Site icon Vistara News

Karnataka Election 2023: ಹಿರಿಯೂರಿನಲ್ಲಿ ಸ್ಥಳೀಯರಾದ ಜೆಡಿಎಸ್ ಅಭ್ಯರ್ಥಿಯನ್ನು ಬೆಂಬಲಿಸಲು ಮನವಿ ಮಾಡಿದ ಡಿ. ಯಶೋಧರ

#image_title

ಹಿರಿಯೂರು : ಸ್ಥಳೀಯ ಜೆಡಿಎಸ್ ಅಭ್ಯರ್ಥಿಯನ್ನು ಬೆಂಬಲಿಸಿ ಕ್ಷೇತ್ರದ (Karnataka Election 2023) ಅಭಿವೃದ್ಧಿಗೆ ಸಹಕರಿಸಿ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ಯಶೋಧರ ಹೇಳಿದರು. ಅವಧಾನಿ ನಗರದಲ್ಲಿರುವ ಜೆಡಿಎಸ್ ಪಕ್ಷದ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ವಾರ್ಡ್‌ಗಳ ಪ್ರಮುಖ ಮುಖಂಡರ ಚುನಾವಣೆಯ ಪೂರ್ವ ಸಿದ್ಧತಾ ಸಭೆಯಲ್ಲಿ ಭಾಗವಹಿಸಿದ ಅವರು ಈ ಮಾತುಗಳನ್ನಾಡಿದರು.

ಇದನ್ನೂ ಓದಿ: Karnataka Election 2023: ಚುನಾವಣೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ: ಹಿರಿಯೂರು ತಹಸೀಲ್ದಾರ್ ಪ್ರಶಾಂತ್
“ಮೇ 10ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆ ಬಹಳ ಮಹತ್ವ ಪೂರ್ಣವಾದ ಚುನಾವಣೆಯಾಗಿದೆ. ರಾಷ್ಟ್ರೀಯ ಪಕ್ಷದ ಅಭ್ಯರ್ಥಿಗಳು ಈಗಾಗಲೇ ಒಬ್ಬರು ಎರಡು ಬಾರಿ, ಮತ್ತೊಬ್ಬರು ಒಂದು ಬಾರಿ ಆಯ್ಕೆಯಾಗಿದ್ದಾರೆ. ಇವರ ಆಡಳಿತವನ್ನು ನೋಡಿ, ಬೇಸತ್ತಿರುವ ಇಲ್ಲಿನ ಮತದಾರರು ಈ ಬಾರಿ ಈ ನೆಲದ ಸೊಗಡಿನ ಅಭ್ಯರ್ಥಿ ಎಂ. ರವೀಂದ್ರಪ್ಪ ಅವರಿಗೆ ಭಾರಿ ಬಹುಮತಗಳ ಅಂತರದಿಂದ ಗೆಲ್ಲಿಸುತ್ತಾರೆ ಎಂಬ ವಿಶ್ವಾಸ ನನಗಿದೆ” ಎಂದು ತಿಳಿಸಿದರು.

“ಈಗಾಗಲೇ ಚುನಾವಣೆಯ ಕಾರ್ಯತಂತ್ರದ ಬಗ್ಗೆ ವಾರ್ಡ್‌ಗಳ ಪ್ರಮುಖ ಮುಖಂಡರೊಂದಿಗೆ ಸುದೀರ್ಘವಾಗಿ ಸಮಾಲೋಚನೆ ನಡೆಸಲಾಗಿದೆ. ಪ್ರಮುಖರು ಕೊಟ್ಟಂತ ಸಲಹೆಗಳನ್ನು ಸ್ವೀಕರಿಸಲಾಗಿದೆ. ಒಂದು ವ್ಯವಸ್ಥಿತವಾದ ಪ್ರಚಾರವನ್ನು ರೂಪಿಸುವ ಮೂಲಕ ನಾವು ಈ ಕ್ಷೇತ್ರದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳಿಗಿಂತ ಹೆಚ್ಚು ಮತ ಪಡೆದುಕೊಳ್ಳಲಿದ್ದೇವೆ” ಎಂದು ತಿಳಿಸಿದರು.

ಇದನ್ನೂ ಓದಿ: Hiriyuru News: ಹಿರಿಯೂರು ಬಿಜೆಪಿ ಶಾಸಕಿಗೆ ಬಿಗ್ ಶಾಕ್; ಪಕ್ಷ ತೊರೆದು ಕೈ ಹಿಡಿಯಲಾರಂಭಿಸಿದ ಆಪ್ತರು!

ಈ ಸಂದರ್ಭದಲ್ಲಿ ರಾಜ್ಯ ಜೆಡಿಎಸ್ ಕಾರ್ಯದರ್ಶಿ ಶಿವಶಂಕರ್, ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ ಕೆ.ಮಂಜುನಾಥ್,‌ ತಾಲೂಕು ಅಧ್ಯಕ್ಷ ಹನುಮಂತರಾಯ, ಎಂ.ಡಿ ರಮೇಶ್, ಲಕ್ಷ್ಮಣ್, ಫಾರೂಕ್, ಕೇಶವಮೂರ್ತಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Exit mobile version