿ ಬಲಿಯಾಗದ್ದಾರೆ.

ಪಬ್‌ಜಿ ಆಟಕ್ಕಾಗಿ ತಂದೆಯ ಜತೆ ಮಗ ಜಗಳವಾಡಿದ್ದ. ಇದರಿಂದ ಕೋಪಗೊಂಡ ತಂದೆಯು ಮಗನನ್ನು ಸಾಯಿಸಲು ಮುಂದಾಗಿದ್ದರು. ಮಗನನ್ನು ಸಾಯಿಸುವ ನಿಟ್ಟಿನಲ್ಲಿ ತೋಟದಲ್ಲಿ ಬಳಸುವ ಕೋವಿಯನ್ನು ಹಿಡಿದಿದ್ದರು. ಮಗನ ಪ್ರಾಣವನ್ನು ರಕ್ಷಿಸಲು ತಾಯಿ ಮೈಮುನಾ ಅಡ್ಡ ಬಂದಿದ್ದಾರೆ. ತಂದೆ ಇಮ್ತಿಯಾಸ್‌ ಕುಡಿದ ಮತ್ತಿನಲ್ಲಿ ಗುಂಡು ಹಾರಿಸಿದ್ದಾರೆ.

ಮೈಮುನಾ ಅವರನ್ನು ಆಸ್ಪತ್ರೆಗೆ ದಾಖಲಿಸಿದರೈ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ತಂದೆ ಇಮ್ತಿಯಾಸ್‌ ಅವರನ್ನು ಪೊಲೀಸರು ಬಂಧಿಸಿದ್ದಾರೆ.

Exit mobile version