ಚಿಕ್ಕಮಗಳೂರು/ಮಂಡ್ಯ: ಮಲೆನಾಡು ಭಾಗದಲ್ಲಿ ಮತ್ತೆ ಕಾಡಾನೆಗಳ ಹಾವಳಿ (Wild Animals Attack) ಹೆಚ್ಚಾಗಿದ್ದು, ಆತಂಕವನ್ನು ಸೃಷ್ಟಿಸಿದೆ. ಕಾಡಿನಿಂದ ನಾಡಿಗೆ ನುಗ್ಗಿರುವ ಕಾಡಾನೆಗಳು ನಡು ರಸ್ತೆಗೆ ಅಡ್ಡಹಾಕಿ ಭಯ ಹುಟ್ಟಿಸುತ್ತಿದೆ. ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಸಾಲ್ಮರ ಗ್ರಾಮದ ಬಳಿ ಕಾಡಾನೆ ಹಿಂಡು ಪ್ರತ್ಯಕ್ಷಗೊಂಡಿದೆ.
ಸುಮಾರು 18 ಕಾಡಾನೆಗಳು ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಸವಾರಿ ಮಾಡುತ್ತಿದೆ. ಕಾಡಾನೆಗಳು ರಸ್ತೆ ದಾಟುವಾಗ ಗ್ರಾಮಸ್ಥರು ಆನೆಗಳು ಎಷ್ಟಿವೆ ಎಂದು ಲೆಕ್ಕ ಹಾಕಿದ್ದಾರೆ. ಹೊಸಪುರ, ಕಸ್ಕೆ ಬೈಲು, ಜಿ ಹೊಸಳ್ಳಿ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಿದೆ. ವಾಹನ ಸವಾರರು, ತೋಟಕ್ಕೆ ತರಳುವ ಕಾರ್ಮಿಕರಿಗೆ ಅರಣ್ಯ ಇಲಾಖೆ ಎಚ್ಚರಿಕೆ ನೀಡಿದೆ. ಕಳೆದ 20 ದಿನಗಳಿಂದ 18 ಆನೆಗಳು ನಿರಂತರ ದಾಳಿ ಮಾಡುತ್ತಿವೆ.
ಮಂಡ್ಯ ಸಿಟಿಗೂ ಎಂಟ್ರಿ ಕೊಟ್ಟ ಕಾಡಾನೆಗಳ ರೌಂಡ್ಸ್
ಮಂಡ್ಯ ಸಿಟಿಗೂ ಎರಡು ಕಾಡಾನೆಗಳು ಎಂಟ್ರಿ ಕೊಟ್ಟಿದ್ದು, ರಾತ್ರಿಯಿಡೀ ರೌಂಡ್ಸ್ ಹಾಕಿದೆ. ನಗರದ ಕಲ್ಲಹಳ್ಳಿ, ವಿವಿ ನಗರ ಭಾಗದಲ್ಲಿ ಆನೆಗಳು ಸಂಚಾರಿಸಿವೆ. ಮಧ್ಯರಾತ್ರಿ ನಾಯಿ ಬೊಗಳುತ್ತಿದ್ದನ್ನು ಕೇಳಿ ಹೊರ ಬಂದ ನಿವಾಸಿಗಳು ಶಾಕ್ ಆಗಿದ್ದರು. ಕಳೆದ ಎರಡ್ಮೂರು ದಿನದಿಂದ ಶ್ರೀರಂಗಪಟ್ಟಣ ತಾಲೂಕಿನಲ್ಲಿ ಬೀಡು ಬಿಟ್ಟಿದ್ದ ಆನೆಗಳು, ಸದ್ಯ ಮಂಡ್ಯದ ಸದ್ವಿಧ್ಯ ಸ್ಕೂಲ್ ಬಳಿಯ ಕಬ್ಬಿನ ತೋಟದಲ್ಲಿವೆ.
