Site icon Vistara News

Best of Chitradurga : ಚಿತ್ರದುರ್ಗದ ಪ್ರವಾಸವೆಂದರೆ ಈ ಎಲ್ಲ ಸ್ಥಳಗಳನ್ನು ನೋಡಲೇಬೇಕು

chitradurga tourist places

ಚಿತ್ರದುರ್ಗ ಕೋಟೆಯ ನಾಡು. ವೇದಾವತಿ ನದಿ ಕಣಿವೆಯಲ್ಲಿರುವ ಈ ಜಿಲ್ಲೆಯ ಐತಿಹಾಸಿಕ ಮಹತ್ವವನ್ನೂ ಹೊಂದಿರುವ ಜಿಲ್ಲೆ. ಈ ಜಿಲ್ಲೆಯಲ್ಲಿ ಹಲವಾರು ಪ್ರವಾಸಿ ತಾಣಗಳಿದ್ದು(Best of Chitradurga), ಅವು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತವೆ. ಒಂದು ವೇಳೆ ನೀವು ಕೂಡ ಚಿತ್ರದುರ್ಗದ ಪ್ರವಾಸಕ್ಕೆ ಹೋಗಬೇಕೆನ್ನುವ ಯೋಚನೆಯಲ್ಲಿದ್ದರೆ, ನಿಮಗೆಂದೇ ಅಲ್ಲಿನ ಸ್ಥಳಗಳ ಕುರಿತಾಗಿ ಸಂಪೂರ್ಣ ಮಾಹಿತಿಯನ್ನು ನಾವಿಲ್ಲಿ ಕೊಡುತ್ತಿದ್ದೇವೆ.

ಚಿತ್ರದುರ್ಗದ ಪ್ರವಾಸಿ ಸ್ಥಳಗಳು:

ನಾಯಕನಹಟ್ಟಿ ದೇವಸ್ಥಾನ

Adumalleshwara Temple and zoo


ಚಿತ್ರದುರ್ಗದ ಸೌಂದರ್ಯವನ್ನು ಸವಿಯಲು ನಾಯಕನಹಟ್ಟಿ ದೇವಸ್ಥಾನ ಒಂದು ಸೂಕ್ತ ಸ್ಥಳ ಎನ್ನಬಹುದು. ಇಲ್ಲಿ ಪ್ರಸಿದ್ಧ ಋಷಿ ತಿಪ್ಪೇರುದ್ರಸ್ವಾಮಿಯನ್ನು ಪೂಜಿಸಲಾಗುತ್ತದೆ. ಈ ದೇವಾಲಯವು ಚಿತ್ರದುರ್ಗ ನಗರದಿಂದ ಸುಮಾರು 35ಕಿ.ಮೀ. ದೂರದಲ್ಲಿದೆ. ಇದೇ ಸ್ಥಳದಲ್ಲಿ ತಿಪ್ಪೇರುದ್ರಸ್ವಾಮಿ ಅವರ ಸಮಾಧಿಯೂ ಇದೆ ಎಂದು ಹೇಳಲಾಗುತ್ತದೆ.

ದಶರಥ ರಾಮೇಶ್ವರ ದೇವಸ್ಥಾನ

Adumalleshwara Temple and zoo


ದಶರಥ ರಾಮೇಶ್ವರ ದೇವಸ್ಥಾನವನ್ನು ಸ್ಥಳೀಯವಾಗಿ ವರ್ಜ್ರ ದೇವಾಲಯ ಎನ್ನುವ ಹೆಸರಿನಿಂದಲೂ ಕರೆಯಲಾಗುತ್ತದೆ. ದಶರಥ ರಾಜನು ತನ್ನ ಮಗ ಸಂತ ಶ್ರವಣನ ಹತ್ಯೆಗೆ ಪ್ರಾಯಶ್ಚಿತ್ತವಾಗಿ ಈ ದೇವಾಲಯವನ್ನು ನಿರ್ಮಿಸಿದನೆಂದು ಹೇಳಲಾಗುತ್ತದೆ. ದಶರಥ ರಾಜ ಮತ್ತು ಅವನ ಮಗ ರಾಮ ಇಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸಿದರು ಎಂದು ಪುರಾಣ ಹೇಳುತ್ತದೆ.

