ಚಿಕ್ಕಮಗಳೂರು: ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ ಕುಮಾರಸ್ವಾಮಿ ಅವರ ವಿರುದ್ಧ ಚೆಕ್ ಬೌನ್ಸ್ ಪ್ರಕರಣದಲ್ಲಿ ಜಾಮೀನುರಹಿತ ವಾರಂಟ್ ನೀಡಲಾಗಿದೆ.
42ನೇ ಎಸಿಎಂಎಂ ನ್ಯಾಯಾಲಯದಿಂದ ಜಾಮೀರು ರಹಿತ ವಾರಂಟ್ ಜಾರಿಯಾಗಿದ್ದು, ಮುಂದಿನ ತಿಂಗಳು 10ನೇ ತಾರೀಕು ಖುದ್ದು ಹಾಜರು ಪಡಿಸಲು ಆದೇಶಿಸಲಾಗಿದೆ. ಚೆಕ್ ಬೌನ್ಸ್ ಪ್ರಕರಣದ ಆರೋಪಿಯಾಗಿರುವ ಎಂಎಲ್ಎ ಕುಮಾರಸ್ವಾಮಿ ಅವರ ಹೇಳಿಕೆ ದಾಖಲಿಸಲು ಈಗಾಗಲೇ ನೊಟೀಸ್ ನೀಡಲಾಗಿತ್ತು.
ಪ್ರಕರಣದ ವಿಚಾರಣೆಗೆ ರಿಲೀಫ್ ಕೋರಿ ಎಂಎಲ್ಎ ಕುಮಾರಸ್ವಾಮಿ ಅರ್ಜಿ ಸಲ್ಲಿಸಿದ್ದರು. ಅನಾರೋಗ್ಯದ ಕಾರಣ ನೀಡಿ, ಸಿಆರ್‌ಪಿಸಿ 317 ಅಡಿ ವೈದ್ಯಕೀಯ ದಾಖಲೆಗಳ ಸಮೇತ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಅರ್ಜಿದಾರ ಹೂವಪ್ಪ ಗೌಡರು ದಾಖಲೆ ಸಮೇತ ಆಕ್ಷೇಪಣೆ ಸಲ್ಲಿಸಿದ್ದರು. ಕುಮಾರಸ್ವಾಮಿ ಆರೋಗ್ಯವಾಗಿದ್ದಾರೆ, ಅನೇಕ ಕಾರ್ಯಕ್ರಮಗಳನ್ನು ಅಟೆಂಡ್ ಮಾಡಿದ್ದಾರೆ ಎಂದು ದಿನಪತ್ರಿಕೆ ವರದಿಗಳು ಪೋಟೋಗಳ ಸಮೇತ ದಾಖಲೆ ಸಲ್ಲಿಸಿದ್ದರು. ಹೀಗಾಗಿ ಶಾಸಕಸ ಅನಾರೋಗ್ಯದ ನೆಪದ ಅರ್ಜಿ ವಜಾಗೊಳಿಸಿದ ಕೋರ್ಟ್, ಕುಮಾರಸ್ವಾಮಿ ವಿರುದ್ಧ ಜಾಮೀನುರಹಿತ ವಾರಂಟ್ ಜಾರಿ ಮಾಡಿದೆ.
ಇದನ್ನೂ ಓದಿ | ರೈತರಿಗೆ ಉಪಯೋಗವಿಲ್ಲದ ಕಾಫಿ ಮಂಡಳಿ ರದ್ದುಪಡಿಸಿ: ಶಾಸಕ ಎಂ.ಪಿ.ಕುಮಾರಸ್ವಾಮಿ ಆಗ್ರಹ