ಚಿಕ್ಕಮಗಳೂರು: ರಸ್ತೆ ಬದಿಯ ಓರ್ವ ವ್ಯಾಪಾರಿ ತಮ್ಮ ಗಾಡಿಗೆ ಬೆಂಕಿ ಹಚ್ಚುವ ಮೂಲಕ ಸಗರಸಭೆ ಸಿಬ್ಬಂದಿಯ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ನಗರಸಭೆ ಅಧಿಕಾರಿಗಳು ನಿತ್ಯವೂ ನೀಡುತ್ತಿದ್ದ ಕಿರುಕುಳದಿಂದ ಬೇಸತ್ತು ರಸ್ತೆ ಬದಿಯ ವ್ಯಾಪಾರಿ ʼನನ್ನ ಗಾಡಿ ಮುಟ್ಟಬೇಡಿ, ನಾನೇ ಬೆಂಕಿ ಹಚ್ಚುತ್ತೇನೆʼ ಎಂದು ಕೂಗಿ ಗಾಡಿಗೆ ಬೆಂಕಿ ಹಚ್ಚಿದ್ದಾರೆ.
ಚಿಕ್ಕಮಗಳೂರು ನಗರದ ಮಲ್ಲಂದೂರು ರಸ್ತೆಯಲ್ಲಿ ನಿತ್ಯ 200-300 ದುಡಿಯುತ್ತಿದ್ದ ವ್ಯಾಪಾರಿಗೆ ರಸ್ತೆ ಬದಿ ವ್ಯಾಪಾರ ಮಾಡದಂತೆ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದರೆಂದು ವ್ಯಾಪಾರಿಗಳು ಮನನೊಂದಿದ್ದರು. ಹಣ್ಣು ತರಕಾರಿಗಳನ್ನ ವ್ಯಾಪಾರ ಮಾಡಿಕೊಂಡು ಬದುಕುತ್ತಿದ್ದ ಬಡ ವ್ಯಾಪಾರಿಗಳಿಂದ ₹500-1000 ಹಣ ಕೇಳುತ್ತಿದ್ದಾರೆಂದು ವ್ಯಾಪಾರಿಗಳು ಆರೋಪಿಸಿದ್ದಾರೆ. ʼನಾವು ಫೈನಾನ್ಸ್‌ಗೆ ದುಡ್ಡು ನೀಡುವದೇ ಕಷ್ಟವಾಗಿದೆ, ಇನ್ನು ಇವರಿಗೆ ಹೇಗೆ ಕೊಡುವುದು?ʼ ಎಂದು ಬಡ ವ್ಯಾಪಾರಿಗಳು ಪ್ರಶ್ನಿಸಿದ್ದಾರೆ.
ಈ ವೇಳೆ ಗಾಡಿಯನ್ನ ಹೊತ್ತೊಯ್ಯಲು ಬಂದಿದ್ದ ನಗರಸಭೆ ಸಿಬ್ಬಂದಿಯ ವಿರುದ್ಧ ಕೋಪಗೊಂಡಿದ್ದಾರೆ. ʼ ನಮ್ಮಹೊಟ್ಟೆ ಮೇಲೆ ಹೋಡೀತಿದ್ದೀರಾ, ನೀವು ನಮ್ಮ ಗಾಡಿ ಮುಟ್ಟಬೇಡಿ, ನಾನೇ ಬೆಂಕಿ ಹಾಕ್ತೀನಿʼ ಎಂದು ತಮ್ಮ ಗಾಡಿಗೆ ತಾವೇ ಬೆಂಕಿ ಹಾಕಿ ನಗರಸಭೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಇದನ್ನೂ ಓದಿ | BMTCಯಿಂದ ವಜಾಗೊಂಡ ಚಾಲಕರ ಪ್ರತಿಭಟನೆ: ದಯಾಮರಣ ಕೋರಿ ಪತ್ರ