ಚಿತ್ರದುರ್ಗ: ಮುರುಘಾ ಶಿವಮೂರ್ತಿ ಶರಣರ ನ್ಯಾಯಾಂಗ ಬಂಧನ ಅವಧಿ ಇಂದು ಅಂತ್ಯವಾಗಲಿದ್ದು, ವಿಡಿಯೋ ಕಾನ್ಫರೆನ್ಸ್ ಮೂಲಕ ಮುರುಘಾ ಶ್ರೀಗಳನ್ನು ಕೋರ್ಟ್‌ಗೆ ಹಾಜರುಪಡಿಸಲಾಗುತ್ತಿದೆ. ಮುರುಘಾ ಪೀಠಾಧ್ಯಕ್ಷತೆ ಕುರಿತು ಕೂಡ ಇಂದು ಇತ್ಯರ್ಥವಾಗಲಿದೆ.
A1 ಮುರುಘಾಶ್ರೀ, ಎ2 ವಾರ್ಡನ್ ರಶ್ಮಿ, ಎ4 ಮಠದ ಮ್ಯಾನೇಜರ್ ಪರಮಶಿವಯ್ಯರ ನ್ಯಾಯಾಂಗ ಬಂಧನ ಅವಧಿ ಇಂದು ಅಂತ್ಯವಾಗಲಿದೆ. ನ್ಯಾಯಾಂಗ ಬಂಧನ ಅವಧಿಯನ್ನು ಕೋರ್ಟ್ ವಿಸ್ತರಿಸಲಿದೆ. ಇದರ ಜತೆಗೆ, ಧಾರ್ಮಿಕ ಕೇಂದ್ರ ದುರ್ಬಳಕೆ -1988 ಕಾಯಿದೆಯಡಿ ಶ್ರೀಗಳ ಮೇಲೆ ಕೇಸ್ ದಾಖಲಿಸಲಾಗಿದೆ. ಚಾರ್ಜ್ ಶೀಟ್‌ನಲ್ಲಿ ಧಾರ್ಮಿಕ ಕೇಂದ್ರ ದುರ್ಬಳಕೆ ಕಾಯಿದೆ ಅಳವಡಿಸಲಾಗಿದೆ. ಪೀಠಾದ್ಯಕ್ಷ ಸ್ಥಾನದಿಂದ ಮುರುಘಾ ಶ್ರೀಗಳನ್ನು ವಜಾಗೊಳಿಸುವಂತೆ ಸರ್ಕಾರಿ ವಕೀಲರಾದ ನಾಗವೇಣಿ ಅವರಿಂದ ವಾದ ಮಂಡನೆಯಾಗಿದೆ.
ಡಿಸೆಂಬರ್ 7ರಂದು ಈ ಬಗ್ಗೆ ಅವರು ವಾದ ಮಂಡಿಸಿದ್ದು, ಇಂದು ಈ ಬಗ್ಗೆ ಕೋರ್ಟ್ ವಿಚಾರಣೆ ನಡೆಸಲಿದೆ. 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಬಿ.ಕೆ. ಕೋಮಲಾ ವಿಚಾರಣೆ ಆಲಿಸಿ ಆದೇಶ ನೀಡಲಿದ್ದು, ಮುರುಘಾ ಶ್ರೀಗಳ ಪೀಠಾಧ್ಯಕ್ಷತೆಯ ಭವಿಷ್ಯದ ಕುರಿತು ಮಹತ್ವದ ಆದೇಶ ಹೊರಬೀಳುವ ಸಾಧ್ಯತೆ ಇದೆ.
ಇದನ್ನೂ ಓದಿ | Murugha Seer | ಮುರುಘಾ ಮಠಕ್ಕೆ ಆಡಳಿತಾಧಿಕಾರಿಯಾಗಿ ಪಿ.ಎಸ್. ವಸ್ತ್ರದ್ ನೇಮಕ