Site icon Vistara News

School teacher : ಯಾರನ್ನೂ ಬಿಡಲ್ಲ, 9 ಬಲಿ ಪಡೀತೇನೆ!; ಶಾಲೆಯ ಅಕ್ರಮ ಪ್ರಶ್ನಿಸಿದ್ದಕ್ಕೆ ಮುಖ್ಯ ಶಿಕ್ಷಕಿ ಮೈಮೇಲೆ ದೇವರು ಬಂದರು!

school teacher Bettagere school

ಚಿಕ್ಕಮಗಳೂರು: ಈ ದೇವರು ಬಾ ಅಂದಾಗ ಬರುವ ಅತಿಥಿ ಹಾಗೆ ಆಗಿಬಿಟ್ರಾ? ಇಂಥಹುದೊಂದು ಪ್ರಶ್ನೆ ಹುಟ್ಟಿಕೊಂಡಿದ್ದು ಮೂಡಿಗೆರೆ ಶಾಲೆಯಲ್ಲಿ (Bettagere High school in Mudigere) ನಡೆದ ಒಂದು ಘಟನೆ ನೋಡಿದ ಮೇಲೆ. ಇಲ್ಲಿನ ಶಾಲೆಯೊಂದರ ಅಕ್ರಮದ (Irregularities in School) ಬಗ್ಗೆ ತನಿಖೆಗೆ ಹೋದ ಅಧಿಕಾರಿಗಳು ತನಿಖೆ ಆರಂಭಿಸುತ್ತಿದ್ದಂತೆಯೇ ಮುಖ್ಯ ಶಿಕ್ಷಕಿ (Head Mistress) ಮೈಮೇಲೆ ದೇವರು ಬಂದಿದ್ದಾರೆ (God appears on headmistress). ಯಾರನ್ನೂ ಬಿಡಲ್ಲ, ಒಂಬತ್ತು ಜನರ ಬಲಿ ಪಡೆದೇ ಪಡೀತೇನೆ ಎಂದು ಆಕೆ (School teacher) ಅಬ್ಬರಿಸಿದ್ದಾರೆ!

ಈ ಘಟನೆ ನಡೆದಿರುವುದು ಮೂಡಿಗೆರೆ ತಾಲೂಕಿನ ಬೆಟ್ಟಗೆರೆ ಗ್ರಾಮದ ಪ್ರೌಢಶಾಲೆಯಲ್ಲಿ. ಈ ಶಾಲೆಯಲ್ಲಿ ಆಡಳಿತಾತ್ಮಕ ಅಕ್ರಮಗಳು ನಡೆಯುತ್ತಿರುವ ಬಗ್ಗೆ ದೂರುಗಳು ಕೇಳಿಬಂದಿದ್ದವು. ಇದನ್ನು ಪ್ರಶ್ನಿಸಲು ಬಂದ ಅಧಿಕಾರಿಗಳ ಮುಂದೆಯೇ ಮುಖ್ಯ ಶಿಕ್ಷಕಿ ಮೈಮೇಲೆ ದೇವರು ಬಂದಿದ್ದಾರೆ!

ಲೋಪದ ಬಗ್ಗೆ ತನಿಖೆ ನಡೆಸಲು ಬಿಇಒ ಶಾಲೆಗೆ ಬಂದಿದ್ದರು. ಮುಖ್ಯ ಶಿಕ್ಷಕಿಯನ್ನು ಕೂರಿಸಿಕೊಂಡು ಮಾತನಾಡಿದ್ದರು. ಪ್ರಕರಣದ ವಿಚಾರಣೆ ಆಳಕ್ಕಿಳಿಯುತ್ತಿದೆ ಎಂದು ಗೊತ್ತಾಗುತ್ತಿದ್ದಂತೆಯೇ ಅವರ ಮಾತಿನ ದಾಟಿಯೇ ಬದಲಾಗಿ ಹೋಯ್ತು! ಆಕೆ ವಿಚಿತ್ರವಾಗಿ ಮಾತನಾಡಲು ತೊಡಗಿದರು. ದೇವರು ಮೈಮೇಲೆ ಬಂದಂತೆ ʻʻನನಗೆ ದೇವಸ್ಥಾನ ಕಟ್ಟಿಕೊಡಬೇಕು. ಇಲ್ಲಂದ್ರೆ ಯಾರನ್ನೂ ಬಿಡಲ್ಲʼʼ ಎಂದೆಲ್ಲ ಹೇಳತೊಡಗಿದರು.