ಇದನ್ನೂ ಓದಿ: ಹಿಮಾಚಲ ಪ್ರವಾಹದ ಮಧ್ಯೆಯೇ ಆನ್​​ಲೈನ್​ ಮದುವೆ; ವಿಡಿಯೊ ಕಾನ್ಫರೆನ್ಸ್​​ನಲ್ಲೇ ಮುಗಿದ ಶಾಸ್ತ್ರಗಳು

ಹೊಳಲ್ಕೆರೆ

Adumalleshwara Temple and zoo


ಹೊಳಲ್ಕೆರೆಯು ಚಿತ್ರದುರ್ಗದ ತಾಲೂಕಾಗಿದೆ. ಇಲ್ಲಿನ ನಗರದ ಬಳಿಯೇ 9 ಅಡಿ ಎತ್ತರದ ಬಾಲ ಗಣಪತಿಯ ದೇಗುಲವಿದೆ. ಇದಕ್ಕೆ ಜಡೆ ಗಣಪತಿ ಎನ್ನುವ ಹೆಸರೂ ಇದೆ. ಚಿತ್ರದುರ್ಗ ಪಟ್ಟಣದಿಂದ ಈ ದೇಗುಲವು 35 ಕಿ.ಮೀ.ಗಳಷ್ಟು ದೂರದಲ್ಲಿದೆ. ಅದಷ್ಟೇ ಅಲ್ಲದೆ ಇದೇ ನಗರದಲ್ಲಿ 13 ಅಡಿ ಎತ್ತರದ ಶಿವನ ಪ್ರತಿಮೆಯನ್ನೂ ನೀವು ಕಾಣಬಹುದು. ಇಲ್ಲಿ ಆಣೆಕಟ್ಟೂ ಇದ್ದು, ಪ್ರವಾಸಿಗರನ್ನು ಆಕರ್ಷಿಸುವ ನಗರ ಇದಾಗಿದೆ.

ಜೋಗಿಮಟ್ಟಿ

Adumalleshwara Temple and zoo


ಚಿತ್ರದುರ್ಗದ ಸಮೀಪದಲ್ಲಿಯೇ ನೀವು ಜೋಗಿಮಟ್ಟಿ ಅರಣ್ಯ ಪ್ರದೇಶವನ್ನು ಕಾಣಬಹುದು. ಇಲ್ಲಿ ಅನೇಕ ರೀತಿಯ ಜೀವವೈವಿಧ್ಯಗಳಿವೆ. ಇಲ್ಲಿನ ಹಿಮವತ್ಕೇದ್ರಾ ಜಲಪಾತ ನಿಮ್ಮ ಕಣ್ಣುಗಳನ್ನು ಇನ್ನಷ್ಟು ತಂಪಾಗಿಸುತ್ತದೆ. ಜಲಪಾತದ ಸಮೀಪವಿರುವ ಗುಹೆಯಲ್ಲಿ ಶಿವಲಿಂಗ ಮತ್ತು ಬಸವಣ್ಣ ಮತ್ತು ವೀರಭದ್ರನ ಮೂರ್ತಿಗದ್ದು, ಇದು ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ. ಈ ಅರಣ್ಯ ಪ್ರದೇಶದಲ್ಲಿ ನೀವು ವಿವಿಧ ಜಾರಿಯ ವನ್ಯಜೀವಿಗಳನ್ನೂ ನೋಡಬಹುದಾಗಿದೆ.

