ಬೆಂಗಳೂರು, ಕರ್ನಾಟಕ: ಬೆಳಗಾವಿ ಜಿಲ್ಲೆಯ ಪ್ರತಿಷ್ಠಿತ ಕ್ಷೇತ್ರಗಳ ಪೈಕಿ ಚಿಕ್ಕೋಡಿ- ಸದಲಗಾ ಕ್ಷೇತ್ರವೂ ಒಂದು. ಇಲ್ಲಿ ಕಾಂಗ್ರೆಸ್ ಪಾರಪತ್ಯವನ್ನು ಸಾಧಿಸಿದೆ. ಹಾಲಿ ಶಾಸಕ ಗಣೇಶ್ ಹುಕ್ಕೇರಿ ಅವರು ಭರ್ಜರಿ ಜಯ ಸಾಧಿಸಿದ್ದಾರೆ. ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ರಮೇಶ್ ಕತ್ತಿ ವಿರುದ್ಧ ಗಣೇಶ್ ಅವರು ಭರ್ಜರಿ 78509 ಮತಗಳ ಅಂತರದಿಂದ ಗೆದ್ದಿದ್ದಾರೆ. ರಮೇಶ್ ಕತ್ತಿ ಅವರು 49,840 ಮತಗಳನ್ನು ಪಡೆದುಕೊಂಡರೆ, ಗಣೇಶ್ ಹುಕ್ಕೇರಿ ಅವರು 1,28,349 ಮತಗಳನ್ನು ಸಂಪಾದಿಸಿದ್ದಾರೆ. ಈ ಮೂಲಕ ತಮ್ಮ ಗೆಲುವಿನ ನಾಗಾಲೋಟವನ್ನು ಮುಂದುವರಿಸಿದ್ದಾರೆ(Chikkodi-Sadalga election Results).
2023ರ ಚುನಾವಣೆಯ ಅಭ್ಯರ್ಥಿಗಳು
ಕಾಂಗ್ರೆಸ್‌ನಿಂದ ಹಾಲಿ ಶಾಸಕ ಗಣೇಶ್ ಹುಕ್ಕೇರಿ ಕಣದಲ್ಲಿದ್ದರು. ಬಿಜೆಪಿಯು ರಮೇಶ್ ಕತ್ತಿ ಅವರಿಗೆ ಟಿಕೆಟ್ ನೀಡಿದ್ದರೆ, ಜೆಡಿಎಸ್‌ನಿಂದ ಸುಹಾಸ್ ಸದಾಶಿವ ವಾಳ್ಕೆ ಅವರು ಸ್ಪರ್ಧಿಸಿದ್ದರು.
ಇದನ್ನೂ ಓದಿ: Karnataka Election Results Live Updates: ಕರ್ನಾಟಕ ವಿಧಾನಸಭೆ ಚುನಾವಣೆ; ರೇಣುಕಾಚಾರ್ಯಗೆ ಸೋಲಿನ ನೋವು
2018ರ ಚುನಾವಣೆಯ ಫಲಿತಾಂಶ ಏನಾಗಿತ್ತು?
ಕಾಂಗ್ರೆಸ್‌ನ ಹಿರಿಯ ನಾಯಕ ಪ್ರಕಾಶ್ ಹುಕ್ಕೇರಿ ಅವರ ಪುತ್ರ ಗಣೇಶ್ ಹುಕ್ಕೇರಿ ಅವರು ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆದ್ದರು. ಬಿಜೆಪಿಯಿಂದ ಸ್ಪರ್ಧಿಸಿದ್ದ ಅಣ್ಣಾಸಾಹೇಬ್ ಜೊಲ್ಲೆ ಅವರು ಪರಾಭವಗೊಂಡರು. ಗಣೇಶ್ ಹುಕ್ಕೇರಿ 91467 ಮತಗಳನ್ನು ಪಡೆದುಕೊಂಡರೆ, 1056 ಮತಗಳ ಅಂತದಿಂದ ಪ್ರಚಂಡ ಗೆಲುವು ಸಾಧಿಸಿದರು.