Site icon Vistara News

Tiger Nail : ಬಾಬಾ ಬುಡನ್‌ಗಿರಿ ದರ್ಗಾದ ಶಾಖಾದ್ರಿ ಮನೆಗೆ ನೋಟಿಸ್;‌ ಚಿರತೆ, ಜಿಂಕೆ ಚರ್ಮದ ಮಾಹಿತಿ ಕೇಳಿದ ಅರಣ್ಯ ಇಲಾಖೆ

chikkamagaluru shakhadri

ಚಿಕ್ಕಮಗಳೂರು: ರಾಜ್ಯದಲ್ಲಿ ಹುಲಿ ಉಗುರಿನ (Tiger Nail) ಲಾಕೆಟ್ ಇರುವ ಸರ ಧರಿಸಿರುವವರ ವಿರುದ್ಧ ಅರಣ್ಯ ಇಲಾಖೆ (Forest department) ಕ್ರಮ ಕೈಗೊಳ್ಳುತ್ತಿದ್ದಂತೆ ಇತರ ಪ್ರಾಣಿ ಉತ್ಪನ್ನಗಳ ಬಗ್ಗೆಯೂ ದೂರುಗಳ ಮಹಾಪೂರವೇ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ತಪಾಸಣೆ ಹಾಗೂ ಕ್ರಮಗಳನ್ನು ಕೈಗೊಳ್ಳುತ್ತಲಿದ್ದಾರೆ. ಈ ನಡುವೆ ಚಿಕ್ಕಮಗಳೂರಿನ ಬಾಬಾ ಬುಡನ್ ಸ್ವಾಮಿ ದರ್ಗಾದ ಶಾಖಾದ್ರಿ ನಿವಾಸದಲ್ಲಿ ನಿವಾಸದಲ್ಲಿ ಚಿರತೆ, ಜಿಂಕೆ ಚರ್ಮ (Leopard and deer skin) ಪತ್ತೆಯಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗೌಸ್ ಮೊಹಿದ್ದೀನ್ ನಿವಾಸಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ನೋಟಿಸ್ ಅಂಟಿಸಿದ್ದಾರೆ.

ಚಿರತೆ ಮತ್ತು ಚಿಂಕೆ ಚರ್ಮ ಪತ್ತೆಯಾದ ಪ್ರಕರಣ ಸಂಬಂಧ ನವೆಂಬರ್ 2ರಂದು ವಿಚಾರಣೆ ನಡೆಸಲಾಗುತ್ತಿದ್ದು, ತಪ್ಪದೆ ಹಾಜರಾಗಬೇಕು ಎಂದು ಸೂಚಿಸಿ ಶಾಖಾದ್ರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಮನೆಯಲ್ಲಿ ಪತ್ತೆಯಾದ ಚಿರತೆ, ಜಿಂಕೆ ಚರ್ಮದ ಮಾಹಿತಿಯನ್ನು ದಾಖಲೆ ಸಮೇತ ನೀಡುವಂತೆ ಸೂಚನೆ ನೀಡಲಾಗಿದೆ.

ಇದನ್ನೂ ಓದಿ: CM Siddaramaiah : ಅಧಿಕಾರಿಗಳಿಗೆ ವರ್ಕ್‌ ಫ್ರಂ ಹೋಮ್‌ ಇಲ್ಲ; ಕಚೇರಿಗೇ ಬರ್ಬೇಕು, ಪ್ರವಾಸ ಮಾಡ್ಬೇಕು; ಸಿಎಂ ಕಟ್ಟಾಜ್ಞೆ

ಚಿಕ್ಕಮಗಳೂರು ವಲಯ ಅರಣ್ಯಾಧಿಕಾರಿ ಮೋಹನ್ ಅವರಿಂದ ನೋಟಿಸ್ ಜಾರಿ ಮಾಡಲಾಗಿದ್ದು, ಆ ನೋಟಿಸ್‌ ಅನ್ನು ಹಿಡಿದು ಶಾಖಾದ್ರಿ ಗೌಸ್‌ ಮೊಹಿದ್ದೀನ್‌ ಮನೆಗೆ ಅರಣ್ಯ ಇಲಾಖೆ ಸಿಬ್ಬಂದಿ ಬಂದಿದ್ದಾರೆ. ಆದರೆ, ಗೌಸ್‌ ಮೊಹಿದ್ದೀನ್‌ ತಮ್ಮ ಮನೆಗೆ ಬೀಗ ಹಾಕಿ ಹೋಗಿದ್ದರು. ಈ ಹಿನ್ನೆಲೆಯಲ್ಲಿ ಅವರ ಮನೆ ಬಾಗಿಲಿಗೆ ನೋಟಿಸ್‌ ಅನ್ನು ಅಂಟಿಸಿ ಬರಲಾಗಿದೆ.

