Site icon Vistara News

Chitradurga Election Results : ಚಿತ್ರದುರ್ಗದಲ್ಲಿ ಕಾಂಗ್ರೆಸ್‌ನ ಕೆ.ಸಿ ವೀರೇಂದ್ರ ಪಪ್ಪಿ ಜಯಭೇರಿ

chithradurga assembly election winner kc veerendra

#image_title

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಚಿತ್ರದುರ್ಗ ವಿಧಾನಸಭೆ ಕ್ಷೇತ್ರದಲ್ಲಿ ( Chitradurga Election Results) ಕಾಂಗ್ರೆಸ್‌ ಅಭ್ಯರ್ಥಿ ಕೆ.ಸಿ. ವೀರೇಂದ್ರ ಪಪ್ಪಿ ಅವರು 20 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ.

ಬಿಜೆಪಿಯಿಂದ ಹಾಲಿ ಶಾಸಕ ತಿಪ್ಪಾ ರೆಡ್ಡಿ, ಕಾಂಗ್ರೆಸ್‌ನಿಂದ ಕೆ.ಸಿ ವೀರೇಂದ್ರ ಪಪ್ಪಿ ಸ್ಪರ್ಧಿಸಿದ್ದರು. ಜೆಡಿಎಸ್‌ ಸೇರಿರುವ ಮಾಜಿ ವಿಧಾನಪರಿಷತ್‌ ಸದಸ್ಯ ರಘು ಆಚಾರ್‌ ಕೂಡ ಕಣದಲ್ಲಿದ್ದರು.

2018ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಇಲ್ಲಿ ಬಿಜೆಪಿಯ ಜಿ. ಎಚ್.‌ ತಿಪ್ಪಾರೆಡ್ಡಿ ಅವರು 82,896 ಮತ ಗಳಿಸಿ ಗೆಲುವು ದಾಖಲಿಸಿದ್ದರು. ಕಾಂಗ್ರೆಸ್‌ನ ಹನುಮಲಿ ಷಣ್ಮುಖಪ್ಪ 49,014 ಮತ ಗಳಿಸಿ ಸೋಲು ಅನುಭವಿಸಿದ್ದರು. ಗೆಲುವಿನ ಅಂತರ 32,985 ಮತಗಳಾಗಿತ್ತು.

ಕ್ಷೇತ್ರದಲ್ಲಿರುವ ಒಟ್ಟು ಮತಗಳು 246,346 ಪುರುಷರು: 123,095 ಮಹಿಳೆಯರು : 123,211

ಯಾರಿಗೆ ಎಷ್ಟು ಮತ?

ಕೆ ಸಿ ವೀರೇಂದ್ರ ಪಪ್ಪಿ(ಕಾಂಗ್ರೆಸ್‌): 49,020

ಜಿ ಎಚ್‌ ತಿಪ್ಪಾರೆಡ್ಡಿ (ಬಿಜೆಪಿ): 28,693

ರಘು ಆಚಾರ್‌(ಜೆಡಿಎಸ್‌): 2,327

ಜಗದೀಶ್‌(ಆಪ್‌): 584

ನೋಟಾ: 233

ಗೆಲುವಿನ ಅಂತರ: 20,327

Exit mobile version