ಉಡುಪಿ: ತಾಯಿ ಜೊತೆ ಹೊಳೆ ಬದಿಗೆ ಹೋಗಿದ್ದ ಬಾಲಕನೊಬ್ಬ ಅಮ್ಮನ ಕಣ್ಣೆದುರೇ ನೀರಿನಲ್ಲಿ ಮುಳುಗಿ (Boy drowned) ಮೃತಪಟ್ಟಿದ್ದಾನೆ. ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಮದ್ದೋಡಿಯಲ್ಲಿ ನಡೆದ ಈ ಘಟನೆಯಲ್ಲಿ ಅನಿಲ್ ಎಂಬ ಏಳು ವರ್ಷದ ಬಾಲಕ ಪ್ರಾಣ ಕಳೆದುಕೊಂಡಿದ್ದಾನೆ.
ತಾಯಿ ಬಟ್ಟೆ ಒಗೆಯಲೆಂದು ಹೊಳೆ ಬದಿಗೆ ಹೊರಟಾಗ ಅನಿಲ್ ಕೂಡಾ ಅವರ ಜತೆ ಹೊರಟಿದ್ದ. ಅಮ್ಮ ಹೊಳೆ ಬದಿಯಲ್ಲಿ ನಿಂತು ಬಟ್ಟೆ ತೊಳೆಯುತ್ತಿದ್ದಂತೆಯೇ ಮಗ ಅನಿಲ್ ತಾನು ನೀರಿನಲ್ಲಿ ಆಟವಾಡುತ್ತಾ ಕೂತಿರುವುದಾಗಿ ಹೇಳಿದ್ದ. ಹಾಗೆ ಕಲ್ಲಿನ ಮೇಲೆ ಕುಳಿತಿದ್ದ ಮಗು ಒಮ್ಮೆಗೇ ಆಯತಪ್ಪಿ ನೀರಿಗೆ ಬಿದ್ದಿದ್ದಾನೆ.
ಅಮ್ಮನಿಗೆ ಕೂಡಲೇ ಮಗು ನೀರಿಗೆ ಬಿದ್ದಿರುವುದು ಗೊತ್ತಾದರೂ ಆಕೆ ಆ ಕಡೆ ನುಗ್ಗಿ ಮಗುವನ್ನು ಸೆಳೆದುಕೊಳ್ಳಲು ಪ್ರಯತ್ನಿಸಿದರೂ ಸಾಧ್ಯವಾಗದೆ ಮಗು ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಬೈಂದೂರು ಪೋಲಿಸರು ಭೇಟಿ ನೀಡಿದ್ದಾರೆ.
ಇದನ್ನೂ ಓದಿ | Youth drowned | ಆಕಳ ಮೈ ತೊಳೆಯಲು ಕೆರೆಗೆ ಬಂದ ವ್ಯಕ್ತಿ ನೀರಿನಲ್ಲಿ ಮುಳುಗಿ ಸಾವು: ಆಕಳೇ ಸೆಳೆಯಿತೇ ನೀರಿಗೆ?