ಬಿ.ಬಿ ನಿಂಗಯ್ಯರನ್ನೂ ಬಿಡಲ್ಲ! ರಕ್ತ ಕಾರಿ ಸಾಯ್ತಾನೆ!

ಆಶ್ಚರ್ಯವೆಂದರೆ ಆಕೆಯ ಮೈ ಮೇಲೆ ಬಂದ ʻಶಕ್ತಿʼ ಮಾಜಿ ಶಾಸಕ ಬಿ.ಬಿ. ನಿಂಗಯ್ಯ ಅವರ ಮೇಲೂ ಸಿಟ್ಟು ಪ್ರದರ್ಶಿಸಿದೆ. ಮೂಡಿಗೆರೆಗೆ ಈಗ ಶಾಸಕರು ಬದಲಾಗಿದ್ದಾರೆ. ಈಗ ನಯನಾ ಮೋಟಮ್ಮ, ಅದಕ್ಕಿಂತ ಹಿಂದೆ ಎಂ.ಪಿ. ಕುಮಾರಸ್ವಾಮಿ. ಆದರೆ, ಈ ಶಕ್ತಿ ಮಾತ್ರ ಅದಕ್ಕೂ ಮೊದಲು ಶಾಸಕರಾಗಿದ್ದ ಬಿ.ಬಿ. ನಿಂಗಯ್ಯರ ಮೇಲೆ ಸೇಡು ತೀರಿಸಿಕೊಳ್ಳುತ್ತೇನೆ ಅನ್ನುತ್ತಿತ್ತು. ʻʻಬಿಬಿ ನಿಂಗಯ್ಯ ರಕ್ತಕಾರಿ ಸಾಯ್ತಾನೆ, ಬಿಡಲ್ಲ ಅವರನ್ನುʼ ಎಂದೂ ಶಿಕ್ಷಕಿ ಹೇಳಿದ್ದಾರೆ.

ಶಿಕ್ಷಕಿಯ ಮಾತು ಕೇಳಿ ಬಿಇಒ ಮತ್ತು ಅಧಿಕಾರಿಗಳು ತಬ್ಬಿಬ್ಬಾಗಿದ್ದಾರೆ. ಏನು ಮಾಡುವುದು ಎಂದು ತೋಚದೆ ಆಕೆಯ ವರ್ತನೆಯನ್ನು ರೆಕಾರ್ಡ್‌ ಮಾಡಿಕೊಂಡಿದ್ದಾರೆ. ಅದು ಈಗ ವೈರಲ್‌ ಆಗಿದೆ.

ಬೆಟ್ಟಗೆರೆ ಪ್ರೌಢ ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು

ಹಾಗಿದ್ದರೆ ಮೈಮೇಲೆ ದೇವರೋ, ದೆವ್ವವೋ ಬಂದ ಶಿಕ್ಷಕಿ ಏನೆಲ್ಲ ಹೇಳಿದರು?

ಹಾಗಂತ ಈ ಶಿಕ್ಷಕಿ ದೇವರೋ, ದೆವ್ವವೋ ಮೈಮೇಲೆ ಬಂದಂತೆ ಆಡಿಲ್ಲ. ಕುಳಿತುಕೊಂಡಲ್ಲೇ ಮಾತನಾಡಿದ್ದಾರೆ. ಮಾತಿನಲ್ಲಿ ಆಕ್ರೋಶವಿದ್ದರೂ ದೈಹಿಕವಾಗಿ ಆಕ್ರೋಶ ತೋರ್ಪಡಿಸಿಲ್ಲ. ಮತ್ತು ಬಂದಿರುವವರು ಅಧಿಕಾರಿಗಳು ಎನ್ನುವ ಪ್ರಜ್ಞೆ ಇಟ್ಟುಕೊಂಡೇ ಮಾತನಾಡಿದ್ದಾರೆ!

Exit mobile version