Site icon Vistara News

Road accident: ಕೊಪ್ಪಳದಲ್ಲಿ ಟ್ರ್ಯಾಕ್ಟರ್‌-ಕಾರು ನಡುವೆ ಅಪಘಾತಕ್ಕೆ ಮಗು ಬಲಿ; ಮುಂಡರಗಿಯಲ್ಲಿ ಪೊಲೀಸ್‌ ಪೇದೆ ಸಾವು

Child killed in tractor car accident in Koppal and Police constable dies in Mundaragi Road accident

ಕೊಪ್ಪಳ: ತಾಲೂಕಿನ ಬಹದ್ದೂರ ಬಂಡಿ ಕ್ರಾಸ್ ಬಳಿ ಭಾನುವಾರ (ಫೆ. ೨೬) ಬೆಳಗ್ಗೆ ಮರಳು ಟ್ರ್ಯಾಕ್ಟರ್ ಹಾಗೂ ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ (Road accident) ೪ ವರ್ಷದ ಮಗು ಮೃತಪಟ್ಟಿದೆ. ಇತರ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಗದಗಿನಿಂದ ಹೊಸಪೇಟೆಯತ್ತ ಕಾರು ಹೊರಟಿತ್ತು. ಎದುರಿಗೆ ಬಂದ ಟ್ರ್ಯಾಕ್ಟರ್‌ಗೆ ಕಾರು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಈ ವೇಳೆ ನಾಲ್ಕು ವರ್ಷದ ಮಗು ಸ್ಥಳದಲ್ಲಿಯೇ ಮೃತಪಟ್ಟರೆ, ಗಾಯಗೊಂಡ ಇತರರನ್ನು ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ‌ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: Viral Video: ಸಫಾರಿ ಜೀಪ್​​ ಅಟ್ಟಿಸಿಕೊಂಡು ಬಂದು ಗುದ್ದಿದ 2 ಘೇಂಡಾಮೃಗಗಳು; ವಾಹನ ಪಲ್ಟಿ, 7 ಮಂದಿಗೆ ಗಾಯ

ಮುಂಡರಗಿ ಅಪಘಾತದಲ್ಲಿ ಪೊಲೀಸ್‌ ಪೇದೆ ಸಾವು

ಗದಗ: ಕರ್ತವ್ಯ ಮುಗಿಸಿ ಮನೆಗೆ ತೆರಳುತ್ತಿದ್ದ ಪೊಲೀಸ್ ಪೇದೆಯೊಬ್ಬರು ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಬರದೂರು ಬಳಿ ಅಪಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ. ಮುಂಡರಗಿ ಠಾಣೆಯಲ್ಲಿ ಕಾನ್ಸ್‌ಟೇಬಲ್ ಆಗಿದ್ದ ಕೊಟ್ರೆಪ್ಪ ಭಂಡಗಾರ (59) ಮೃತ ದುರ್ದೈವಿ.

ಇವರು ಶನಿವಾರ ರಾತ್ರಿ ಕರ್ತವ್ಯ ಮುಗಿಸಿ ಮುಂಡರಗಿಯಿಂದ ಗದಗ ಕಡೆಗೆ ಹೊರಟಿದ್ದರು ಎನ್ನಲಾಗಿದೆ. ಈ ವೇಳೆ ಅಪಘಾತ ಸಂಭವಿಸಿದೆ. ರಾತ್ರಿ ಬೈಕ್‌ನಲ್ಲಿ ತೆರಳುತ್ತಿದ್ದ ಇವರು ರಸ್ತೆ ಕಾಣದೆ ಟ್ರ್ಯಾಕ್ಟರ್‌ಗೆ ಗುದ್ದಿರಬಹುದು ಎಂದು ಶಂಕಿಸಲಾಗಿದೆ. ಮುಂಡರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.

ಹಾಸನದಲ್ಲಿ ಒಂದೇ ಕುಟುಂಬದ ನಾಲ್ವರ ದುರ್ಮರಣ

ಹಾಸನ: ಜಿಲ್ಲೆಯಲ್ಲಿ ಶನಿವಾರ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ದುರ್ಮರಣಕ್ಕೀಡಾಗಿದ್ದಾರೆ. ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಕಾರೇಹಳ್ಳಿ‌ಯಲ್ಲಿ ರಸ್ತೆ ಬಳಿ ನಿಂತಿದ್ದ ಟ್ರ್ಯಾಕ್ಟರ್‌ಗೆ ಬೈಕ್ ಡಿಕ್ಕಿಯಾಗಿ ದುರಂತ ಸಂಭವಿಸಿದೆ.

ಇದನ್ನೂ ಓದಿ: ಪರೀಕ್ಷಾ ಕೇಂದ್ರಕ್ಕೆ ಹೋಗಲು ದಾರಿ ತಪ್ಪಿ ಅಳುತ್ತ ನಿಂತಿದ್ದ ಬಾಲಕಿಗೆ ಪೊಲೀಸ್ ಅಧಿಕಾರಿ ಸಹಾಯ ಮಾಡಿದ್ದು ಹೇಗೆ?

ಪತಿ-ಪತ್ನಿ ಹಾಗೂ ಇಬ್ಬರು ಮಕ್ಕಳು ಸ್ಥಳದಲ್ಲೇ ಸಾವಿಗೀಡಾದವರು. ಲೋಕೇಶ್‌ ಚಾರಿ (ಯೋಗೀಶ್), ಲಕ್ಷ್ಮಿ ಹಾಗೂ ಲೋಕೇಶ್‌ ಚಾರಿ ಅವರ ತಂಗಿಯ ಮಕ್ಕಳಾದ ಗಾನವಿ ಮತ್ತು ಲೇಖನ ‌ಮೃತಪಟ್ಟಿದ್ದಾರೆ. ಕಾರೇಹಳ್ಳಿಯ ನುಗ್ಗೇಹಳ್ಳಿ- ತಿಪಟೂರು ರಸ್ತೆಯಲ್ಲಿ ಘಟನೆ ನಡೆದಿದೆ. ಲೋಕೇಶ್‌ ಅವರು ಹೊಸೂರಿನಿಂದ‌ ಪತ್ನಿಯನ್ನು ಕರೆದುಕೊಂಡು ನವಿಲೆ ಗ್ರಾಮಕ್ಕೆ ಹೋಗುತ್ತಿದ್ದಾಗ ದುರ್ಘಟನೆ ಸಂಭವಿಸಿದೆ. ಡಿಕ್ಕಿಯಾದ ರಭಸಕ್ಕೆ ಬೈಕ್ ಸಂಪೂರ್ಣ ‌ನಜ್ಜುಗುಜ್ಜಾಗಿದೆ. ಸ್ಥಳಕ್ಕೆ ನುಗ್ಗೇಹಳ್ಳಿ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Exit mobile version