ಇದನ್ನೂ ಓದಿ: Road Accident : ಅಂಗನವಾಡಿಗೆ ಹೊರಟಿದ್ದ ಬಾಲಕನ ಬಲಿ ಪಡೆದ ಖಾಸಗಿ ಶಾಲಾ ವಾಹನ
ಶಿವಮೊಗ್ಗ, ಕೊಪ್ಪಳ, ಚಿತ್ರದುರ್ಗದಲ್ಲಿ ಕರಡಿ ಕಾಟ
ಶಿವಮೊಗ್ಗದ ಭದ್ರಾವತಿ ತಾಲೂಕಿನ ತಿಮ್ಲಾಪುರ ಕ್ಯಾಂಪ್‌ನಲ್ಲಿ ಕರಡಿಯೊಂದು ಪ್ರತ್ಯಕ್ಷಗೊಂಡಿತ್ತು. ಬೆಳಗಿನ ಜಾವ ಕರಡಿ ಓಡಾಟವು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆಹಾರ ಅರಸಿಕೊಂಡು ಕರಡಿ ಸುದ್ದಿ ಕೇಳಿ ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ಇತ್ತ ಕೊಪ್ಪಳ ತಾಲೂಕಿನ ಇಂದರಗಿ ಗ್ರಾಮದ ಹೊರವಲಯದಲ್ಲಿ ನಾಯಿಗಳು ಕರಡಿಗಳನ್ನು ಅಟ್ಟಾಡಿಸಿದೆ. ನಾಯಿಗಳನ್ನು ಕಂಡು ಕರಡಿಗಳು ಓಡಿ ಹೋಗಿದೆ. ನಿನ್ನೆ ಸೋಮವಾರವಷ್ಟೇ ಎರಡು ಕರಡಿಗಳು ಗ್ರಾಮದ ಹೊರವಲಯದ ದೇವಸ್ಥಾನವೊಂದಕ್ಕೆ ಬಂದಿದ್ದವು. ಇಂದು ಮತ್ತೇ ಗ್ರಾಮಕ್ಕೆ ಹೊಂದಿಕೊಂಡಂತೆ ಇರುವ ಜಮೀನಿನಲ್ಲಿ ಎರಡು ಕರಡಿಗಳು ಪ್ರತ್ಯಕ್ಷವಾಗಿವೆ.
ಚಿತ್ರದುರ್ಗದ ಮೊಳಕಾಲ್ಮೂರು ತಾಲೂಕಿನ ಹಿರೇಕೆರೆಹಳ್ಳಿ ಗ್ರಾಮದಲ್ಲಿ ಎರಡು ಕರಡಿಗಳು ಪ್ರತ್ಯಕ್ಷಗೊಂಡಿವೆ. ಊರಿನೊಳಗೆ ಬಂದ ಕರಡಿ ರಾತ್ರಿಯೆಲ್ಲ ಓಡಾಟ ನಡೆಸಿದೆ. ಗ್ರಾಮದ ಅಂಬೇಡ್ಕರ್ ವೃತ್ತದ ಮುಂಭಾಗದ ರಸ್ತೆಯಲ್ಲಿ ಕರಡಿ ಹಾದು ಹೋಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಶಿವಮೊಗ್ಗದಲ್ಲಿ ಹೆಬ್ಬಾವು ಸೆರೆ
ಭಾರೀ ಗಾತ್ರದ ಹೆಬ್ಬಾವು ಸೆರೆಯಾಗಿದೆ. ಹುಲ್ಲಿನ ಬಣವೆಯ ಬಿಲದ ಬಳಿ ಅವಿತುಕೊಂಡಿದ್ದ ಹೆಬ್ಬಾವನ್ನು ಸ್ನೇಕ್ ಕಿರಣ್ ರಕ್ಷಣೆ ಮಾಡಿದ್ದಾರೆ. ಶಿವಮೊಗ್ಗದ ತೀರ್ಥಹಳ್ಳಿ ರಸ್ತೆಯ ಕುರುಬರ ಪಾಳ್ಯದ ಮನೆ ಹಿಂಭಾಗದಲ್ಲಿತ್ತು. ಏಳುವರೆ ಅಡಿ ಉದ್ದ ಹೆಬ್ಬಾವಿನ ರಕ್ಷಣೆ ಮಾಡಿ ಕಾಡಿಗೆ ಬಿಡಲಾಗಿದೆ. ಹಾವು ಕಂಡಾಗ ಸಾಯಿಸದೆ ನಮಗೆ ಮಾಹಿತಿ ನೀಡಿ ಎಂದು ಸ್ನೇಕ್ ಕಿರಣ್ ಮನವಿ ಮಾಡಿದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