ಇದನ್ನೂ ಓದಿ: Sakleshpur Places To Visit : ಸ್ವರ್ಗದಂತಹ ಸಕಲೇಶಪುರದಲ್ಲಿ ಈ ಸ್ಥಳಗಳನ್ನು ಮಿಸ್‌ ಮಾಡಲೇಬಾರದು

ಹಾಲು ರಾಮೇಶ್ವರ ದೇವಸ್ಥಾನ

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನಲ್ಲಿ ಹಾಲು ರಾಮೇಶ್ವರನ ದೇವಾಲಯವಿದೆ. ಈ ದೇವಾಲಯದಲ್ಲಿ ಶ್ರೀ ರಾಮನ ಶಿವನನ್ನು ಪೂಜಿಸುತ್ತಿದ್ದ ಎಂದು ಹೇಳಲಾಗುತ್ತದೆ. ಹಾಗಾಗಿ ಇದು ರಾಮನ ಭಕ್ತರ ಜತೆ ಶಿವನ ಭಕ್ತರನ್ನೂ ಸೆಳೆಯುವ ಸ್ಥಳವಾಗಿದೆ. ದೇವಾಲಯದ ಸುತ್ತಲಿನ ಪ್ರದೇಶ ಪ್ರಶಾಂತವಾಗಿದ್ದು, ನೀವಿಲ್ಲಿ ಶಾಂತಿಯುತವಾದ ಸಮಯವನ್ನು ಕಳೆಯಬಹುದು.

ಜಾಮಿಯಾ ಮಸೀದಿ

Adumalleshwara Temple and zoo


ಹಿಂದೂ ದೇಗುಲಗಳಂತೆ ಇಲ್ಲಿ ಮುಸ್ಲಿಮರಿಗೆ ಸಂಬಂಧಪಟ್ಟ ಅನೇಕ ಮಸೀದಿಗಳೂ ಇವೆ. ಅದರಲ್ಲಿ ಅತ್ಯಂತ ಪ್ರಮುಖವಾಗಿರುವುದು ಜಾಮಿಯಾ ಮಸೀದಿ. ಇದನ್ನು ಜಾಮಾ ಮಸೀದಿ, ಸುಲ್ತಾನ್‌-ಎ-ಜಾಮಾ ಮಸೀದಿ ಎಂದೂ ಕರೆಯಲಾಗುತ್ತದೆ. ಈ ಮಸೀದಿಯನ್ನು ಇಂಡೋ-ಸರಸೆನ್‌ ವಿನ್ಯಾಸದಲ್ಲಿ ನಿರ್ಮಾಣ ಮಾಡಲಾಗಿದೆ. ಮಸೀದಿಯ ಒಳಗೆ 13 ಸಾಲುಗಳಿದ್ದು, ಪ್ರತಿ ಸಾಲಿನಲ್ಲಿ 50 ಮಂದಿ ಕೂರುವುದಕ್ಕೆ ಸ್ಥಳಾವಕಾಶವಿದೆ.

ಮೊಳಕಾಲ್ಮೂರು

Adumalleshwara Temple and zoo


ಕರ್ನಾಟಕದಲ್ಲಿ ಹಲವಾರು ವಿಧದ ಬಟ್ಟೆ ತಯಾರಿಸಲಾಗುತ್ತದೆ. ಅದರಲ್ಲಿ ಮೊಳಕಾಲ್ಮೂರಿನ ಸೀರೆಯೂ ಒಂದು. ಮೊಳಕಾಲ್ಮೂರು ಚಿತ್ರದುರ್ಗ ಜಿಲ್ಲೆಯ ಪಂಚಾಯತ್‌ ಪಟ್ಟಣವಾಗಿದೆ. ಇಲ್ಲಿ ಸಾಂಪ್ರಾದಾಯಿಕವಾಗಿ ರೇಷ್ಮೆ ಸೀರೆಗಳನ್ನು ತಯಾರಿಸಲಾಗುತ್ತದೆ. ನೀವು ಈ ಗ್ರಾಮಕ್ಕೆ ಭೇಟಿ ನೀಡಿದರೆ, ಸೀರೆ ನೇಯ್ಗೆ ಮಾಡುವುದನ್ನು ನೋಡುವುದರ ಜತೆ ಅದನ್ನು ಕೊಂಡುಕೊಳ್ಳಬಹುದು ಕೂಡ. ಇಲ್ಲಿ ನುಂಕೆಮಲೆ ಸಿದ್ದೇಶ್ವರ ದೇವಸ್ಥಾನವಿದ್ದು, ಅದು ಕೂಡ ಜನಪ್ರಿಯವಾಗಿದೆ.