ಶಾಖಾದ್ರಿ ಗೌಸ್ ಮೊಹಿದ್ದೀನ್ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಕಾಯ್ದೆ ಅಡಿ ಪ್ರಕರಣವನ್ನು ದಾಖಲು ಮಾಡಲಾಗಿದೆ. ಚಿಕ್ಕಮಗಳೂರು ನಗರದ ಎಂ.ಜಿ ರಸ್ತೆ ಬಳಿ ಶಾಖಾದ್ರಿ ನಿವಾಸ ಇದ್ದು, ಅಲ್ಲಿ ಚಿರತೆ ಮತ್ತು ಜಿಂಕೆಯ ಚರ್ಮಗಳು ಪತ್ತೆಯಾಗಿದ್ದವು.

ನವಿಲು ಗರಿ ಬಳಸಬಹುದು ಎಂದಿರುವ ಈಶ್ವರ ಖಂಡ್ರೆ

ನವಿಲು ಗರಿಗಳನ್ನು (Peacock feather) ಬಳಕೆ ಮಾಡಲು ಕಾನೂನಿನಲ್ಲಿ ಅವಕಾಶ ಇದೆ. ಆದರೆ, ಅವುಗಳ ರಫ್ತು ಮಾಡುವಂತೆ ಇಲ್ಲ ಎಂದು ಸಚಿವ ಈಶ್ವರ ಖಂಡ್ರೆ (Minister Ishwar Khandre) ಈಚೆಗೆ ಸ್ಪಷ್ಟಪಡಿಸಿದ್ದರು. ನವಿಲು ಗರಿಗಳನ್ನು ದರ್ಗಾ ಹಾಗೂ ಮಸೀದಿಗಳಲ್ಲಿ ಬಳಕೆ ಮಾಡಲಾಗುತ್ತದೆ. ಮೌಲ್ವಿಗಳ ಮೇಲೆ ಏಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಬಿಜೆಪಿ ಮಾಡಿದ್ದ ಪ್ರಶ್ನೆಗೆ ಸಚಿವರು ಈ ಉತ್ತರವನ್ನು ನೀಡಿದ್ದರು.

ಇದನ್ನೂ ಓದಿ: Caste Census Report : ನವೆಂಬರ್‌ನಲ್ಲಿ ಜಾತಿ ಗಣತಿ ವರದಿ ಸ್ವೀಕರಿಸುವೆನೆಂದ ಸಿದ್ದರಾಮಯ್ಯ; ಎಚ್‌ಡಿಕೆ ವಿರುದ್ಧ ವಾಗ್ದಾಳಿ

ಸೆಕ್ಷನ್ 43ರಡಿಯಲ್ಲಿ ವನ್ಯಜೀವಿ ಕಾಯ್ದೆ 72 ಇದ್ದು, ಈ ಕಾಯ್ದೆಯಲ್ಲಿ ನವಿಲು ಗರಿಗಳಿಗೆ ವಿನಾಯಿತಿ ಇದೆ. ಇವುಗಳನ್ನು ರಪ್ತು ಮಾಡುವಂತಿಲ್ಲ ಎಂದು ಸಚಿವ ಈಶ್ವರ್‌ ಖಂಡ್ರೆ ಹೇಳುವ ಮೂಲಕ ದರ್ಗಾ, ಮಸೀದಿಗಳಲ್ಲಿ ನವಿಲು ಗರಿಗಳನ್ನು ಬಳಕೆ ಮಾಡುತ್ತಿರುವ ಮೌಲ್ವಿಗಳಿಗೆ ಯಾವುದೇ ರೀತಿಯ ಕಾನೂನು ತೊಡಕು ಇಲ್ಲ ಎಂಬುದನ್ನು ಪರೋಕ್ಷವಾಗಿ ಹೇಳಿದ್ದರು.

Exit mobile version