Site icon Vistara News

Child Theft | ಮಕ್ಕಳ ಕಳ್ಳನೆಂದು ತಿಳಿದು ಭಿಕ್ಷುಕನಿಗೆ ಹಿಗ್ಗಾಮುಗ್ಗಾ ಥಳಿತ

murder ಸುರಪುರ ಕೆಂಬಾವಿ ಜೋಡಿ ಕೊಲೆ

ಯಾದಗಿರಿ: ಈಗ ರಾಜ್ಯಾದ್ಯಂತ ಮಕ್ಕಳ ಕಳ್ಳರು ಬಂದಿದ್ದಾರೆಂಬ ವದಂತಿ ಹರಿಡಿದ್ದರಿಂದ ಜಿಲ್ಲೆಯಲ್ಲಿಯೂ ಭೀತಿ ಹೆಚ್ಚಾಗಿದ್ದು, ಭಿಕ್ಷುಕನೊಬ್ಬನನ್ನು ಮಕ್ಕಳ ಕಳ್ಳ (Child Theft) ಎಂದು ತಪ್ಪು ತಿಳಿವಳಿಕೆ ಹೊಂದಿ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಯಾದಗಿರಿ ನಗರದ ಹತ್ತಿಕುಣಿ ಕ್ರಾಸ್ ಬಳಿ ನಡೆದಿದೆ.

ಭಿಕ್ಷುಕ ನಗರದಲ್ಲಿ ಅನುಮಾನಾಸ್ಪದವಾಗಿ ಓಡಾಡಿದ್ದಾನೆ. ಕೆಲವು ಸಮಯ ಗಮನಿಸಿದ ಸಾರ್ವಜನಿಕರಿಗೆ ಈತನ ಮೇಲೆ ಅನುಮಾನ ಬಂದಿದೆ. ಈ ಹಿನ್ನೆಲೆಯಲ್ಲಿ ಈತನನ್ನು ಹಿಡಿದು ಯಾರು ಎಂದು ವಿಚಾರಣೆ ನಡೆಸಿದ್ದಾರೆ. ಮೊದಲಿಗೆ ಸಮರ್ಪಕವಾಗಿ ಉತ್ತರ ಕೊಡಲಿಲ್ಲ ಎನ್ನಲಾಗಿದೆ. ಆದರೆ, ಬಳಿಕ ಈತ ಸುರಪುರ ಶಾಸಕ ರಾಜುಗೌಡ ಹಾಗೂ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರ ಹೆಸರನ್ನು ಹೇಳಿದ್ದಾನೆನ್ನಲಾಗಿದೆ. ಇದರಿಂದ ಸಾರ್ವಜನಿಕರಿಗೆ ಮತ್ತಷ್ಟು ಅನುಮಾನ ಬಂದಿದ್ದು, ಈತ ಮಕ್ಕಳ ಕಳ್ಳನೇ ಇರಬೇಕೆಂದು ಭಾವಿಸಿದ್ದಾರೆ. ಬಳಿಕ ತಾಳ್ಮೆ ಕಳೆದುಕೊಂಡ ಸಾರ್ವಜನಿಕರು ಭಿಕ್ಷುಕನನ್ನು ಥಳಿಸಿದ್ದಾರೆ.

ಮಕ್ಕಳ ಕಳ್ಳನೆಂದು ಭಾವಿಸಿ ಭಿಕ್ಷುಕನಿಗೆ ಥಳಿಸಿದ ಸಾರ್ವಜನಿಕರು

ಸಾರ್ವಜನಿಕರು ಥಳಿಸುವಾಗ ಭಿಕ್ಷುಕ, “ನನ್ನನ್ನು ಬಿಟ್ಟುಬಿಡಿ, ನಾನು ಸುರಪುರದವನು. ಭಿಕ್ಷುಕ” ಎಂದು ಜೋರಾಗಿ ಹೇಳಿದ್ದಾನೆ. ಆದರೂ ಕೇಳದ ಜನ ಬಳಿಕ ಆತನನ್ನು ಯಾದಗಿರಿ ನಗರದ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.

ಇದನ್ನೂ ಓದಿ: child theft | ಮಕ್ಕಳ ಕಳ್ಳರೆಂದು ಭ್ರಮಿಸಿ ಬೆನ್ನಟ್ಟಿದರು, ಇನ್ನೋವಾ ವಾಹನ ಪಲ್ಟಿಯಾಗಿ ಮೂವರಿಗೆ ಗಾಯ

Exit mobile version