ಇದನ್ನೂ ಓದಿ: Top 8 Richest States: ದೇಶದ ಟಾಪ್ 8 ಶ್ರೀಮಂತ ರಾಜ್ಯಗಳು! ಕರ್ನಾಟಕಕ್ಕೆ ಯಾವ ಸ್ಥಾನ?

ಹಿರಿಯೂರು

Adumalleshwara Temple and zoo


ಹಿರಿಯೂರು ತಾಲೂಕಾಗಿದ್ದು, ಇಲ್ಲಿ NH4 ಹಾದು ಹೋಗುತ್ತದೆ. ಈ ನಗರದಲ್ಲಿ ಕರ್ನಾಟಕದ ಅತ್ಯಂತ ಹಳೆಯ ಅಣೆಕಟ್ಟಿದೆ. ವೇದಾವತಿ ನದಿಯ ಮೇಲೆ ಮಾರಿ ಕಣಿವೆ(ವಾಣಿ ವಿಲಾಸ ಸಾಗರ ಎಂದೂ ಕರೆಯಲಾಗುತ್ತದೆ) ಹೆಸರಿನ ಅಣೆಕಟ್ಟನ್ನು ನಿರ್ಮಿಸಲಾಗಿದೆ. ಇಲ್ಲಿಗೆ ಬಂದರು ನೀವು ಅಣೆಕಟ್ಟಿನ ಸೌಂದರ್ಯವನ್ನು ಕಣ್ತುಂಬಿಸಿಕೊಳ್ಳಬಹುದು.

ಚಂದ್ರವಳ್ಳಿ

Adumalleshwara Temple and zoo


ಚಿತ್ರದುರ್ಗದ ಬೆಟ್ಟ, ಚೋಳಗುಡ್ಡ ಮತ್ತು ಕಿರಬನಕಲ್ಲು ಬೆಟ್ಟಗಳು ಸೇರಿಕೊಂಡು ಚಂದ್ರವಳ್ಳಿ ಕಣಿವೆಯನ್ನು ರೂಪಿಸುತ್ತದೆ. ಇಲ್ಲಿ ಪುರಾತತ್ತ್ವ ಶಾಸ್ತ್ರದ ಉತ್ಖನನ ಕ್ರಿಯೆ ನಡೆಸಲಾಗಿದೆ. ಈ ಸ್ಥಳದಲ್ಲಿ ಹೊಯ್ಸಳ, ಶಾತವಾಹನ ಮತ್ತು ವಿಜಯನಗರ ಸಾಮ್ರಾಜ್ಯಗಳ ಮಣ್ಣಿನ ಪಾತ್ರೆಗಳು, ನಾಣ್ಯಗಳು ಮತ್ತು ಬಣ್ಣದ ಬಟ್ಟಲುಗಳು ಸಿಕ್ಕಿರುವ ದಾಖಲೆಗಳಿವೆ. ಈ ಸ್ಥಳವನ್ನು ನೀವು ಕಣ್ತುಂಬಿಸಿಕೊಳ್ಳಬಹುದು.

