Site icon Vistara News

Childrens Rescued: ಕುಡುಕ ತಂದೆಯಿಂದ ನಾಲ್ವರು ಹೆಣ್ಣು ಮಕ್ಕಳ ರಕ್ಷಣೆ ಮಾಡಿದ ಅಧಿಕಾರಿ

ಮಂಡ್ಯ: ಇಲ್ಲಿನ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದ ನಾಲ್ವರು ಹೆಣ್ಣು ಮಕ್ಕಳ ಕರುಣಾಜನಕ‌ ಕಥೆಯು ಎಂತಹವರ ಕರುಳೂ ಚುರುಕ್‌ ಎನ್ನುವಂತಿದೆ. ಕುಸಿಯುವ ಸ್ಥಿತಿಯ ಪಾಳು ಬಿದ್ದ ಮನೆಯಲ್ಲಿ ಕುಡುಕ ತಂದೆಯೊಂದಿಗೆ ಜೀವನ ಸಾಗಿಸುತ್ತಿದ್ದ ಬಾಲಕಿಯರನ್ನು ರಕ್ಷಣೆ (Childrens Rescued) ಮಾಡಲಾಗಿದೆ.

ಭೂಮಿಕಾ (16), ಪಾಯಲ್ (15), ತನಿಷಾ (12) ಮತ್ತು ಕಾವೇರಿ (10) ಎಂಬುವವರನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ. ಎಂಟು ವರ್ಷಗಳಿಂದಲೂ ಗ್ರಾಮದಲ್ಲಿದ್ದರುವ ನಾಲ್ಕು ಹೆಣ್ಣು ಜೀವಗಳು ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ ಇದೆ. ಈ ನಾಲ್ವರ ತಂದೆ ಸಂದೀಪ್‌ ಮತ್ತು ತಾಯಿ ಸಭಾನ ಎಂಟು ವರ್ಷಗಳ ಹಿಂದೆ ಕೂಲಿ ಅರಸಿ ಮಹಾರಾಷ್ಟ್ರದಿಂದ ಮಹದೇವಪುರಕ್ಕೆ ಬಂದಿದ್ದರು.

ಮಹದೇವಪುರದ ಜೋಪಡಿಯೊಂದರಲ್ಲಿ ಬೀಡು ಬಿಟ್ಟಿದ್ದ ಈ ಕುಟುಂಬಕ್ಕೆ ಸಂದೀಪ್‌ ಕುಡಿತವೇ ಶಾಪವಾಗಿ ಪರಿಣಮಿಸಿತ್ತು. ಕುಡಿತದ ಚಟಕ್ಕೆ ದಾಸನಾಗಿದ್ದ ಸಂದೀಪನ ಯೋಚನೆಯಲ್ಲಿ ಕಳೆದ ಮೂರ್ನಾಲ್ಕು ತಿಂಗಳ ಹಿಂದೆ ತಾಯಿ ‌ಸಭಾನ ಮೃತಪಟ್ಟಿದ್ದರು. ಆಕೆಯ ಅಂತ್ಯಸಂಸ್ಕಾರವನ್ನು ಗ್ರಾಮಸ್ಥರೇ ಸೇರಿ ನೆರವೇರಿಸಿದ್ದರು.

ತಾಯಿ ಸಾವನ್ನಪ್ಪಿದ ನಂತರ ಈ ನಾಲ್ವರು ಬಾಲಕಿಯರು ಅಕ್ಷರಶಃ ಅನಾಥರಾಗಿದ್ದರು. ತಂದೆ ಇದ್ದರೂ ಇಲ್ಲದಂತಾಗಿ ತುತ್ತು ಅನ್ನಕ್ಕೂ ಹೆಣಗಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಮದ್ಯದ ಅಮಲು ಏರಿಸಿಕೊಂಡ ಸಂದೀಪ್‌ ಮಕ್ಕಳನ್ನು ನಿರ್ಲಕ್ಷ್ಯ ಮಾಡಿದ್ದ. ಹೀಗಾಗಿ ನಾಲ್ವರು ಮಕ್ಕಳಿಗೆ ಗ್ರಾಮಸ್ಥರೇ ಒಬ್ಬೊಬ್ಬರ ಮನೆಯಲ್ಲಿ ಊಟ ತಿಂಡಿ ನೀಡಿ ಸಲಹುತ್ತಿದ್ದರು.

ಮಕ್ಕಳ ಕರುಣಾಜನಕ ಸ್ಥಿತಿ ಬಗ್ಗೆ ಗ್ರಾಮಸ್ಥರಿಂದ ಮಾಹಿತಿ ತಿಳಿದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖಾಧಿಕಾರಿ (ಸಿಡಿಪಿಒ) ಅಶೋಕ್ ಭೇಟಿ ನೀಡಿ, ನಾಲ್ವರು ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ. ಇತ್ತ ಅಧಿಕಾರಿಗಳು ಮಕ್ಕಳನ್ನು ಕರೆದೊಯ್ದ ನಂತರ ಮನಸಿನ ಸ್ಥಿಮಿತ ಕಳೆದುಕೊಂಡ ಕುಡುಕ‌ ತಂದೆ ಪತ್ನಿ ಸಭಾನಳ ಫೋಟೊ ಒಡೆದು ಹಾಕಿ ಹುಚ್ಚಾಟ ಮಾಡಿದ್ದಾನೆ.

ಇದನ್ನೂ ಓದಿ | Street dog attack | 10 ವರ್ಷದ ಬಾಲಕಿ ಮೇಲೆ ಬೀದಿ ನಾಯಿ ದಾಳಿ, ಊಟಕ್ಕೆ ಹೋಗುತ್ತಿದ್ದಾಗ ಅಟ್ಯಾಕ್‌

Exit mobile version