ಚಿಕ್ಕೋಡಿ: ಬೆಳಗಾವಿ ಜಿಲ್ಲೆ ಕಾಗವಾಡ ತಾಲೂಕಿನ ಉಗಾರಖುರ್ದ ಪಟ್ಟಣದ ಉಗಾರ ಶುಗರ್ ವರ್ಕ್ಸ್ ಸಕ್ಕರೆ ಕಾರ್ಖಾನೆಯ ಡಾ. ಶಿರಗಾಂವ್ಕರ ಶಿಕ್ಷಣ ಸಂಸ್ಥೆಯ ಎನ್‌ಎನ್‌ಸಿ ಶಾಲೆ ಮತ್ತು ಶ್ರೀಹರಿ ಪ್ರೌಢಶಾಲೆಯ ಒಟ್ಟು 75 ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯ ಅಮೃತ ಮಹೋತ್ಸವದ (Amrit Mahotsav) ಅಂಗವಾಗಿ ಬೆಳಗಾವಿಯಿಂದ ಪುಣೆವರೆಗೆ ವಿಮಾನ ಪ್ರವಾಸದ ಭಾಗ್ಯ ಲಭಿಸಿದೆ.
ಉಗಾರದ ಡಾ. ಶಿರಗಾಂವ್ಕರ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಚಂದನ ಶಿರಗಾಂವ್ಕರ ಹಾಗೂ ಅವರ ತಾಯಿ, ಉಗಾರ ಮಹಿಳಾ ಮಂಡಳದ ಸಂಚಾಲಕಿ ರಾಧಿಕಾ ಶಿರಗಾಂವ್ಕರ ಅವರು ಈ ಪ್ರವಾಸದ ವ್ಯವಸ್ಥೆ ಮಾಡಿದ್ದು, ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ೭೫ ಮಕ್ಕಳಿಗೆ ಮಾತ್ರ ಈ ಅವಕಾಶ ನೀಡಿದ್ದಾರೆ.
ರಾಧಿಕಾ ಶಿರಗಾಂವ್ಕರ ಅವರು ಶ್ರೀಹರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಉಗಾರದಿಂದ ಬೆಳಗಾವಿಗೆ ತೆರಳುವ ಬಸ್‌ಗೆ ಸೋಮವಾರ ಪೂಜೆ ಸಲ್ಲಿಸಿ ಶುಭ ಹಾರೈಸಿದರು. ವಿಮಾನ ಪ್ರವಾಸ ಕೈಗೊಳ್ಳಲಿರುವ ವಿದ್ಯಾರ್ಥಿಗಳು ಸಂತಸದಿಂದ ಕುಣಿದು ಕುಪ್ಪಳಿಸುತ್ತಿದ್ದರು.
ಇದನ್ನೂ ಓದಿ | ಸಕಾಲಕ್ಕೆ ಪೂರೈಕೆಯಾಗದ ಅದಿರು; ಶಾಸಕ ನಾಗೇಂದ್ರ ಸೇರಿ ಮೂವರಿಗೆ ಅರೆಸ್ಟ್ ವಾರೆಂಟ್