Site icon Vistara News

Child Labour : ತೆಂಗು ಕಾರ್ಖಾನೆಯಲ್ಲಿ ಬಾಲ ಕಾರ್ಮಿಕರು ಬಂಧಿ; ಮಕ್ಕಳ ಆಯೋಗದಿಂದ ರಕ್ಷಣೆ

child rights commission

ತುಮಕೂರು: ಆಟ-ಪಾಠ ಎಂದು ಇರಬೇಕಾದ ಭವಿಷ್ಯದ ಮಕ್ಕಳು ಕಾರ್ಖಾನೆಯಲ್ಲಿ ಕೆಲಸದಲ್ಲಿ ತೊಡಗಿದ್ದರು. ಬಾಲ ಕಾರ್ಮಿಕ ಪದ್ಧತಿ (Child Labour) ನಿಷೇಧ ಇದ್ದರೂ ತುಮಕೂರಲ್ಲಿ ಮಾತ್ರ ಇನ್ನೂ ಜೀವಂತವಾಗಿದೆ. ಇಲ್ಲಿನ ತಿಪಟೂರಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ ಕೊಕೊನಟ್‌ ಕಾರ್ಖಾನೆಗಳ ಮೇಲೆ ರಾಜ್ಯ ಮಕ್ಕಳ ರಕ್ಷಣಾ ಆಯೋಗವು (child rights commission) ದಿಢೀರ್‌ ದಾಳಿ ನಡೆಸಿದೆ. ಈ ವೇಳೆ ಅಕ್ರಮವಾಗಿ ಕೂಡಿ ಹಾಕಿದ್ದ 10ಕ್ಕೂ ಹೆಚ್ಚು ಬಾಲ ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ.

ಮಕ್ಕಳ ರಕ್ಷಣಾ ಆಯೋಗದ ಅಧ್ಯಕ್ಷ ನಾಗನಗೌಡ ನೇತೃತ್ವದಲ್ಲಿ ಕಾರ್ಖಾನೆ ಮೇಲೆ ದಾಳಿ

ಮಕ್ಕಳ ರಕ್ಷಣಾ ಆಯೋಗದ ಅಧ್ಯಕ್ಷ ನಾಗನಗೌಡ ನೇತೃತ್ವದಲ್ಲಿ ಹೊಸಪಾಳ್ಯ, ಮಂಜುನಾಥನಗರ, ಆಲೂರು ಗೇಟ್‌ಗಳಲ್ಲಿನ ಕಾರ್ಖಾನೆಗಳ ಮೇಲೆ ದಾಳಿ ನಡೆಸಲಾಯಿತು. ಕೆಲವು ಕಾರ್ಖಾನೆ ಮಾಲೀಕರು ಮಕ್ಕಳನ್ನು ಕೊಠಡಿ ಒಂದರಲ್ಲಿ ಕೂಡಿ ಹಾಕಿದ್ದು ಕಂಡು ಬಂದಿದೆ.

ಬಾಲಕಾರ್ಮಿಕರ ರಕ್ಷಣೆ

ಇದನ್ನೂ ಓದಿ: Fraud case : ಸ್ವಿಗ್ಗಿಗಾಗಿ ಸ್ಕೂಟರ್‌ ಬಾಡಿಗೆ ಪಡೆದು Olxನಲ್ಲಿ ಸೇಲ್‌ ಮಾಡಿದ ಖತರ್ನಾಕ್​

ಬಾಲಾಜಿ ಕೊಕೊನಟ್ ಇಂಡಸ್ಟ್ರಿ ಎಂಬ ಕಾರ್ಖಾನೆಯವರು ಮಕ್ಕಳನ್ನು ಅಕ್ರಮವಾಗಿ ಕೂಡಿಹಾಕಿದ್ದರು. ಆಯೋಗವು ಎಲ್ಲ ಮಕ್ಕಳನ್ನು ರಕ್ಷಣೆ ಮಾಡಿ‌, ಕಾರ್ಖಾನೆ ಮಾಲೀಕರ ವಿರುದ್ಧ ಕ್ರಮಕ್ಕೆ ಸೂಚನೆ ನೀಡಲಾಗಿದೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ಕಾರ್ಮಿಕ ಇಲಾಖೆ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂದು ಮಕ್ಕಳ ರಕ್ಷಣಾ ಆಯೋಗದ ಅಧ್ಯಕ್ಷ ನಾಗನಗೌಡ ಗರಂ ಆದರು.

ಮಹಿಳಾ ಕಾರ್ಮಿಕರಿಗೆ ಮೂಲಸೌಕರ್ಯಗಳಿಲ್ಲದೆ ಇರುವುದು

ಕಾರ್ಖಾನೆಗಳಲ್ಲಿ ಹೀನಾಯ ಸ್ಥಿತಿಯಲ್ಲಿ ಮಹಿಳಾ ಕಾರ್ಮಿಕರು ಕೆಲಸ ಮಾಡುತ್ತಿರುವ ಕಂಡು ಬಂದಿದೆ. ಸಮವಸ್ತ್ರ, ಮಾಸ್ಕ್ ಸೇರಿದಂತೆ ಯಾವುದೇ ಮೂಲಸೌಕರ್ಯಗಳಿಲ್ಲದೇ ಕೆಲಸ ಮಾಡುತ್ತಿದ್ದಾರೆ. ಸದ್ಯ ತಿಪಟೂರು ತಾಲೂಕಿನಲ್ಲಿರುವ ಎಲ್ಲಾ ಕಾರ್ಖಾನೆಗಳು ಮತ್ತು ಕಾರ್ಮಿಕರ ಬಗ್ಗೆ ಮಾಹಿತಿ ಸಂಗ್ರಹಿಸಲಾಗುವುದು ಎಂದು ಮಾಹಿತಿ ನೀಡಿದರು.‌

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version