ಚಿತ್ರದುರ್ಗ: ಚಿತ್ರನಟ ಪುನೀತ್ ರಾಜಕುಮಾರ್ ಅವರಿಗೆ ಮರಣೋತ್ತರ ʼಬಸವಶ್ರೀʼ ಪ್ರಶಸ್ತಿಯನ್ನು ಚಿತ್ರದುರ್ಗದ ಮುರುಘಾ ಮಠದಲ್ಲಿ ಮಂಗಳವಾರ ಪ್ರದಾನ ಮಾಡಲಾಯಿತು. 12ನೇ ಶತಮಾನದ ಬಸವಣ್ಣನವರ ಆಶಯಕ್ಕೆ ಅನುಗುಣವಾಗಿ ಸಾಮಾಜಿಕ ಸೇವೆ ಸಲ್ಲಿಸಿದವರಿಗೆ ಬಸವಶ್ರೀ ಪ್ರಶಸ್ತಿಯನ್ನು ಮರಣೋತ್ತರವಾಗಿ ಪುನೀತ್ ಪತ್ನಿ, ಗದ್ಗದಿತರಾಗಿಯೇ ಸ್ವೀಕರಿಸಿದರು. ಬಸವ ಜಯಂತಿಯ ಅಂಗವಾಗಿ ಮುರುಘಾ ಮಠದ ಅನುಭವ ಮಂಟಪದಲ್ಲಿ ಸಮಾರಂಭವನ್ನು ಆಯೋಜಿಸಲಾಗಿತ್ತು. ಪ್ರಶಸ್ತಿ ನೀಡುವುದಕ್ಕೂ ಮೊದಲು ಅಶ್ವಿನಿ ಅವರನ್ನು ವೇದಿಕೆಯ ಮುಂಭಾಗದ ಕುರ್ಚಿಯಲ್ಲಿ ಕುಳ್ಳಿರಿಸಲಾಯಿತು.
ಪುನೀತ್ ಅವರ ಜೀವನ, ಸಾಧನೆಗಳನ್ನು ವಾಚನ ಮಾಡಲಾಯಿತು. ಅಲ್ಲಿಯವರೆಗೂ ಮೌನವಾಗಿಯೇ ಕುಳಿತಿದ್ದ ಅಶ್ವಿನಿ ಅವರು ಪುನೀತ್ ಅವರ ಜೀವನದ ಕುರಿತು ವಾಚನ ಮಾಡುವಾಗ ಸಂಪೂರ್ಣ ಗದ್ಗದಿತರಾದರು. ಉಕ್ಕಿಬರುವ ದುಃಖವನ್ನು ಸಾವರಿಸಿಕೊಂಡೇ ಕತ್ತು ಬಗ್ಗಿಸಿ ಕುಳಿತಿದ್ದರು. ನಂತರ ಗಣ್ಯರೆಲ್ಲರೂ ಆಗಮಿಸಿ ಪ್ರಶಸ್ತಿ ಪ್ರದಾನ ಮಾಡಿದರು. ಮುರುಘಾ ಮಠದ ಡಾ. ಶಿವಮೂರ್ತಿ ಮುರುಘಾ ಶರಣರು ಪ್ರಸಸ್ತಿ ಪ್ರದಾನ ಮಾಡಿದರು. ಪ್ರಶಸ್ತಿಯು ₹5 ಲಕ್ಷ ನಾಗದು ಹಾಗು ಪಾರಿತೋಶಕ ಒಳಗೊಂಡಿದೆ.
ಇದನೂ ಓದಿ: ಡಾ. ರಾಜ್ ಕುಟುಂಬದ ಮತ್ತೊಂದು ಕುಡಿ ಎಂಟ್ರಿ: ಯುವ ರಾಜ್‌ಕುಮಾರ್ ಪದಾರ್ಪಣೆ ಘೋಷಣೆ
ನಂತರ ಮಾತನಾಡಿದ ಮುರುಘಾ ಶರಣರು, ʼಕನ್ನಡದ ಪುತ್ರʼ ನಟ ಪುನೀತ ರಾಜಕುಮಾರ. ನಟನೆ ಮತ್ತು ವ್ಯಕ್ತಿತ್ವದ ಮುಲಕ ಆಕಾಶದ ಎತ್ತರಕ್ಕೆ ಬೆಳೆದರು. ಅಭಿನಯ, ಹಾಡುವುದು, ಅಭಿವ್ಯಕ್ತಿಯಲ್ಲಿ ಪುನೀತ್ ಅವರನ್ನು ಮೀರಿಸಲು ಯಾರಿಗೂ ಸಾದ್ಯವಿಲ್ಲ. ರಾಜ್ ಕುಟುಂಬ ಇಡೀ ಕನ್ನಡ ಚಿತ್ರರಂಗವನ್ನೆ ಶ್ರೀಮಂತಗೊಳಿಸಿದೆ ಎಂದು ಹೇಳಿದರು.
ಸಾಹಿತಿ ರಾಜಪ್ಪ ದಳಾಯಿ ಅವರು ಪುನೀತ್ ರಾಜಕುಮಾರ್ ಕುರಿತು ಮಾತನಾಡಿದರು.
ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ, ಕೃಷಿ ಸಚಿವ ಬಿ.ಸಿ. ಪಾಟೀಲ್, ಶಾಸಕ ತಿಪ್ಪಾರೆಡ್ದಿ, ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್, ಚಿತ್ರ ನಿರ್ಮಾಪಕ ಚಿನ್ನೆಗೌಡ, ಖನಿಜ ನಿಗಮ ಅಧ್ಯಕ್ಷ ಎಸ್. ಲಿಂಗಮೂರ್ತಿ, ಜಿಲ್ಲಾಧಿಕಾರಿ ಕವಿತಾ ಎಸ್ .ಮನ್ನಿಕೆರಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕೆ.ಪರಶುರಾಮ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಾಣಧಿಕಾರಿಡಾ| ಕೆ. ನಂದಿನಿ ದೇವಿ ಮತ್ತಿತರರಿದ್ದರು.
ಇದನೂ ಓದಿ | Rajkumar Birthday: ಸೋತಾಗ ಧೈರ್ಯ ತುಂಬುವ ಅಣ್ಣಾವ್ರ 7 ಹಾಡುಗಳು!