ಚಿಕ್ಕಮಗಳೂರು: ರಾಜ್ಯದ ಮೊದಲ ಸರ್ಕಾರಿ ಗೋಶಾಲೆಯನ್ನು (Goushala) ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನಲ್ಲಿ ಉದ್ಘಾಟನೆ ಮಾಡಲಾಯಿತು. ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್ ಗೋವುಗಳಿಗೆ ಪೂಜೆ ಮಾಡಿ, ಮೇವು ನೀಡುವ ಮೂಲಕ ಗೋಶಾಲೆಯನ್ನು ಉದ್ಘಾಟಿಸಿದರು.
ಪ್ರತಿ ಜಿಲ್ಲೆಗೊಂದು ಸರ್ಕಾರಿ ಗೋಶಾಲೆಯನ್ನು ಪ್ರಸಕ್ತ ವರ್ಷದ ರಾಜ್ಯ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿತ್ತು. ಚಿಕ್ಕಮಗಳೂರಿನಲ್ಲಿ ಮೊದಲ ಗೋಶಾಲೆಯನ್ನು ಇದೀಗ ಉದ್ಘಾಟಿಸಲಾಗಿದೆ. ಗೋಶಾಲೆಯನ್ನು ಉದ್ಘಾಟಿಸಿದ ನಂತರ ಮಾತನಾಡಿದ ಸಚಿವ ಚವ್ಹಾಣ್, ಸರ್ಕಾರ ತನ್ನ ಬಜೆಟ್‌ನಲ್ಲಿ ಹೇಳಿದಂತೆ ಯೋಜನೆಯನ್ನು ಕಾರ್ಯರೂಪಕ್ಕೆ ತಂದಿದೆ. ಗೋ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು.
10 ಎಕರೆ ಪ್ರದೇಶದಲ್ಲಿರುವ ವಿಶಾಲವಾದ ಗೋಶಾಲೆಯಲ್ಲಿ ಸುಮಾರು 250-300 ಗೋವುಗಳಿಗೆ ಆಶ್ರಯ ನೀಡುವ ಸೌಲಭ್ಯ ಕಲ್ಪಿಸಲಾಗಿದೆ. ಇಲ್ಲಿ ಗೋವುಗಳನ್ನ ದತ್ತು ಪಡೆಯಲು ಕೂಡ ಅವಕಾಶವಿದೆ.
ಇದನ್ನೂ ಓದಿ: ಗೋ ಮೂತ್ರ, ಪಂಚಗವ್ಯ ಮೂಲಕ ಕ್ಯಾನ್ಸರ್‌ಗೆ ಚಿಕಿತ್ಸೆ