ಚಿತ್ರದುರ್ಗ ಕೋಟೆ

Adumalleshwara Temple and zoo


ಚಿತ್ರದುರ್ಗದ ಕೋಟೆಯು ಸುಂದರ ಇತಿಹಾಸವನ್ನು ಹೊಂದಿರುವ ಕೋಟೆಯಾಗಿದೆ. ಚಾಲುಕ್ಯರು, ಹೊಯ್ಸಳರು, ನಾಯಕರು ಮತ್ತು ರಾಷ್ಟ್ರಕೂಟರು, ಆ ಸಮಯದಲ್ಲಿ ಆಳ್ವಿಕೆ ನಡೆಸುತ್ತಿದ್ದ ನಾಲ್ಕು ರಾಜವಂಶಗಳು 17 ಮತ್ತು 18 ನೇ ಶತಮಾನಗಳಲ್ಲಿ ಈ ಕಲ್ಲಿನ ಕೋಟೆಯನ್ನು ನಿರ್ಮಿಸಿದರು. ಇದು ಚಿತ್ರದುರ್ಗದ ಅತ್ಯಂತ ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಚಿತ್ರದುರ್ಗ ಬಂದವರು ಈ ಕಲ್ಲಿನ ಕೋಟೆಗೆ ಭೇಟಿ ನೀಡಿಯೇ ನೀಡುತ್ತಾರೆ.

ಇದನ್ನೂ ಓದಿ: Best places to visit in Mandya : ಮಂಡ್ಯದ ಸುತ್ತಮುತ್ತ ನೋಡಲೇಬೇಕಾದ ಸ್ಥಳಗಳಿವು

ಆಡುಮಲ್ಲೇಶ್ವರ ದೇವಸ್ಥಾನ

Adumalleshwara Temple and zoo


ಚಿತ್ರದುರ್ಗದ ಇನ್ನೊಂದು ಪ್ರಸಿದ್ಧ ದೇವಸ್ಥಾನವೆಂದರೆ ಅದು ಆಡುಮಲ್ಲೇಶ್ವರ ಸ್ವಾಮಿ ದೇವಸ್ಥಾನ. ಈ ದೇವಸ್ಥಾನವು ಚಿತ್ರದುರ್ಗದ ಕೋಟೆಯಿಂದ ಸುಮಾರು ಐದು ಕಿಲೋಮೀಟರ್‌ ದೂರದಲ್ಲಿದೆ. ಇಲ್ಲಿ ಶಿವ ದೇವರನ್ನು ಆಡುಮಲ್ಲೇಶ್ವರನ ರೂಪದಲ್ಲಿ ಪೂಜಿಸಲಾಗುತ್ತದೆ. ಈ ದೇವಸ್ಥಾನಕ್ಕೆ ರಸ್ತೆ ಮೂಲಕವಾದರೂ ಹೋಗಬಹುದು ಅಥವಾ ಕಾಲುದಾರಿಯಲ್ಲಿ ನಡೆದುಕೊಂಡೂ ಹೋಗಬಹುದಾಗಿದೆ. ದೇವಸ್ಥಾನಕ್ಕೆ ತೆರಳುವ ದಾರಿ ಸುಂದರವಾಗಿದ್ದು, ಸುತ್ತಲಿನ ಬೆಟ್ಟಗಳ ಸೌಂದರ್ಯವನ್ನು ಸವಿಯುತ್ತಾ ಸಾಗಬಹುದಾಗಿದೆ. ಇದಲ್ಲದೆ ಹಲವು ದೇವಾಲಯಗಳು ಜಿಲ್ಲೆಯಲ್ಲಿವೆ.

FAQ

ಚಿತ್ರದುರ್ಗ ಏಕೆ ಪ್ರಸಿದ್ಧವಾಗಿದೆ?

ಚಿತ್ರದುರ್ಗ ಕರ್ನಾಟಕದ ಪ್ರಮುಖ ಪ್ರವಾಸಿ ಕೇಂದ್ರವಾಗಿದೆ. ಕಲ್ಲಿನ ಕೋಟೆಗೆ ಖ್ಯಾತಿ ಗಳಿಸಿದೆ.

ಚಿತ್ರದುರ್ಗದ ಪ್ರಸಿದ್ಧ ಹೆಸರೇನು?

ಚಿತ್ರದುರ್ಗದ ಪ್ರಸಿದ್ಧ ನಗರವು ಕಲ್ಲಿನ ಕೋಟೆ ಎಂದೂ ಹೆಸರುವಾಸಿಯಾಗಿದೆ.

Exit mobile version