Site icon Vistara News

ಮಲ್ಲಾಡಿಹಳ್ಳಿ ಕಾಲೇಜು ಹಳೆಯ ವಿದ್ಯಾರ್ಥಿಗಳಿಂದ ಗುರುವಂದನೆ: 35 ವರ್ಷದ ಹಿಂದಿನ ಶಿಕ್ಷಣಾರ್ಥಿಗಳ ಸಮ್ಮಿಲನ

ಬೆಂಗಳೂರು: ಶಿಕ್ಷಣ ನೀಡಿದ ಗುರುಗಳನ್ನು ಎಂದಿಗೂ ಮರೆಯಬಾರದು ಎನ್ನುವುದನ್ನು ಪಾಲಿಸುತ್ತಿರುವ ಮೂವತ್ತೈದು ವರ್ಷದ ಹಿಂದಿನ ವಿದ್ಯಾರ್ಥಿಗಳ ಗುಂಪು, ಅಂದಿನ ಗುರುಗಳ ಬಳಿಗೆ ಸಾಗಿ ವಂದನೆ ಸಲ್ಲಿಸಿದೆ.

ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ಮಲ್ಲಾಡಿಹಳ್ಳಿಯಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಅಪಾರ ಸೇವಾ ಚಟುವಟಿಕೆಗಳು ಸಾಗುತ್ತಿವೆ. ಅನಾಥ ಸೇವಾಶ್ರಮದ ಅದೀನದಲ್ಲಿನ ʼಸರ್ವ ಸೇವಾ ಬೋಧಕ ಶಿಕ್ಷಣಾಲಯ (ಎಸ್‌ಎಸ್‌ಬಿಎಸ್‌) TCH Collegeನಿಂದ ಅನೇಕ ಉತ್ತಮ ಶಿಕ್ಷಕರನ್ನು ರೂಪಿಸಲಾಗಿದೆ.

ಉತ್ತಮ ಶಿಕ್ಷಣ ಸೇವೆ ಹಾಗೂ ಸಂಸ್ಕಾರ ಕಲಿಸುವ ಕೇಂದ್ರವಾಗಿದ್ದ ವಿದ್ಯಾಲಯದಲ್ಲಿ ಅಧೀಕ್ಷಕರಾಗಿದ್ದವರು ಬಿ.ಎಸ್‌. ವತ್ಸನ್‌ ಅವರು. ಈಗ 90 ವರ್ಷದವರಾದ ವತ್ಸನ್‌ ಅವರು ಬೆಂಗಳೂರಿನ ಬನಶಂಕರಿಯಲ್ಲಿ ವಾಸವಿದ್ದಾರೆ. ವತ್ಸನ್‌ ಅವರಿಂದ ಶಿಕ್ಷಣ ಕಲಿತ ಶಿಕ್ಷಣಾರ್ಥಿಗಳು ಇತ್ತೀಚೆಗೆ ಒಟ್ಟಾಗಿ ಸೇರಿ ಗುರುವಂದನೆ ಸಲ್ಲಿಸಿದರು.

1983-87ನೇ ಬ್ಯಾಚ್ ಪ್ರಶಿಕ್ಷಣಾರ್ಥಿಗಳು ವತ್ಸನ್ ಅವರಿಗೆ ಗುರುವಂದನೆ ಸಲ್ಲಿಸಿ ಅವರ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ತಮ್ಮ ಜೀವನ ವೃತ್ತಾಂತವನ್ನು ವತ್ಸನ್‌ ಅವರು ನೆನೆದರು. ಗೋಕರ್ಣದಲ್ಲಿ ಶಿಕ್ಷಕನಾಗಿ ಕೆಲಸಕ್ಕೆ ಸೇರಿದ್ದು, ನಂತರ ಅಲ್ಲಿ ಸಮಾಧಾನವಾಗದೆ ಮೈಸೂರಿಗೆ ವಾಪಸಾದದ್ದು, ಹಾಸನದಲ್ಲಿ ತಿಪ್ಪೇಸ್ವಾಮಿ ಎಂಬ ಡಿಸಿಯವರ ಸಲಹೆ ಮೇರೆಗೆ ಮತ್ತೊಂದು ಕೆಲಸಕ್ಕೆ ಸೇರಿದ್ದು, ಅದನ್ನೂ ತ್ಯಜಿಸಿದ್ದ ಸಂದರ್ಭದಲ್ಲಿ ರಾಘವೇಂದ್ರ ಸ್ವಾಮಿಗಳ ಭೇಟಿಯಾಗಿ ಮಲ್ಲಾಡಿಹಳ್ಳಿಗೆ ಆಗಮಿಸಿದ್ದನ್ನು ಸ್ಮರಿಸಿದರು.

ಇದನ್ನೂ ಓದಿ | ರಾಜ ಮಾರ್ಗ ಅಂಕಣ |ಮೌಲ್ಯಗಳನ್ನು ಬೋಧನೆ ಮಾಡದೆ ಅವುಗಳನ್ನೇ ಬದುಕಿದ ಮಹಾ ಗುರು ಪ್ರೊ. ಎಚ್.‌ ನರಸಿಂಹಯ್ಯ

Exit mobile version