ಬೆಂಗಳೂರು: ತಾಯಿ ಊಟ ಮಾಡಿಸುತ್ತಿದ್ದಾಗ ಕಟ್ಟಡದ ಮೇಲಿಂದ ಆಯತಪ್ಪಿ ಬಿದ್ದು ಒಂದೂವರೆ ವರ್ಷದ ಮಗು ಮೃತಪಟ್ಟಿರುವ (Child dies) ಘಟನೆ ನಗರದ ಚಾಮರಾಜಪೇಟೆಯಲ್ಲಿ ನಡೆದಿದೆ. ಗೆಳೆಯರ ಮನೆಗೆ ಬಂದಿದ್ದಾಗ ಘಟನೆ ನಡೆದಿದ್ದು, ಊಟ ಮಾಡುತ್ತಾ ಗ್ರಿಲ್ ಹತ್ತಿದಾಗ ಆಯತಪ್ಪಿ ಮಗು ಕೆಳಕ್ಕೆ ಬಿದ್ದಿದೆ.
ವಿನಯ್ ಎಂಬುವವರ ಪುತ್ರಿ ದೀಕ್ಷಾ ಮೃತಪಟ್ಟ ಮಗು. ಚಾಮರಾಜಪೇಟೆಯ ಆಜಾದ್ ನಗರದ 6ನೇ ಕ್ರಾಸ್‌ನಲ್ಲಿನ ಸ್ನೇಹಿತರ ಮನೆಗೆ ಮಗುವಿನೊಂದಿಗೆ ತಾಯಿ ಮಂಗಳವಾರ ರಾತ್ರಿ ತೆರಳಿದ್ದರು. ಮಹಡಿಯ ಮೇಲೆ ತಾಯಿ ಊಟ ಮಾಡಿಸುತ್ತಿದ್ದಾಗ ಮಗು ಗ್ರಿಲ್ ಹತ್ತಿ ಆಟವಾಡುತ್ತಿದ್ದಳು. ಈ ವೇಳೆ ಆಯತಪ್ಪಿ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದೆ. ತಕ್ಷಣವೇ ಆಸ್ಪತ್ರೆಗೆ ಸಾಗಿಸಲು ತೆರಳುತ್ತಿದ್ದಾಗ ಮಗು ಮೃತಪಟ್ಟಿದೆ.
ಇದನ್ನೂ ಓದಿ | Car Accident: ಕಾರು ರ‍್ಯಾಷ್ ಡ್ರೈವಿಂಗ್‌ಗೆ ಇಬ್ಬರು ಯುವಕರು ಬಲಿ; ಬಸ್‌ಗೆ ಡಿಕ್ಕಿ ಹೊಡೆದು ಕಾರು ಸಂಪೂರ್ಣ ಜಖಂ